ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MARCH 2021
ಶಿವಮೊಗ್ಗದ ಎಂಆರ್‌ಎಸ್‌ಗೆ ಬರಲಿದೆ ಯುದ್ದ ಟ್ಯಾಂಕರ್, ಸರ್ಕಲ್‌ನಲ್ಲೇ ನಿಲ್ಲಲಿದೆ ಯುದ್ದ ವಿಮಾನ.
ಭಾರತೀಯ ಸೇನೆಯಲ್ಲಿ ಬಳಕೆಯಾಗಿ, ನಿರುಪಯುಕ್ತವಾಗಿರುವ ಯುದ್ದ ಟ್ಯಾಂಕರ್ ಮತ್ತು ಯುದ್ದ ವಿಮಾನಗಳನ್ನು ದೇಶದ ವಿವಿಧೆಡೆ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅದೆ ರೀತಿ ಶಿವಮೊಗ್ಗದಲ್ಲಿಯೂ ಯುದ್ದ ಟ್ಯಾಂಕರ್ ಮತ್ತು ವಿಮಾನವನ್ನು ಪ್ರದರ್ಶನಕ್ಕೆ ಇರಿಸಲು ನಿರ್ಧರಿಸಲಾಗಿದೆ.
ನಿರುಪಯುಕ್ತವಾಗಿರುವ ಒಂದು ಯುದ್ದ ಟ್ಯಾಂಕರ್ ಮತ್ತು ಒಂದು ಯುದ್ದ ವಿಮಾನವನ್ನು ಶಿವಮೊಗ್ಗಕ್ಕೆ ಕಳುಹಿಸಲು ರಕ್ಷಣಾ ಸಚಿವರು ಒಪ್ಪಿಗೆ ನೀಡಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅವರು ಈ ಕುರಿತು ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದರು. ಇವೆರಡನ್ನು ನಗರದ ಪ್ರಮುಖ ಸ್ಥಳದಲ್ಲಿ ಇರಿಸಬೇಕಿದ್ದು, ಈ ಕುರಿತು ಸೈನಿಕ ಕಲ್ಯಾಣ ಇಲಾಖೆ ಅಧಿಕಾರಿಗಳು ಮಹಾನಗರ ಪಾಲಿಕೆ ಮೇಯರ್ ಮತ್ತು ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದಾರೆ.
ʼಶಿವಮೊಗ್ಗದ ಎಂಆರ್‌ಎಸ್ ಸರ್ಕಲ್‌ನಲ್ಲಿ ಇವರೆಡನ್ನು ಇರಿಸುವ ಯೋಚನೆ ಇದೆ. ಸಹ್ಯಾದ್ರಿ ಕಾಲೇಜು ಇರುವುದರಿಂದ ಮತ್ತು ಯುವ ಸಮೂಹ ಹೆಚ್ಚು ಓಡಾಡುವ ಜಾಗವಾಗಿರುವುರಿಂದ, ಅಲ್ಲಿಯೇ ಯುದ್ದ ಟ್ಯಾಂಕರ್ ಮತ್ತು ಯುದ್ದ ವಿಮಾನವನ್ನು ಇರಿಸಲಾಗುತ್ತದೆ. ಇದಕ್ಕಾಗಿ ಮೂರು ಲಕ್ಷ ರೂ. ಮೀಸಲಿರಸಲಾಗಿದೆʼ ಎಂದು ಶಿವಮೊಗ್ಗ ಪಾಲಿಕೆ ಮೇಯರ್ ಸನೀತಾ ಅಣ್ಣಪ್ಪ ತಿಳಿಸಿದರು.
ವಿಡಿಯೋ ರಿಪೋರ್ಟ್
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]