ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 JANUARY 2023
SHIMOGA : ಮತದಾರರ ಜಾಗೃತಿ ಮತ್ತು ಇವಿಎಂ ಯಂತ್ರಗಳ ಪ್ರಾತ್ಯಕ್ಷಿಕೆ ಉದ್ದೇಶಕ್ಕೆ ತಯಾರಿಸಲಾದ ಸಂಚಾರಿ ವಾಹನಕ್ಕೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಚಾಲನೆ ನೀಡಿದರು. ಇದೆ ವೇಳೆ ಕಾಲೇಜು ವಿದ್ಯಾರ್ಥಿನಿಯರು ಅಣಕು ಮತದಾನ ಮಾಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಿದ್ಯುನ್ಮಾನ ಯಂತ್ರಗಳ ಬಳಕೆ ಮತ್ತು ನಿಖರತೆ ಬಗ್ಗೆ ತಿಳಿಸಲು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ನಗರ ಮತ್ತು ಹಳ್ಳಿಗಳ ಎಲ್ಲ ಮತದಾರರನ್ನೂ ಈ ಸಂಚಾರಿ ವಾಹನ ತಲುಪಲಿದೆ. ಈ ವಾಹನ ಶಿವಮೊಗ್ಗ ನಗರದ ಎಲ್ಲ ಮತಗಟ್ಟೆಗಳಿಗೆ ಹಾಗೂ ಕಾಲೇಜುಗಳಿಗೆ ಭೇಟಿ ನೀಡಲಿದೆ.
ವಿದ್ಯಾರ್ಥಿನಿಯರಿಂದ ಅಣಕು ಮತದಾನ
ಇದೇ ಸಂದರ್ಭ ಕಾಲೇಜು ವಿದ್ಯಾರ್ಥಿನಿಯರು ಅಣಕು ಮತದಾನ ಮಾಡಿದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರ ಮುಂದೆ ವಿದ್ಯಾರ್ಥಿನಿಯರು ಮತಯಂತ್ರದಲ್ಲಿ ಬಟನ್ ಒತ್ತಿದರು. ವಿವಿ ಪ್ಯಾಟ್‌ನಲ್ಲಿ ತಾವು ಒತ್ತಿದ ಚಿಹ್ನೆ ಕಾಣಿಸಿದ್ದನ್ನು ವೀಕ್ಷಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಂದೇ ಬೈಕ್‌ಗೆ ಒಂದೂವರೆ ಮೀಟರ್‌ಗಿಂತಲೂ ಹೆಚ್ಚು ಉದ್ದದ ದಂಡದ ಬಿಲ್, ಫೈನ್ ಮೊತ್ತ ಎಷ್ಟು?
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಪಾಲಿಕೆ ಸಿಬ್ಬಂದಿ ತುಷಾರ್, ಸ್ವೀಪ್ ತರಬೇತುದಾರ ನವೀದ್ ಅಹಮ್ಮದ್ ಫರ್ವೀಜ್, ಸುಪ್ರಿಯಾ ಭಾಗವಹಿಸಿದ್ದರು.