ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |2 JANUARY 2023
ಶಿವಮೊಗ್ಗ : ಹೊಸ ವರ್ಷದ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ (tourist spot) ಜನ ಸಾಗರವೆ ಸೇರಿತ್ತು. ವೀಕೆಂಡ್ ಹೊತ್ತಲ್ಲೆ ನ್ಯೂ ಇಯರ್ ಆಚರಣೆ ಇದ್ದಿದ್ದರಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಭಾರಿ ಸಂಖ್ಯೆಯ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸಿದ್ದರು.
ವರ್ಷದ ಮೊದಲ ದಿನ ತೀರ್ಥ ಕ್ಷೇತ್ರ ದರ್ಶನಕ್ಕೆಂದು ಹಲವರು ಆಗಮಿಸಿದ್ದರು. ಮೊದಲ ದಿನ ರಮಣೀಯ ತಾಣಗಳನ್ನು (tourist spot) ಕಣ್ತುಂಬಿಕೊಂಡು ಖುಷಿ ಪಡೋಣ ಅಂದುಕೊಂಡು ಬಂದವರ ವರ್ಗವು ಇತ್ತು.
ಜನಸಾಗರವಿದ್ದ ಟಾಪ್ 3 ತಾಣಗಳು
ಟಾಪ್ 1 : ಜೋಗ ಜಲಪಾತ
ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತಕ್ಕೆ ಜನ ಸಾಗರವೆ ಹರಿದು ಬಂದಿತ್ತು. ಹೊಸ ವರ್ಷದ ಮುನ್ನಾ ದಿನ ಜೋಗ ಸಮೀಪ ರೆಸಾರ್ಟ್, ಹೊಟೇಲ್ ಗಳಲ್ಲಿ ತಂಗಿದ್ದ ಪ್ರವಾಸಿಗರು ತಂಗಿದ್ದರು. ಭಾನುವಾರ ಜೋಗ ಜಲಪಾತಕ್ಕೆ ದಾಂಗುಡಿ ಇಟ್ಟಿದ್ದರು. ವಿದೇಶದಿಂದಲು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಆಗಮಿಸಿದ್ದರು.
ಟಾಪ್ 2 : ಸಿಗಂದೂರು ದೇವಿ ದರ್ಶನ
ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ದರ್ಶನಕ್ಕೆ ದೊಡ್ಡ ಸಂಖ್ಯೆಯ ಭಕ್ತರು ಆಗಮಿಸಿದ್ದರು. ವರ್ಷದ ಮೊದಲ ದಿನ ಮತ್ತು ಭಾನುವಾರ ಆದ್ದರಿಂದ ಭಕ್ತ ಸಾಗರವೆ ಹರಿದು ಬಂದಿತ್ತು. ಬೆಳಗ್ಗೆ 4 ಗಂಟೆಯಿಂದಲೆ ಭಕ್ತರು ದೇವಸ್ಥಾನಕ್ಕೆ ಆಗಮಿಸಿದರು. ಶರಾವತಿ ಹಿನ್ನೀರಿನ ಲಾಂಚ್ ನಲ್ಲಿ ತೆರಳಿ ಜನರು ಖುಷಿ ಪಟ್ಟರು. ಹಾಗೆ ಸಿಗಂದೂರಿನಲ್ಲಿ ಶ್ರೀ ಚೌಡೇಶ್ವರಿ ದೇವಿಯ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು.
ಟಾಪ್ 3 : ಹುಲಿ, ಸಿಂಹಧಾಮ
ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮಕ್ಕು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಕಾಡಿನ ನಡುವೆ ಇರುವ ಸಫಾರಿ, ವಿವಿಧ ಬಗೆಯ ಪ್ರಾಣಿ, ಪಕ್ಷಿಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಭೇಟಿ ನೀಡಿದ್ದರು. ಹೊಸ ವರ್ಷದ ಮೊದಲ ದಿನ ಹುಲಿ ಮತ್ತು ಸಿಂಹಧಾಮಕ್ಕೆ 5,200 ಪ್ರವಾಸಿಗರ ಆಗಮಿಸಿದ್ದರು. ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲೂ ಹುಲಿ ಮತ್ತು ಸಿಂಹಧಾಮಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422