ಶಿವಮೊಗ್ಗ ಜಿಲ್ಲೆಯಲ್ಲಿ ಮತಗಟ್ಟೆಗಳಿಗೆ ತಲುಪಿದ ಮತ ಯಂತ್ರ, ಹೇಗಿತ್ತು ಮಸ್ಟರಿಂಗ್‌? ಎಷ್ಟೆಲ್ಲ ಸಿಬ್ಬಂದಿ ನಿಯೋಜನೆ ಆಗಿದೆ?

Published On : ಮೇ 9, 2023

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 9 MAY 2023

SHIMOGA : ವಿಧಾನಸಭೆ ಚುನಾವಣೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಮತಯಂತ್ರಗಳ (Voting Machine) ಮಸ್ಟರಿಂಗ್‌ ಪ್ರಕ್ರಿಯೆ ನಡೆಯಿತು. ಸಿಬ್ಬಂದಿಗೆ ಕೊನೆಯ ಹಂತದ ತರಬೇತಿ ನೀಡಿ, ಮತಗಟ್ಟೆಗಳಿಗೆ ಮತ ಯಂತ್ರಗಳನ್ನು ಕಳುಹಿಸಲಾಯಿತು.

evm1

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ಮಸ್ಟರಿಂಗ್‌ ಪ್ರಕ್ರಿಯೆ ನಡೆಯಿತು. ರಾಷ್ಟ್ರೀಯ ಶಿಕ್ಷಣ ಸಮಿತಿ ಆವರಣದಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಮಸ್ಟರಿಂಗ್‌ ನಡೆಯಿತು.

Electronic-Voting-Machine-from-NES-Ground.

ಇದನ್ನೂ ಓದಿ – ಪ್ರಯಾಣಿಕರೆ ಗಮನಿಸಿ, ಎರಡು ದಿನ ಕೆಎಸ್‌ಆರ್‌ಟಿಸಿ ಬಸ್‌ ಸಿಗಲ್ಲ, ಕಾರಣವೇನು?

ಮತಗಟ್ಟೆಗಳತ್ತ ಅಧಿಕಾರಿಗಳು

ಮಧ್ಯಾಹ್ನದ ವೇಳೆಗೆ ಚುನಾವಣಾ ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದರು. ಮತಯಂತ್ರ (Voting Machine), ವಿವಿ ಪ್ಯಾಟ್‌, ಕಂಟ್ರೋಲ್‌ ಯುನಿಟ್‌ ಮತ್ತು ಮತಗಟ್ಟೆಗೆ ಅಗತ್ಯವಿರುವ ಪರಿಕರಗಳನ್ನು ಹೊತ್ತು ಅಧಿಕಾರಿಗಳು ತೆರಳಿದರು. ಪ್ರತಿ ಮತಗಟ್ಟೆಯ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ತೆರಳಿದರು.

evm2

ಕ್ಷೇತ್ರವಾರು ಮಸ್ಟರಿಂಗ್‌ ಕೇಂದ್ರ

ಭದ್ರಾವತಿಯ ಸಂಚಿಯ ಹೊನ್ನಮ್ಮ ಬಾಲಿಕಾ ಪದವಿ ಪೂರ್ವ ಕಾಲೆಜು, ತೀರ್ಥಹಳ್ಳಿಯ ಯು.ಆರ್‌.ಅನಂತಮೂರ್ತಿ ಕಾಲೇಜು, ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೊರಬದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಸ್ಟರಿಂಗ್‌ ಪ್ರಕ್ರಿಯೆ ನಡೆಯಿತು. ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ಅಧಿಕಾರಿಗಳು ಮತಯಂತ್ರಯನ್ನು ಕೊಂಡೊಯ್ದರು.

WATCH VIDEO

CLICK HERE FOR MORE INFORMATION

ಎಷ್ಟು ಮತಗಟ್ಟೆಗಳಿವೆ?

ಶಿವಮೊಗ್ಗ ಜಿಲೆಯಲ್ಲಿ 7 ಪೂರಕ ಮತಗಟ್ಟೆಗಳು ಸೇರಿದಂತೆ ಒಟ್ಟು 1782 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನ ಪ್ರಕ್ರಿಯೆಗೆ 8200 ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 2050 ಪಿಆರ್‌ಓ, 2050 ಎಪಿಆರ್‌ಓ, 4100 ಪಿಓಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಪಾರದರ್ಶಕ ಮತದಾನಕ್ಕೆ 83 ಮೈಕ್ರೋ ಅಬ್ಸರ್‌ವರ್‌ಗಳನ್ನು ನಿಯೋಜನೆ ಮಾಡಲಾಗಿದೆ.

evm3

240 ಬಸ್ಸುಗಳ ನಿಯೋಜನೆ

ಒಟ್ಟು 8156 ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರಕ್ಕೆ 16 ಬಸ್, ಭದ್ರಾವತಿಗೆ 40, ಶಿವಮೊಗ್ಗ ನಗರಕ್ಕೆ 15, ತೀರ್ಥಹಳ್ಳಿಗೆ 45, ಶಿಕಾರಿಪುರಕ್ಕೆ 43, ಸೊರಬಕ್ಕೆ 36, ಸಾಗರಕ್ಕೆ 31 ಮತ್ತು ಹೊಸನಗರಕ್ಕೆ 14 ಸೇರಿದಂತೆ ಒಟ್ಟು 240 ಬಸ್‍ಗಳನ್ನು ನಿಯೋಜಿಸಲಾಗಿದೆ.

PRAISHRAMA NEET ACADEMY – CLICK HERE FOR MORE INFORMATION

ಚುನಾವಣೆ ಬಳಿಕ ಡಿಮಸ್ಟರಿಂಗ್‌

ಚುನಾವಣೆ ಮುಗಿದ ಮೇಲೆ ಡಿಮಸ್ಟರಿಂಗ್‌ ಪ್ರಕ್ರಿಯೆ ನಡೆಯಲಿದೆ. ಮಸ್ಟರಿಂಗ್‌ ನಡೆದ ಕಾಲೇಜು ಅವರಣಕ್ಕೆ ಅಧಿಕಾರಿಗಳು ಮತಯಂತ್ರಗಳನ್ನು ತಂದು ಒಪ್ಪಿಸಲಿದ್ದಾರೆ. ಈ ಪ್ರಕ್ರಿಯೆಯನ್ನು ಡಿಮಸ್ಟರಿಂಗ್‌ ಎನ್ನಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಮೇಲೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಎಲ್ಲ ಮತಯಂತ್ರಗಳನ್ನು ತಂದು ಜೋಡಿಸಲಾಗುತ್ತದೆ. ಮೇ 13ರಂದು ಇಲ್ಲಿಯೇ ಮತ ಎಣಿಕೆ ಕಾರ್ಯ ನಡೆಯಲಿದೆ.

evm4

 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮೇ 9, 2023

Leave a Comment