ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 9 MAY 2021
ಲಾಕ್ ಡೌನ್ ಮುನ್ನಾ ದಿನ ಶಿವಮೊಗ್ಗ ನಗರದಲ್ಲಿ ಅಗತ್ಯ ವಸ್ತುಗಳು, ಮೀನು, ಮಾಂಸ ಖರೀದಿಯ ಭರಾಟ ಜೋರಿದೆ. ಶಿವಮೊಗ್ಗ ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದೆ.
ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?
ಜೈಲ್ ರೋಡ್ : ಚಿಕನ್ ಮತ್ತು ಮಟನ್ ಶಾಪ್‍ಗಳು ಹೆಚ್ಚಿವೆ. ಪ್ರತಿ ಅಂಗಡಿಯ ಮುಂದೆ ಜನರು ಕ್ಯೂನ್‍ನಲ್ಲಿ ನಿಂತಿದ್ದಾರೆ. ಖರೀದಿಗೆ ಬಂದವರಿಂದ ವಾಹನ ಪಾರ್ಕಿಂಗ್‍ಗೆ ಸಮಸ್ಯೆ. ಇದರಿಂದ ಜೈಲ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರ ಹರಸಾಹಸ.
ಬಿ.ಹೆಚ್.ರಸ್ತೆ : ಗಾಂಧಿ ಬಜಾರ್, ಮೀನು ಮಾರುಕಟ್ಟೆಯಿಂದ ಬರುವವರು ಬಿ.ಹೆಚ್.ರಸ್ತೆ ಮೂಲಕ ಸಂಚರಿಸಬೇಕಿದೆ. ಆದ್ದರಿಂದ ಈ ರಸ್ತೆಯಲ್ಲಿ ಜನ ಮತ್ತು ವಾಹನ ದಟ್ಟಣೆ ಹೆಚ್ಚಾಗಿದೆ.
ದುರ್ಗಿಗುಡಿ, ಕುವೆಂಪು ರಸ್ತೆ : ಇಲ್ಲಿಯೂ ವಾಹನ ದಟ್ಟಣೆ ಹೆಚ್ಚಿದೆ. ವಿವಿಧೆಡೆಯಿಂದ ಮನೆಗಳಿಗೆ ತೆರಳುವವರು ಈ ಮಾರ್ಗದಲ್ಲಿ ಸಂಚಿರುಸುತ್ತಿರುವುದರಿಂದ, ಟ್ರಾಫಿಕ್ ಇದೆ.
ಇದನ್ನೂ ಓದಿ : ಲಾಕ್ ಡೌನ್ ಮುನ್ನಾ ದಿನ ಇಲ್ಲಿ ಕಾಲಿಡೋಕು ಜಾಗವಿಲ್ಲ, ಕರೋನ ಆತಂಕ ಲೆಕ್ಕಕಿಲ್ಲ
ವಿನೋಬನಗರ : ಅಗತ್ಯ ವಸ್ತುಗಳ ಖರೀದಿ ಮತ್ತು ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಹೆಚ್ಚು ಜನರು ಬರುತ್ತಿರುವುದರಿಂದ ವಾಹನ ಮತ್ತು ಜನದಟ್ಟಣೆ ಹೆಚ್ಚಿದೆ.
ನಾಳೆಯಿಂದ ಲಾಕ್ ಡೌನ್ ಆಗಲಿದೆ. ಟಫ್ ರೂಲ್ಸ್ ಜಾರಿಯಾಗಲಿದೆ. ಈ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುತ್ತದೆಯೋ ಇಲ್ಲವೋ ಅನ್ನುವ ಕಾರಣಕ್ಕೆ ಜರನು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದಾರೆ. ಇನ್ನು ಭಾನುವಾರವಾದ್ದರಿಂದ ಮೀನು, ಮಾಂಸ ಖರೀದಿಗೂ ಜನರು ಮುಗಿಬಿದ್ದಿದ್ದಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422