SHIVAMOGGA LIVE NEWS | 14 SEPTEMBER 2023
SHIMOGA : ಒಕ್ಕಲಿಗ ಯುವ ವೇದಿಕೆ ವತಿಯಿಂದ ಶಿವಮೊಗ್ಗದಲ್ಲಿ ಜಿಲ್ಲಾ ಮಟ್ಟದ ಒಕ್ಕಲಿಗರ (Vokkaliga) ಯುವ ಸಮಾವೇಶ ನಡೆಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿದಂತೆ ಅತಿ ಹೆಚ್ಚು ಅಂಕ ಪಡೆದ ಸಮುದಾಯದ 102 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ – WhatsAppನಲ್ಲಿ Instagram ರೀತಿಯ ಫೀಚರ್, ಇನ್ಮುಂದೆ ನಿಮ್ಮದೆ ಚಾನಲ್ ಮಾಡಬಹುದು
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡಲಾಯಿತು. ಇನ್ನು, ವಿಶೇಷ ಚೇತನರಿಗೆ ವೀಲ್ ಚೇರ್ಗಳ ವಿತರಣೆ ಮಾಡಲಾಯಿತು.
ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಶ್ರೀ ಪ್ರಸನ್ನನಾಥ ಸ್ವಮೀಜಿ ಚಾಲನೆ ನೀಡಿದರು.
ಯಾರೆಲ್ಲ ಏನೇನು ಹೇಳಿದರು?
ಕಿಮ್ಮನೆ ರತ್ನಾಕರ್, ಮಾಜಿ ಸಚಿವ : ಸರ್ಕಾರ ಮತ್ತು ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಅದ್ಯತೆ ನೀಡಬೇಕು. ಎಲ್.ಕೆ.ಜಿಯಿಂದ ಪಿಯುಸಿವರೆ ಸರ್ಕಾರವೆ ಶುಲ್ಕ ರಹಿತವಾಗಿ ಶಿಕ್ಷಣ ನೀಡಬೇಕು. ಖಾಸಗಿ ಶಾಲೆಗಳಿಗೆ ಅವಕಾಶ ನೀಡಬಾರದು. ರಾಜ್ಯದಲ್ಲಿ 7ನೇ ತರಗತಿವರೆಗೆ 45 ಸಾವಿರ ಶಾಲೆಗಳಿವೆ. ಆದರೆ 30 ಸಾವಿರ ಶಾಲೆಗಳು ಮಾತ್ರ ಅಗತ್ಯವಿದೆ. ಈ ಹಿಂದೆ ಗ್ರಾಮಗಳಿಗೆ ರಸ್ತೆಗಳು ಇರಲಿಲ್ಲ. ಆದ್ದರಿಂದ ಹೆಚ್ಚು ಶಾಲೆಗಳನ್ನು ನಿರ್ಮಿಸಲಾಯಿತು. ಈಗ ಸರ್ಕಾರವೆ ವಾಹನದ ವ್ಯವಸ್ಥೆ ಮಾಡಬಹುದಾಗಿದೆ. ಒಂದು ಗ್ರಾಮ ಪಂಚಾಯತಿಗೆ ಒಂದು ಅಥವಾ ಎರಡು ಶಾಲೆಗಳಿಗೆ ಅವಕಾಶ ಇದ್ದರೆ ಸಾಕು.
ಆರಗ ಜ್ಞಾನೇಂದ್ರ, ಮಾಜಿ ಸಚಿವ : ಮನುಷ್ಯನ ಮೃಗೀಯ ಗುಣವನ್ನು ಕಳೆಯುವುದು ವಿದ್ಯೆ. ಆದರೆ ವಿದ್ಯಾವಂತ ಯುವ ಜನಾಂಗ ಯಾವ ದಿಕ್ಕಿಗೆ ಹೋಗಬೇಕಿತ್ತೊ ಆ ದಿಕ್ಕಿನಲ್ಲಿ ಸಾಗದಿರುವುದು ವಿಷಾದ. ಅನ್ನ, ತರಕಾರಿ ಬೇಯಿಸುವ ಕುಕ್ಕರ್ನಲ್ಲಿ ಬಾಂಬ್ ತಯಾರಿಸಬಹುದು ಎಂಬುದನ್ನು ಗಮನಿಸಿದಾಗ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಬೇಕೆ ಅನಿಸುತ್ತದೆ. ಗಾಂಜಾ ಸೇರಿ ಅನೇಕ ಮಾದಕ ವಸ್ತುಗಳು ಶಿಕ್ಷಣ ಸಂಸ್ಥೆಗಳ ಒಳಗೆ ಬಂದಿವೆ.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪಸನ್ನನಾಥ ಸ್ವಾಮೀಜಿ ಸನ್ನಿಧ್ಯವ ವಹಿಸಿದ್ದರು. ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸಿರಿಬೈಲು ಧರ್ಮೇಶ್, ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಕೆ.ಚೇತನ್, ಶಾಸಕ ಎಸ್.ಎಲ್.ಭೋಜೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಆದಿಮೂರ್ತಿ, ಕೆ.ಎನ್.ರಾಮಕೃಷ್ಣ, ಉಂಬ್ಳೇಬೈಲು ಮೋಹನ್, ವಿಜಯ ಕುಮಾರ್, ಕಡಿದಾಳ್ ಗೋಪಾಲ್, ಸುವರ್ಣ ಶಂಕರ್, ಯಮುನಾ ರಂಗೇಗೌಡ, ರಮೇಶ್ ಹೆಗ್ಡೆ ಸೇರಿದಂತೆ ಹಲವರು ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200