ಗೋಪಿ ಸರ್ಕಲ್‌ ಬಳಿ ರಸ್ತೆಗೆ ಉರುಳಿದ ಮರ, ಅದೃಷ್ಟವಶಾತ್‌ ತಪ್ಪಿದ ಅವಘಡ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ನಗರದ ಗೋಪಿ ವೃತ್ತದ ಬಳಿ ಸವಾರ್‌ಲೈನ್‌ ರಸ್ತೆಯಲ್ಲಿ ಮರವೊಂದು ಹಠಾತ್ ಧರೆಗುರುಳಿದೆ. ಮರ ಬೀಳುವಾಗ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಅದೃಷ್ಟವಶಾತ್ ಅವಘಡ ತಪ್ಪಿದೆ.

ಇಲ್ಲಿನ ಸವಾರ್ ಲೈನ್ ರಸ್ತೆಗೆ ಅಡ್ಡಲಾಗಿ ಈ ಮರ ಬಿದ್ದಿದೆ. ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು. ವಿಷಯ ತಿಳಿದ ಮಹಾನಗರ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಸ್ತೆಗೆ ಬಿದ್ದಿರುವ ಮರವನ್ನು ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.

Tree-Falls-to-Savarline-Road-in-Shimoga-city