ಶಿವಮೊಗ್ಗದಲ್ಲಿ ನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್‌, ಎಲ್ಲೆಲ್ಲಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ನಗರದ ನಿವಾಸಿಗಳಿಗೆ ನೀರಿನ ಕಂದಾಯ (water tax) ಮತ್ತು ಬಾಕಿ ಮೊತ್ತವನ್ನು ಪಾವತಿಸಲು ಅನುಕೂಲವಾಗುವಂತೆ ಮಾರ್ಚ್ 1ರಂದು ನಗರದ ಐದು ಪ್ರಮುಖ ಸ್ಥಳಗಳಲ್ಲಿ ವಿಶೇಷ ಕರ ವಸೂಲಾತಿ ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ.

ವಿಶೇಷ ಕೌಂಟರ್ ಇರುವ ಸ್ಥಳಗಳು

ಎಂ.ಕೆ.ಕೆ. ರಸ್ತೆ: ಗಾಯತ್ರಿ ವಿದ್ಯಾಮಂದಿರದ ಆವರಣ, ಟಿಪ್ಪು ನಗರ: 1ನೇ ತಿರುವಿನ ಮಿಲತ್ ಶಾಲೆ ಮುಂಭಾಗ, ಸೂಳೇಬೈಲ್: ಮುಖ್ಯರಸ್ತೆಯ ದುರ್ಗಮ್ಮನ ದೇವಸ್ಥಾನದ ಹತ್ತಿರ, ಅಶೋಕನಗರ: ನಂದಿನಿ ಬೂತ್ ಹತ್ತಿರ, ವಿನೋಬನಗರ (ಕಲ್ಲಹಳ್ಳಿ): ಅಭಿಷ್ಟವರ ಗಣಪತಿ ದೇವಸ್ಥಾನದ ಹತ್ತಿರ,

Drinking-Water-Tap

2025-26 ನೇ ಸಾಲಿನ ನೀರಿನ ಕಂದಾಯ ಹಾಗೂ ಈ ಹಿಂದಿನ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಈ ವಿಶೇಷ ಕೌಂಟರ್‌ಗಳ ಸದುಪಯೋಗ ಪಡೆದುಕೊಂಡು ದಂಡ ರಹಿತವಾಗಿ ಅಥವಾ ಸಕಾಲದಲ್ಲಿ ತೆರಿಗೆ ಪಾವತಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಇದನ್ನೂ ಓದಿ – ಸಂತೆಕಡೂರು ಬಳಿ ಅಪಘಾತ, ಓರ್ವ ಸಾವು, ಮತ್ತೊಬ್ಬನ ಕಾಲು ಕಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment