ಶಿವಮೊಗ್ಗ ಜಿಲ್ಲೆಯಲ್ಲಿ 15 ಮದ್ಯದಂಗಡಿ ಇ-ಹರಾಜು, ಬಿಡ್‌ದಾರರಿಗೆ ತರಬೇತಿ, ಎಲ್ಲಿ? ಯಾಕೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

ಶಿವಮೊಗ್ಗ: ಅಬಕಾರಿ ಇಲಾಖೆಯ ಖಾಲಿ ಹಾಗೂ ಲಭ್ಯವಿರುವ ಮದ್ಯದ ಸನ್ನದುಗಳ (ಸಿಎಲ್-2ಎ ಮತ್ತು ಸಿಎಲ್-9ಎ) ಇ–ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂಭಾವ್ಯ ಬಿಡ್ಡುದಾರರಿಗಾಗಿ ಜುಲೈ 10ರಂದು ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಜಿಲ್ಲೆಗೆ ಒಟ್ಟು 15 ಮದ್ಯದ ಸನ್ನದುಗಳನ್ನು ಇ–ಹರಾಜು ಮಾಡಲು ಹಂಚಿಕೆ ಮಾಡಲಾಗಿದೆ. ಶಿವಮೊಗ್ಗ ವಲಯ-1: 1, ಶಿವಮೊಗ್ಗ ವಲಯ-2: 2, ಭದ್ರಾವತಿ: 3, ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ: ತಲಾ 2, ಶಿಕಾರಿಪುರ: 1 ಸನ್ನದುಗಳಿಗೆ ಹರಾಜು ನಡೆಯಲಿದೆ.

SHIMOGA-NEWS-GRAPHICS-BY-SHIVAMOGGA-LIVE

ಆಸಕ್ತ ಬಿಡ್ಡುದಾರರಿಗೆ ಮಾರ್ಗದರ್ಶನ ನೀಡುವ ಈ ತರಬೇತಿಯು ಜುಲೈ 10ರಂದು ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ನಗರದ ಡಿಸಿ ಕಾಂಪೌಂಡ್‌ನ ಆರ್.ಟಿ.ಒ. ಕಚೇರಿ ರಸ್ತೆಯಲ್ಲಿರುವ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ. ಇ–ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಮತ್ತು ಸಂಶಯಗಳಿಗೆ ಸಾರ್ವಜನಿಕರು ಇಲಾಖೆಯ ಅಧಿಕೃತ ವೆಬ್‌ಸೈಟ್ https://stateexcise.karnataka.gov.in/en ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!