ಗಾಳಿ, ಮಳೆಗೆ ಹಾನಿಯಾಯ್ತು ಮನೆಯ ಶೀಟ್‌, ಹಾರಿ ಬಂದು ಹೈವೆ ರಸ್ತೆಯ ಸಿಸಿ ಕ್ಯಾಮರಾ ಕಂಬದಲ್ಲಿ ಜೋತಾಡ್ತಿದೆ ಫ್ಲೆಕ್ಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 29 MAY 2023

SHIMOGA : ನಗರದ ವಿವಿಧೆಡೆ ಸಂಜೆ ವೇಳೆಗೆ ಬೀಸಿದ ಜೋರು ಗಾಳಿಯಿಂದ (Wind Effect) ಮರಗಳು ಧರೆಗುರುಳಿವೆ. ಮನೆಗಳಿಗೆ ಹಾನಿಯಾಗಿದೆ. ಇನ್ನು, ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

Wind-effect-on-house-and-smart-city-camera

ಗಾಳಿಯಂದ ಹಲವೆಡೆ ಹಾನಿ

ಜೋರು ಗಾಳಿಗೆ ಹಾರಿ ಬಂದ ಫ್ಲೆಕ್ಸ್‌ ಸ್ಮಾರ್ಟ್‌ ಸಿಟಿ ಸಿಸಿಟಿವಿ ಕ್ಯಾಮರಾದ ಕಂಬದ ಮೇಲೆ ಜೋತಾಡುತ್ತಿದೆ. ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಅಶೋಕ ಗ್ರ್ಯಾಂಡ್‌ ಹೊಟೇಲ್‌ ಮುಂಭಾಗ ಘಟನೆ ಸಂಭವಿಸಿದೆ. ತಕ್ಷಣ ಫ್ಲೆಕ್ಸ್‌ ತೆರವು ಮಾಡದೆ ಇದ್ದರೆ ಅತ್ಯಾಧುನಿಕ ಸಿಸಿಟಿವಿ ಹಾನಿಯಾಗುವ ಸಾಧ್ಯತೆ ಇದೆ. ಅಲ್ಲದೆ ಈ ಫ್ಲೆಕ್ಸ್‌ನಿಂದಾಗಿ ವಾಹನ ಸವಾರರಿಗು ತೊಂದರೆ ಆಗಬಹುದಾಗಿದೆ.

Flex on Smart city cc camera at Sagara Road

ಸೋಮಿನಕೊಪ್ಪದ ಭೋವಿ ಕಾಲೋನಿಯಲ್ಲಿ ಗಾಳಿ, ಮಳೆಗೆ ಮನೆಯೊಂದಕ್ಕೆ ಹಾನಿಯಾಗಿದೆ. ಮನೆ ಮೇಲಿನ ಶೀಟುಗಳೆಲ್ಲ ಗಾಳಿಗೆ ಹಾರಿ ಹೋಗಿದೆ. ಮನೆಯಲ್ಲಿದ್ದ ವಿವಿಧ ವಸ್ತುಗಳು ಹಾನಿಯಾಗಿವೆ. ಗೋಪಿನಾಥ್‌ ಎಂಬುವವರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾರಿಗೂ ಸಮಸ್ಯೆಯಾಗಿಲ್ಲ.

ಇದನ್ನೂ ಓದಿ – BREAKING NEWS – ಶಿವಮೊಗ್ಗ ನಗರದಲ್ಲಿ ಸಿಡಿಲು ಬಡಿದು ಮಹಿಳೆ ಸಾವು

ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆ ಬಳಿ ತೆಂಗಿನ ಮರ ಬಿದ್ದು ಎರಡು ಕಾರುಗಳು ಜಖಂ ಆಗಿವೆ. ಈ ಪೈಕಿ ಒಂದು ಹೊಸ ಕಾರು. ಘಟನೆಯಿಂದಾಗಿ ಮ್ಯಾಕ್ಸ್‌ ಆಸ್ಪತ್ರೆ ಮುಂಭಾಗ ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆಗಳಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

Tree-Fall-on-Cars-at-Shimoga-near-Maxx-Hospital

ದೈವಜ್ಞ ಕಲ್ಯಾಣ ಮಂಟಪದ ಬಳಿ ತೆಂಗಿನ ಮರ ಬುಡಮೇಲಾಗಿದೆ. ವಿದ್ಯುತ್‌ ತಂತಿಗಳ ಮೇಲೆ ಮರ ಬಿದ್ದಿದ್ದರಿಂದ ಸುತ್ತಮುತ್ತಲು ವಿದ್ಯುತ್‌ ಕಡಿತವಾಗಿದೆ.

ಜೋರು ಮಳೆ ಸಾಧ್ಯತೆ

ಶಿವಮೊಗ್ಗದಲ್ಲಿ ಕೆಲವು ದಿನದಿಂದ ಬಿಸಿಲಿನ ಧಗೆ ಹೆಚ್ಚಾಗಿತ್ತು. ಇದರಿಂದಾಗಿ ಜನರು ಹೈರಾಣಾಗಿದ್ದರು. ಈಗ ಗಾಳಿ, ಮಳೆಯಿಂದಾಗಿ ವಾತಾವರಣ ತಂಪೆನಿಸಿದೆ. ನಗರದಲ್ಲಿ ರಾತ್ರಿ ಜೋರು ಮಳೆಯಾಗುವ ಸಾಧ್ಯತೆ ಇದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment