ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 12 ಜನವರಿ 2020
ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಮರ ಕಡಿಯಲು ಯತ್ನಿಸಿದ್ದ ಅಧಿಕಾರಿಗಳ ವಿರುದ್ಧ ಶಿವಮೊಗ್ಗದಲ್ಲಿ ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಿದರು. ಅಗತ್ಯವಿಲ್ಲದಿದ್ದರೂ ಮರಗಳನ್ನು ಕಡಿಯುತ್ತಿರುವುದಕ್ಕೆ ವಿರೋಧ ವ್ಯಕ್ತವಾಯಿತು.
ಶಿವಮೊಗ್ಗದ ಸಾಗರ ರಸ್ತೆಯ ಪ್ರವಾಸಿ ಮಂದಿರ ಮುಂಭಾಗ ಮರ ಕಡಿಯಲು ನಿರ್ಧರಸಲಾಗಿತ್ತು. ಇವತ್ತು ಬೆಳಗ್ಗೆ ಬೃಹತ್ ಮರವೊಂದರ ರೆಂಬೆ ಕತ್ತರಿಸಲಾಗುತ್ತಿತ್ತು. ಇದನ್ನು ಗಮನಿಸಿದ ಪರಿಸರ ಪ್ರೇಮಿಗಳು ಮರ ಕಡಿಯುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದಿದ್ದಾಗ ದಿಢೀರ್ ಧರಣಿ ನಡೆಸಿದರು.
‘ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಹೇಳದೆ ಕೇಳದೆ ನೂರಕ್ಕೂ ಹೆಚ್ಚು ಮರಗಳನ್ನು ಕಡಿದಿದ್ದಾರೆ. ಇದನ್ನು ವಿರೋಧಿಸಿದ್ದಕ್ಕೆ ಟ್ರೀ ಕಮಿಟಿ ರಚಿಸಲಾಗಿದೆ. ಯಾವುದೇ ಮರ ಕಡಿಯುವ ಅನಿವಾರ್ಯತೆ ಎದುರಾದರೆ ಟ್ರೀ ಕಮಿಟಿ ಜೊತೆಗೆ ಸಭೆ ನಡೆಸಬೇಕು. ಆದರೆ ಸಾಗರ ರಸ್ತೆಯಲ್ಲಿ ಮರ ಕಡಿಯುವ ವಿಚಾರ ಚರ್ಚೆಯೇ ಮಾಡಿಲ್ಲ. ಅಲ್ಲದೆ ಈ ಮರ ಕಡಿಯುವ ಅಗತ್ಯವೇ ಇರದಿದ್ದರು ಕಡಿಯುತ್ತಿದ್ದಾರೆ’ ಎಂದು ಪರಿಸರ ಪ್ರಿಯರು ಆರೋಪಿಸಿದರು.
ಧರಣಿ ಹಿನ್ನೆಲೆ ಮರ ಕಡಿಯುವುದಕ್ಕೆ ಬ್ರೇಕ್ ಬಿದ್ದಿದೆ. ಮಂಗಳವಾರ ಸಭೆ ನಡೆಯಲಿದ್ದು, ಸ್ಥಳ ಪರಿಶೀಲನೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಧರಣಿ ಹಿಂಪಡೆಯಲಾಗಿದೆ.
ಪತ್ರಕರ್ತ ಶಿವಮೊಗ್ಗ ನಂದನ್, ಶಿವಕುಮಾರ್, ಬಾಲಕೃಷ್ಣ ಸೇರಿದಂತೆ ಹಲವರು ಧರಣಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422