SHIVAMOGGA LIVE NEWS | 18 JANUARY 2024
SHIMOGA : ಉಪಾಧ್ಯಕ್ಷ ಸಿನಿಮಾದ ಪ್ರಚಾರಕ್ಕಾಗಿ ನಟ ಚಿಕ್ಕಣ್ಣ ಮತ್ತು ಸಿನಿಮಾ ತಂಡ ಇವತ್ತು ಶಿವಮೊಗ್ಗಕ್ಕೆ ಆಗಮಿಸಿತ್ತು. ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಟ ಚಿಕ್ಕಣ್ಣ, ಉಪಾಧ್ಯಕ್ಷ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದರು. ಇದೇ ವೇಳೆ ನಟ ಚಿಕ್ಕಣ್ಣ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.
![]() |
ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ನಟ ಚಿಕ್ಕಣ್ಣ ಅವರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರು ಅವರೊಳಗೆ ಮುಗ್ಧತೆ ಹೊಂದಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರು ಮೊದಲ ಬಾರಿ ನಾಯಕ ನಟನಾಗಿ ಅಭಿನಯಿಸಿರುವ ಉಪಾಧ್ಯಕ್ಷ ಸಿನಿಮಾ ಜ.26ರಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ ನಟ ಶರಣ್ ಅವರ ಅಭಿನಯದ ಅಧ್ಯಕ್ಷ ಸಿನಿಮಾ ಯಶಸ್ವಿಯಾಗಿತ್ತು. ಅದರ ಮುಂದುವರೆದ ಭಾಗವಾಗಿ ಉಪಾಧ್ಯಕ್ಷ ಬಿಡುಗಡೆಯಾಗುತ್ತಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸ್ಮಿತಾ ಉಮಾಪತಿ ಅವರು ಇದರ ನಿರ್ಮಾಪಕರಾಗಿದ್ದಾರೆ.ಅನಿಲ್ ಕುಮಾರ್, ನಿರ್ದೇಶಕ
ಈವರೆಗೂ ನೂರಾರು ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಹಲವು ನಟರೊಂದಿಗೆ ನಟಿಸಿದ್ದೇನೆ. ಈಗ ಉಪಾಧ್ಯಕ್ಷ ಸಿನಿಮಾ ಮೂಲಕ ನಟನಾಗಿದ್ದೇನೆ. ಇದು ಹಳ್ಳಿ ಸೊಗಡಿನ ಸಿನಿಮಾ. ವೀಕ್ಷಕರನ್ನು ರಂಜಿಸಲಿದೆ.ಚಿಕ್ಕಣ್ಣ, ನಾಯಕ
ಕಿರುತೆರೆಯಲ್ಲಿ ಅಭಿನಯಿಸಿದ ಅನುಭವವಿದೆ. ಉಪಾಧ್ಯಕ್ಷ ಸಿನಿಮಾದ ಮೂಲಕ ನಾಯಕ ನಟಿಯಾಗಿದ್ದೇನೆ. ಸಿನಿಮಾದಲ್ಲಿ ಉತ್ತಮವಾಗಿ ಅಭಿನಯಿಸಿದ್ದೇನೆ.ಮಲೈಕ, ನಾಯಕಿ
ಹಾಸ್ಯದ ಮೂಲಕವೆ ಕನ್ನಡಿಗರ ಮನ ಗೆದ್ದಿರುವ ನಟ ಚಿಕ್ಕಣ್ಣ. ತುಂಬಾ ಕಷ್ಟಪಟ್ಟು ಈ ಹಂತಕ್ಕೆ ತಲುಪಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಮೂಲಕ ಚಿಕ್ಕಣ್ಣ ನಾಯಕನಾಗಿ ಯಶಸ್ವಿಯಾಗಲಿದ್ದಾರೆ.ಧರ್ಮಣ್ಣ, ನಟ
ಸೆಲ್ಫಿ, ಫೋಟೊಗೆ ಮುಗಿಬಿದ್ದರು
ಇನ್ನು, ನಟ ಚಿಕ್ಕಣ್ಣ ಅವರ ಸುದ್ದಿಗೋಷ್ಠಿಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಶಿವಮೊಗ್ಗ ಪತ್ರಿಕಾ ಭವನಕ್ಕೆ ಆಗಮಿಸಿದ್ದರು. ನಟ ಚಿಕ್ಕಣ್ಣ, ನಟಿ ಮಲೈಕ ಅವರೊಂದಿಗೆ ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡರು. ಶಾಲು ಹೊದಿಸಿ, ಹಾರ ಹಾಕಿ ನಟ ಚಿಕ್ಕಣ್ಣಗೆ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ – SHIMOGA CITY – ಇವತ್ತಿನ ಟಾಪ್ 10 ಸುದ್ದಿಗಳು | 18 ಜನವರಿ 2024
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200