ಶಿವಮೊಗ್ಗದ ಈ ಅಂಡರ್‌ ಪಾಸ್‌ ಮತ್ತೆ ಕತ್ತಲುಮಯ, ಇತ್ತ ಗಮನ ಹರಿಸುತ್ತಾರಾ ಅಧಿಕಾರಿಗಳು?

 ಶಿವಮೊಗ್ಗ  LIVE 

ಶಿವಮೊಗ್ಗ: ಸವಳಂಗ ರಸ್ತೆಯ ಅಂಡರ್‌ ಪಾಸ್‌ (Underpass) ಮತ್ತೆ ಕತ್ತಲುಮಯವಾಗಿದೆ. ಇಲ್ಲಿ ಅಳವಡಿಸಿದ್ದ ಅರ್ಧಕ್ಕರ್ಧ ಲೈಟುಗಳು ಆಫ್‌ ಆಗಿವೆ. ಸಂಜೆಯಾಗುತ್ತಲೇ ಈ ಭಾಗದ ಜನರು ಕತ್ತಲಲ್ಲೇ ಓಡಾಡುವಂತಾಗಿದೆ.

ಶಿವಮೊಗ್ಗ ಉಷಾ ನರ್ಸಿಂಗ್‌ ಹೋಂ ಸರ್ಕಲ್‌ ಬಳಿ ಇರುವ ಅಂಡರ್‌ ಪಾಸ್‌ನಲ್ಲಿ ಲೈಟುಗಳು ಆನ್‌ ಆಗುತ್ತಿಲ್ಲ. ಕಳೆದ ಮೂರ್ನಾಲ್ಕು ದಿನದಿಂದ ಇಲ್ಲಿ ಇದೇ ಸ್ಥಿತಿ ಇದೆ. ಆದರೆ ಈತನಕ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

ಕೃಷಿ ನಗರ, ಡಾಲರ್ಸ್‌ ಕಾಲೋನಿ, ಬಸವೇಶ್ವರ ನಗರ, ಕೀರ್ತಿ ನಗರ ಬಡಾವಣೆಗಳ ನಿವಾಸಿಗಳು ಅಂಡರ್‌ ಪಾಸ್‌ ಮೂಲಕವೆ ಸಂಚರಿಸಬೇಕು. ಈ ಮೊದಲು ಮೇಲ್ಸೇತುವೆ ಮತ್ತು ಅಂಡರ್‌ ಪಾಸ್‌ ನಿರ್ಮಾಣವಾದಾಗ ಈ ಮೊದಲು ಅಂಡರ್‌ ಪಾಸ್‌ನಲ್ಲಿ ಲೈಟ್‌ ಇರಲಿಲ್ಲ. ಸಾರ್ವಜನಿಕರ ಆಕ್ರೋಶ, ಶಿವಮೊಗ್ಗ ಲೈವ್.ಕಾಂ ಸೇರಿದಂತೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಲೈಟ್‌ ಅಳವಡಿಸಲಾಗಿತ್ತು.

No-lights-in-savalanga-road-under-pass-near-usha-nursing-home

ಇದನ್ನೂ ಓದಿ » ಶಿವಮೊಗ್ಗದ ಲಾಡ್ಜ್‌ನಲ್ಲಿ ರೂಂ ಮಾಡಿ ಉಳಿದಿದ್ದ ಯುವಕ, ಬೆಳಗ್ಗೆ ಹೊರ ಬಂದಾಗ ಕಾದಿತ್ತು ಆಘಾತ

ಕೆಲವೇ ತಿಂಗಳಲ್ಲಿ ಈ ಲೈಟುಗಳಲ್ಲಿ ಅರ್ಧಕ್ಕರ್ಧ ಲೈಟುಗಳು ಬಂದ್‌ ಆಗಿವೆ. ತಕ್ಷಣ ಈ ಲೈಟುಗಳನ್ನು ರಿಪೇರಿ ಮಾಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

No-lights-in-savalanga-road-under-pass-near-usha-nursing-home

No-lights-in-savalanga-road-under-pass-near-usha-nursing-home

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment