ಶಿವಮೊಗ್ಗದಲ್ಲಿ ಇವತ್ತು, ನಾಳೆ ಎರಡು ಜನಪ್ರಿಯ ನಾಟಕಗಳ ಪ್ರದರ್ಶನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA NEWS, 26 OCTOBER 2024 : ಶಿವಮೊಗ್ಗದ ನಮ್‌ ಟೀಮ್‌ ವತಿಯಿಂದ ಅಕ್ಟೋಬರ್‌ 26 ಮತ್ತು 27ರಂದು ಕುವೆಂಪು ರಂಗಮಂದಿರದಲ್ಲಿ ನೀನಾಸಂ ನಾಟಕೋತ್ಸವ (Drama) ಆಯೋಜಿಸಲಾಗಿದೆ. ರಾಜ್ಯಾದ್ಯಂತ ಪ್ರದರ್ಶನ ಕಂಡು ಜನರ ಮೆಚ್ಚುಗೆ ಗಳಿಸಿರುವ ಎರಡು ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಮ್‌ ಟೀಮ್‌ನ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್‌, ಪ್ರತಿ ವರ್ಷದಂತೆ ಈ ಬಾರಿಯು ನೀನಾಸಂ ನಾಟಕೋತ್ಸವ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಅ.26ರಂದು ಸಂಜೆ 6.45ಕ್ಕೆ ಮಾಲತೀ ಮಾಧವ ನಾಟಕ ಪ್ರದರ್ಶನವಾಗಲಿದೆ. ಕೆ.ವಿ.ಅಕ್ಷರ ಇದರ ನಿರ್ದೇಶನ ಮಾಡಿದ್ದಾರೆ. ಅ.27ರಂದು ಅಂಕದ ಪರದೆ ನಾಟಕ ಪ್ರದರ್ಶಿಸಲಾಗುತ್ತಿದೆ. ಜಯಂತ್‌ ಕಾಯ್ಕಿಣಿ ನಿರ್ದೇಶನ ಮಾಡಿದ್ದಾರೆ. ನೇರವಾಗಿ ನಾಟಕ ಪ್ರದರ್ಶನ ಮಾಡಲಾಗುತ್ತದೆ. ವೇದಿಕೆ ಕಾರ್ಯಕ್ರಮ ಇರುವುದಿಲ್ಲ.

ಹೊನ್ನಾಳಿ ಚಂದ್ರಶೇಖರ್‌, ನಮ್‌ ಟೀಮ್‌ ಪ್ರಧಾನ ಕಾರ್ಯದರ್ಶಿ

BLUE-LINE

honali chandrashekar and samanvaya kashi about drama festival in shimoga

ಎರಡು ನಾಟಕಕ್ಕೆ ಪ್ರತ್ಯೇಕವಾಗಿ ಪ್ರವೇಶ ದರ ನಗದಿಪಡಿಸಲಾಗಿದೆ. ಆಸಕ್ತರು 98445 18866 ಮೊಬೈಲ್‌ ನಂಬರ್‌ ಸಂಪರ್ಕಿಸಿ ಈಗಲೆ ಟಿಕೆಟ್‌ ಖರೀದಿಸಬಹುದಾಗಿದೆ.

ಸುದ್ದಿಗೋ‍ಷ್ಠಿಯಲ್ಲಿ ನಮ್‌ ಟೀಮ್‌ನ ಖಜಾಂಚಿ ಸಮನ್ವಯ ಕಾಶಿ, ಹೊತ್ತಾರೆ ಶಿವು ಉಪಸ್ಥಿತರಿದ್ದರು.

ಇದನ್ನೂ ಓದಿ » ಲಿಂಗನಮಕ್ಕಿ ಚಲೋ, ಕಾರ್ಗಲ್‌ನಲ್ಲಿ ರೈತರು ಪೊಲೀಸ್‌ ವಶಕ್ಕೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment