ಮಹಿಳೆಯರಿಗೆ ಗುಡ್‌ ನ್ಯೂಸ್‌, ಶಿವಮೊಗ್ಗದಲ್ಲಿ ನಾಳೆ ಉತ್ಸವ್‌ ಮೇಳ, ಏನೇನೆಲ್ಲ ಇರುತ್ತೆ?

 ಶಿವಮೊಗ್ಗ  LIVE 

ಶಿವಮೊಗ್ಗ: ಶಿವಮೊಗ್ಗದಲ್ಲಿ ಉತ್ಸವ್ ದಿ ಸೆಲೆಬ್ರೇಷನ್ ಎಂಬ ಲೈಫ್‌ಸ್ಟೈಲ್ ವಸ್ತು (lifestyle exhibition) ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಡಿಸೆಂಬರ್ 12ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮೇಳ ನಡೆಯಲಿದೆ. ಈ ವಿಶೇಷ ಪ್ರದರ್ಶನಕ್ಕೆ ಹೋಟೆಲ್ ಜ್ಯುವೆಲ್ ರಾಕ್‌ನಲ್ಲಿರುವ ಮಿಲನ್ ಹಾಲ್ ವೇದಿಕೆಯಾಗಲಿದೆ.

ಇದನ್ನೂ ಓದಿ » ಭದ್ರಾವತಿ ಆಕಾಶವಾಣಿಯಲ್ಲಿ ಹೆಲ್ತ್ ಹಿಂಟ್ಸ್, ಬದುಕು ಜಟಕಾಬಂಡಿ ಕಾರ್ಯಕ್ರಮ, ಟೈಮಿಂಗ್‌ ಏನು?

ನಿರ್ಮಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ, ಐವಿಎಫ್‌ ಸ್ಪೆಷಲಿಸ್ಟ್‌ ಡಾ. ಸಮೀನಾ ಸುಲ್ತಾನಾ ಉತ್ಸವ್‌ ಮೇಳವನ್ನು ಉದ್ಘಾಟಿಸಲಿದ್ದಾರೆ.

ಇಲ್ಲಿ ಸೀರೆಗಳು, ಡ್ರೆಸ್‌, ಆಭರಣ, ಮನೆ ಅಲಂಕಾರಿಕ ವಸ್ತುಗಳು ಮತ್ತು ಇತರೆ ಆಕ್ಸೆಸರೀಸ್‌ಗಳು ಸೇರಿ ಹಲವು ಲೈಫ್‌ಸ್ಟೈಲ್ ಉತ್ಪನ್ನ ಮಾರಾಟಕ್ಕೆ ಲಭ್ಯವಿರುತ್ತವೆ. ಇನ್ನು, ಮಹಿಳೆಯರು ತಮ್ಮಲ್ಲಿರುವ ಹಳೆಯ ರೇಷ್ಮೆ ಸೀರೆಗಳನ್ನು ಸ್ಥಳದಲ್ಲೇ ಮಾರಾಟ ಮಾಡಿ, ನಗದು ಹಣ ಪಡೆಯುವ ಅವಕಾಶವೂ ಇದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ನಾಳೆ ಕಂದಾಯೋತ್ಸವ, ಎರಡು ದಿನ ಏನೇನು ಕಾರ್ಯಕ್ರಮ ನಡೆಯಲಿದೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment