SHIVAMOGGA LIVE NEWS | 10 FEBRUARY 2023
SHIMOGA : ನಗರದ ಎರಡು ಕಡೆ ಮನೆಗಳ ಬಾಗಿಲ ಬೀಗ ಮುರಿದು (House Theft) ಚಿನ್ನಾಭರಣ, ನಗದು, ಮೊಬೈಲ್ ಕಳ್ಳತನ ಮಾಡಲಾಗಿದೆ. ಎರಡು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಜಾತ್ರೆಗೆ ಹೋದವರಿಗೆ ಬಂತು ಫೋನ್ ಕರೆ
ಅಶೋಕ ನಗರ : ಮಂಜಪ್ಪ ಎಂಬುವವರು ಫೆ.6ರಂದು ಕುಟುಂಬ ಸಹಿತ ಜಾತ್ರೆಗೆ ತೆರಳಿದ್ದರು. ಫೆ.9ರ ಮಧ್ಯಾಹ್ನ ಪಕ್ಕದ ಮನೆಯವರು ಕರೆ ಮಾಡಿ ನಿಮ್ಮ ಮನೆಯ ಬಾಗಿಲಿನ ಬೀಗ ಮರಿದಿದ್ದು (House Theft), ಬಾಗಿಲು ತೆಗೆದಿದೆ ಎಂದು ತಿಳಿಸಿದರು. ವಿಚಾರ ತಿಳಿದು ಮಂಜಪ್ಪ ಅವರು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಬೀರುವಿನಲ್ಲಿದ್ದ 40 ಸಾವಿರ ರೂ. ನಗದು, 2.28 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಸ್ಯಾಮ್ ಸಂಗ್ ಎ33 ಮೊಬೈಲ್ ಫೋನ್ ಕಳ್ಳತನವಾಗಿತ್ತು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ –ಹೊಳೆ ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿ ಮೃತದೇಹ | ಶಿವಮೊಗ್ಗ ಜಿಲ್ಲೆಯ 4 CRIME NEWS
ಮಗಳ ಮನೆಗೆ ಹೋದಾಗ ಕಳ್ಳತನ
ಕೃಷಿ ನಗರ : ಪದ್ಮಾವತಿ ಎಂಬುವವರು ಶಿವಮೊಗ್ಗದಲ್ಲಿಯೇ ಇರುವ ತಮ್ಮ ಮಗಳ ಮನೆಗೆ ತೆರಳಿದ್ದರು. ಈ ವೇಳೆ ಪದ್ಮಾವತಿ ಅವರ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಮನೆಯ ಬೆಡ್ ರೂಮಿನಲ್ಲಿದ್ದ 30 ಸಾವಿರ ರೂ. ಮೌಲ್ಯದ 10 ಗ್ರಾಂನ ಬಂಗಾರದ ಒಡವೆ, ಸುಮಾರು 30 ಸಾವಿರ ರೂ. ನಗದ ಕಳ್ಳತನವಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಚೋರಡಿಯಲ್ಲಿ ಸರಣಿ ಅಪಘಾತ, ಶಿವಮೊಗ್ಗ – ಸಾಗರ ರಸ್ತೆಯಲ್ಲಿ ಟ್ರಾಫಿಕ್ ಜಾಮ್, ಹೇಗಾಯ್ತು ಆಕ್ಸಿಡೆಂಟ್?
LATEST NEWS
- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

- ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

- ಉಪನ್ಯಾಸಕಿಗೆ ವಿಡಿಯೋ ಕರೆ ಮಾಡಿ ಅಶ್ಲೀಲ ವರ್ತನೆ, ದಾಖಲಾಯ್ತು ಕೇಸ್, ಏನಿದು ಪ್ರಕರಣ?

About The Editor
ನಿತಿನ್ ಆರ್.ಕೈದೊಟ್ಲು


CLICK HERE TO JOIN SHIVAMOGGA LIVE WHATSAPP GROUP


