ಮಳೆಗೆ ಮನೆ ಗೋಡೆ ಕುಸಿತ, ಡೆಂಗ್ಯು ನಿಯಂತ್ರಣಕ್ಕೆ ಆಯುಕ್ತರಿಗೆ ಮನವಿ – ಶಿವಮೊಗ್ಗದ 5 ಫಟಾಫಟ್‌ ನ್ಯೂಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 15 JULY 2024

ಬೊಮ್ಮನಕಟ್ಟೆಯಲ್ಲಿ ಮೂಲ ಸೌಕರ್ಯಕ್ಕೆ ಆಗ್ರಹ

SHIMOGA : ಬೊಮ್ಮನಕಟ್ಟೆ ಬಿ ಬ್ಲಾಕ್‌ನಲ್ಲಿ ಮೂಲ ಸೌಕರ್ಯ ಒದಗಿಬಸೇಕು ಎಂದು ಆಗ್ರಹಿಸಿ ಕದಂಬ ಕನ್ನಡ ವೇದಿಕೆ ವತಿಯಿಂದ ಶಿವಮೊಗ್ಗ ಮಹಾನಗರ ಪಾಲಿಕೆ (Palike) ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಬಿ ಬ್ಲಾಕ್‌ನ ಮೈಲಮ್ಮ ದೇಗುಲದ ಎದುರು ಚರಂಡಿ ವ್ಯವಸ್ಥೆ ಇಲ್ಲ. ರಸ್ತೆ ಸಮರ್ಪಕವಾಗಿಲ್ಲ. ಕೂಡಲೆ ಸಮಸ್ಯೆ ಪರಿಹರಿಸಬೇಕು ಎಂದು ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು. ರಾಜ್ಯಾಧ್ಯಕ್ಷ ವಿಶ್ವನಾಥ ಗೌಡ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

shivamoggalive.com

ಮಳೆಗೆ ಮನೆ ಗೋಡೆ ಕುಸಿತ

SHIMOGA : ನಿರಂತರ ಮಳೆಗೆ ಹಾರನಹಳ್ಳಿಯಲ್ಲಿ ಮನೆಯ ಗೋಡೆ ಕುಸಿದಿದೆ. ನವೀದ್‌ ಎಂಬುವವರ ಮನೆಯ ಒಂದು ಬದಿಯ ಗೋಡೆ ಇವತ್ತು ಕುಸಿದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇನ್ನಷ್ಟು ಮಳೆಯಾದರೆ ಮನೆ ಸಂಪೂರ್ಣ ಹಾನಿಯಾಗುವ ಸಾಧ್ಯತೆ ಇದೆ. ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

150724 Haranahalli house wall collapse Shimoga taluk

shivamoggalive.com

ಬೊಮ್ಮನಕಟ್ಟೆಯಲ್ಲಿ ಮೂಲ ಸೌಕರ್ಯಕ್ಕೆ ಆಗ್ರಹ

palike1

SHIMOGA : ಬೊಮ್ಮನಕಟ್ಟೆ ಬಿ ಬ್ಲಾಕ್‌ನಲ್ಲಿ ಮೂಲ ಸೌಕರ್ಯ ಒದಗಿಬಸೇಕು ಎಂದು ಆಗ್ರಹಿಸಿ ಕದಂಬ ಕನ್ನಡ ವೇದಿಕೆ ವತಿಯಿಂದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಬಿ ಬ್ಲಾಕ್‌ನ ಮೈಲಮ್ಮ ದೇಗುಲದ ಎದುರು ಚರಂಡಿ ವ್ಯವಸ್ಥೆ ಇಲ್ಲ. ರಸ್ತೆ ಸಮರ್ಪಕವಾಗಿಲ್ಲ. ಕೂಡಲೆ ಸಮಸ್ಯೆ ಪರಿಹರಿಸಬೇಕು ಎಂದು ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು. ರಾಜ್ಯಾಧ್ಯಕ್ಷ ವಿಶ್ವನಾಥ ಗೌಡ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

shivamoggalive.com

ನಗರದಲ್ಲಿ ಎರಡು ದಿನಕ್ಕೊಮ್ಮೆ ಔಷಧ ಸಿಂಪಡಿಸಿ

palike2

SHIMOGA : ನಗರದಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚಾಗಿವೆ. ಕೂಡಲೆ ಡೆಂಗ್ಯು ನಿಯಂತ್ರಣ ಸಂಬಂಧ ತಕ್ಷಣ ಕ್ರಮ ಕೈಗೊಳ್ಳಬೇಕು. ಎಲ್ಲಾ ವಾರ್ಡ್‌ಗಳಲ್ಲಿ ಎರಡು ದಿನಕ್ಕೆ ಒಮ್ಮೆ ಔಷಧ ಸಿಂಪಡಣೆ ಮಾಡಬೇಕು. ನಿರಂತರ ಸ್ವಚ್ಛತಾ ಕಾರ್ಯ ನಡೆಸಬೇಕು ಎಂದು ಕರ್ನಾಟಕ ನಾಡು ರಕ್ಷಣಾ ವೇದಿಕೆ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಅಧ್ಯಕ್ಷ ದಿನೇಶ್‌, ಪ್ರಧಾನ ಕಾರ್ಯದರ್ಶಿ ಸಂಕೇತ್‌, ನಗರ ಉಪಾಧ್ಯಕ್ಷ ಸಚಿನ್‌ ಗೌಡ ಸೇರಿದಂತೆ ಹಲವರು ಇದ್ದರು.

shivamoggalive.com

ಜೆಡಿಎಸ್‌ ಕಾರ್ಯದರ್ಶಿಯಾಗಿ ರಾಕೇಶ್‌ ಡಿಸೋಜಾ

palike3

SHIMOGA : ನಗರದ ಜೆಡಿಎಸ್ ಮುಖಂಡ ಅಲ್ಫೋನ್ಸ್ ರಾಕೇಶ್ ಡಿಸೋಜ ಅವರನ್ನು ಜಾತ್ಯತೀತ ಜನತಾದಳ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಜೆಡಿಎಸ್ ಅಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ನೇಮಿಸಿ ಆದೇಶಿಸಿದ್ದಾರೆ.

shivamoggalive.com

ಇದನ್ನೂ ಓದಿ ⇓

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ಮಳೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment