ಶಿವಮೊಗ್ಗದಲ್ಲಿ ಗಾಳಿ, ಮಳೆಗೆ ಉರುಳಿದ ಮರ, ವಿನೋಬನಗರದಲ್ಲಿ ವಿದ್ಯುತ್‌ ಕಡಿತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 13 APRIL 2024

SHIMOGA : ನಗರದಲ್ಲಿ ಸಂಜೆ ಸುರಿದ ಗಾಳಿ ಮಳೆಗೆ ಬೃಹತ್‌ ಮರ ಉರುಳಿ ಬಿದ್ದಿದೆ. ಇದರಿಂದಾಗಿ ವಿನೋಬನಗರ ಬಡಾವಣೆಯ ವಿವಿಧೆಡೆ ವಿದ್ಯುತ್‌ ಕಡಿತವಾಗಿದೆ.

ಕೆಂಚಪ್ಪ ಲೇಔಟ್‌ನ ಕೆಎಚ್‌ಬಿ ಕಾಲೋನಿಯಲ್ಲಿ ಬೃಹದಾಕಾರದ ಬೇವಿನ ಮರ ಬಿದ್ದಿದೆ. ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅಲ್ಲದೆ ಮನೆಯೊಂದರ ಕಾಂಪೌಂಡ್, ಬಾಲ್ಕನಿಯ ತಡೆಗೋಡೆ ಸಂಪೂರ್ಣ ಹಾನಿಗೀಡಾಗಿದೆ. ಮರಕ್ಕೆ ಹೊಂದಿಕೊಂಡಿದ್ದ ಉದ್ಯಾನವನದ ಕಬ್ಬಿಣದ ಗ್ರಿಲ್‌ಗೂ ಹಾನಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಕೆಂಚಪ್ಪ ಲೇಔಟ್‌ನಲ್ಲಿ ಮತ್ತೊಂದು ಮರ ಬಿದ್ದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಿಡಿಲಿಗೆ ಎರಡು ದನಗಳು ಸಾವು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment