ಶಿವಮೊಗ್ಗದಲ್ಲಿ 2 ದಿನ ಸಾಹಿತ್ಯ ಸಮ್ಮೇಳನ, ಉದ್ಘಾಟನೆಗೆ ನಾಗತಿಹಳ್ಳಿ ಚಂದ್ರಶೇಖರ್‌, ಏನೆಲ್ಲ ಕಾರ್ಯಕ್ರಮ ಇರುತ್ತೆ?

SHIVAMOGGA LIVE NEWS, 3 FEBRUARY 2025

ಶಿವಮೊಗ್ಗ : 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು (sammelana) ಫೆ.6 ಮತ್ತು 7ರಂದು ನಡೆಯಲಿದೆ. ಚಲನಚಿತ್ರ ನಿರ್ದೇಶಕ ಮತ್ತು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಮಂಜುನಾಥ್‌, ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದ ಸಾಹಿತ್ಯ ಗ್ರಾಮದಲ್ಲಿ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.

ಏನೇನು ಕಾರ್ಯಕ್ರಮವಿದೆ? ಯಾರೆಲ್ಲ ಭಾಗಿಯಾಗ್ತಾರೆ?

» ಫೆ.6ರಂದು ಬೆಳಗ್ಗೆ 10 ಗಂಟೆಗೆ ಗೋಪಾಳದ ಆನೆ ಸರ್ಕಲ್‌ನಿಂದ ಸಮ್ಮೇಳನ ಅಧ್ಯಕ್ಷ ಡಾ. ಜೆ.ಕೆ.ರಮೇಶ್‌ ಅವರ ಜೊತೆಗೆ ಸಾಂಸ್ಕೃತಿಕ ನಡಿಗೆ ಆಯೋಜಿಸಲಾಗಿದೆ. ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ರವಿಕುಮಾರ್‌ ಮೆರವಣಿಗೆ ಚಾಲನೆ ನೀಡಲಿದ್ದಾರೆ. ಸಾಹಿತಿಗಳು, ಸಾಹಿತ್ಯ ಆಸಕ್ತರು, ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

» ಬೆಳಗ್ಗೆ 10.30ಕ್ಕೆ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ನಾಗತಿಹಳ್ಳಿ ಚಂದ್ರಶೇಖರ್‌ ಚಾಲನೆ ನೀಡಲಿದ್ದಾರೆ. ಸಚಿವ ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಹಿಂದಿನ ಸಮ್ಮೇಳನ ಅಧ್ಯಕ್ಷ ಡಾ. ಎಸ್‌.ಪಿ.ಪದ್ಮಪ್ರಸಾದ್‌, ಕುವೆಂಪು ವಿವಿ ಕುಲಪತಿ ಡಾ. ಶರತ್‌ ಅನಂತಮೂರ್ತಿ, ಶಾಸಕರಾದ ಎಸ್‌.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್‌, ಎಸ್‌.ಎಲ್‌.ಭೋಜಾನಾಯ್ಕ್‌, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್‌ ಉಪಸ್ಥಿತರಿರಲಿದ್ದಾರೆ.

d manjunath speaks about sahitya sammelana

» ಮಧ್ಯಾಹ್ನ 1 ಗಂಟೆಗೆ ಸಾಂಸ್ಕೃತಿಕ ಮಧ್ಯಾಹ್ನ, » ಮಧ್ಯಾಹ್ನ 1.30ಕ್ಕೆ ಕವಿಗೋಷ್ಠಿ ನಡೆಯಲಿದೆ. » ಸಂಜೆ 4 ಗಂಟೆಗೆ ಸಮ್ಮೇಳನ ಅಧ್ಯಕ್ಷರ ಬದುಕು ಬರಹ ಘೋಷ್ಠಿ ನಡೆಯಲಿದೆ. ಸಾಹಿತಿ, ವಿಶ್ರಾಂತ ಪ್ರಾ‍ಧ್ಯಾಪಕಿ ಡಾ. ಎಲ್.ಸಿ.ಸುಮಿತ್ರಾ ಅಧ್ಯಕ್ಷತೆ ವಹಿಸಲಿದ್ದಾರೆ. » ಸಂಜೆ 5.30ಕ್ಕೆ ಸಾಂಸ್ಕೃತಿಕ ಸಂಜೆ.

» ಸಂಜೆ 6 ಗಂಟೆಗೆ ಜಾಗತೀಕರಣ ಮತ್ತು ಕನ್ನಡ ಅಸ್ಮಿತೆ ಗೋಷ್ಠಿ ನಡೆಯಲಿದೆ. ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌, ಸಾಹಿತಿ ಡಾ. ಸರ್ಫ್ರಾಜ್‌ ಚಂದ್ರಗುತ್ತಿ, ಡಾ. ಜಿ.ಕೆ.ಪ್ರೇಮಾ ಭಾಗವಹಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆ ವಹಿಸಲಿದ್ದಾರೆ.

» ಸಂಜೆ 7.30ಕ್ಕೆ ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮ ಸಂವಾದ ಸಾದೃಶ್ಯ – ವೈದೃಶ್ಯಗಳು ಗೋಷ್ಠಿ ನಡೆಯಲಿದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌, ನಟ ಗೌರಿಶಂಕರ್‌, ಸೈಮಾ ಫಿಲ್ಮ್‌ ಪ್ರಶಸ್ತಿ ಪುರಸ್ಕೃತ ಅರ್ಜುನ್‌ ಕುಮಾರ್‌, ಪತ್ರಕರ್ತ ವೈದ್ಯನಾಥ್‌, ಉಪನ್ಯಾಸಕ ಡಾ ಜಿ.ಆರ್‌.ಲವ ಭಾಗವಹಿಸಲಿದ್ದಾರೆ.

Prashanth-Loan-Advertisement.

» ಫೆ.7ರಂದು ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ, ಈಚಿನ ಕಥನಕ್ರಮ ವಿಷಯದ ಕುರಿತು ಗೋಷ್ಠಿ ನಡೆಯಲಿದೆ. ಪ್ರಾ‍‍ಧ್ಯಾಪಕ ಡಾ. ಮೇಟಿ ಮಲ್ಲಿಕಾರ್ಜುನ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಅಕ್ಷತಾ ಹುಂಚದಕಟ್ಟೆ, ಸಹ ಪ್ರಾ‍ಧ್ಯಾಪಕಿ ಡಾ. ಸಬಿತಾ ಬನ್ನಾಡಿ ಮಾತನಾಡಲಿದ್ದಾರೆ.

» ಮಧ್ಯಾಹ್ನ 12.20ಕ್ಕೆ ಮಲೆನಾಡು ಬದುಕಿನ ಸವಾಲು ಕುರಿತು ಗೋಷ್ಠಿ ನಡೆಯಲಿದೆ. ಎಂಎಡಿಬಿ ಅಧ್ಯಕ್ಷ ಡಾ. ಆರ್‌.ಎಂ.ಮಂಜುನಾಥ ಗೌಡ ಅ‍ಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ಭಾಗವಹಿಸಲಿದ್ದಾರೆ. ಸಾಹಿತಿ, ಪರಿಸರ ತಜ್ಞ ಕಲ್ಕುಳಿ ವಿಠ್ಠಲ ಹೆಗಡೆ ಮಾತನಾಡಲಿದ್ದಾರೆ.

d manjunath speaks about sahitya sammelana

» ಸಂಜೆ 2.30ಕ್ಕೆ ಕಥೆ ಹೇಳುವೆವು ಕೇಳಿ ಗೋಷ್ಠಿ ನಡೆಯಲಿದೆ. ಪತ್ರಕರ್ತ ಗೋಪಾಲ ಯಡಗೆರೆ ಅಧ್ಯಕ್ಷತೆ ವಹಿಸಲಿದ್ದಾರೆ. ಸೂಡ ಅಧ್ಯಕ್ಷ ಹೆಚ್‌.ಎಸ್.ಸುಂದರೇಶ್‌ ಉಪಸ್ಥಿತರಿರಲಿದ್ದಾರೆ. » ಸಂಜೆ 4.30ಕ್ಕೆ ಮಾಧ್ಯಮ ಬದ್ಧತೆಗಳು ಕುರಿತು ಗೋಷ್ಠಿ ನಡೆಯಲಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ನಾಗರಾಜ ಗೌಡ, ರಘುರಾಮ ದೇವಾಡಿಗ ಭಾಗವಹಿಸಲಿದ್ದಾರೆ. ಪ್ರಜಾವಾಣಿ ಉಪ ಸಂಪಾದಕ ವೈ.ಗ.ಜಗದೀಶ್‌, ಸಾಹಿತಿ ಪೀರ್‌ಬಾಷಾ ಮಾತನಾಡಲಿದ್ದಾರೆ.

D-Manjunatha-about-kannada-shahitya-sammelana

» ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಾಂಸ್ಕೃತಿಕ ಚಿಂತಕ ದಿನೇಶ್‌ ಅಮೀನ್‌ಮಟ್ಟು ಸಮಾರೋಪ ನುಡಿ ನುಡಿಯಲಿದ್ದಾರೆ. ಸಮ್ಮೇಳನ ಅಧ್ಯಕ್ಷ ಡಾ ಜೆ.ಕೆ.ರಮೇಶ್‌, ಸಂಸದ ಬಿ.ವೈ.ರಾಘವೇಂದ್ರ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ.ಮಂಜುನಾಥ್‌, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕರಾದ ಬಿ.ಕೆ.ಸಂಗಮೇಶ್ವರ, ಬಿ.ವೈ.ವಿಜಯೇಂದ್ರ, ಬಲ್ಕೀಶ್‌ ಬಾನು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್‌ ಭಾಗವಹಿಸಲಿದ್ದಾರೆ.

Web-Design-by-New-Web-techy

ಇದನ್ನೂ ಓದಿ » ‘ಎಚ್ಚರ.. ಎಚ್ಚರ.. ಈ ರಸ್ತೆ ಲಿಮ್ಕಾ ದಾಖಲೆಗೆ ಸೇರಲಿದೆ’, ಜನರಿಂದ ಬ್ಯಾನರ್‌, ಎಲ್ಲಿದೆ ಈ ರೋಡ್‌?

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment