ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಜೂನ್ 2021
ಲಾಕ್‌ಡೌನ್ ಸಡಿಲ ಮಾಡಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಸರ್ಕಾರಿ ನೌಕರರಿಗಾಗಿ ಬಿಟ್ಟಿರುವ ಬಸ್ಸುಗಳಲ್ಲಿ ಗೈಡ್‌ಲೈನ್ ಉಲ್ಲಂಘಿಸಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚು ಪ್ರಯಾಣಿಕರು ಇರುವಂತಿಲ್ಲ ಎಂದು ಸರ್ಕಾರ ಗೈಡ್‌ಲೈನ್‌ನಲ್ಲಿ ಪ್ರಕಟಿಸಿದೆ. ಆದರೆ ಸರ್ಕಾರಿ ನೌಕರರು ಪಯಣಿಸುವ ಬಸ್ಸಿನಲ್ಲೆ ಗೈಡ್‌ಲೈನ್ ಪಾಲನೆ ಆಗುತ್ತಿಲ್ಲ.
ಇದನ್ನು ಓದಿ | ಶಿವಮೊಗ್ಗ ಜಿಲ್ಲೆಯಿಂದ KSRTC ಬಸ್ ಸಂಚಾರ ಶುರು, ಯಾವೆಲ್ಲ ಊರಿಗೆ ತೆರಳುತ್ತಿವೆ ಸರ್ಕಾರಿ ಸಾರಿಗೆ?
ವಿವಿಧ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗಾಗಿ ಪ್ರತ್ಯೇಕವಾಗಿ ಸರ್ಕಾರಿ ಬಸ್‌ಗಳನ್ನು ಬಿಡಲಾಗಿದೆ. ಆದರೆ ಈ ಬಸ್ಸುಗಳಲ್ಲಿ ಸರ್ಕಾರಿ ನೌಕರರ ನಡುವೆ ಸಾಮಾಜಿಕ ಅಂತರವಿಲ್ಲದಾಗಿದೆ. ಮೂರು ಮತ್ತು ಎರಡು ಸೀಟರ್ ಬಸ್ಸುಗಳಿದ್ದು ಎಲ್ಲ ಸೀಟುಗಳು ಭರ್ತಿಯಾಗಿ ತೆರಳುತ್ತಿವೆ.
ಈ ಬಗ್ಗೆ ಪ್ರಶ್ನಿಸಿದಾಗ ಹೆಸರು ಹೇಳಲು ಇಚ್ಛಿಸದ ಮಹಿಳಾ ಸಿಬ್ಬಂದಿಯೊಬ್ಬರು, ಹೆಚ್ಚುವರಿ ಬಸ್ ಬಿಡುತ್ತಿಲ್ಲ. ಡ್ಯೂಟಿ ತಪ್ಪಿಸುವಂತಿಲ್ಲ. ಅನಿವಾರ್ಯವಾಗಿ ಹೀಗೆ ಸಂಚರಿಸಬೇಕಾಗಿದೆ. ನಮಗೂ ಕರೋನ ಭಯವಿದೆ ಅನ್ನುತ್ತಾರೆ.
ಉಳಿದ ಪ್ರಯಾಣಿಕರಿಗೆ ಮಾದರಿ ಆಗಬೇಕಿದ್ದ ಸರ್ಕಾರಿ ನೌಕರರ ಬಸ್ಸುಗಳಲ್ಲೆ ನಿಯಮ ಉಲ್ಲಂಘಿಸುತ್ತಿರುವುದು ಪ್ರಶ್ನಾರ್ಹವಾಗಿದೆ.