ಶಿವಮೊಗ್ಗದಲ್ಲಿ ಮಹಿಳಾ ನೌಕರರಿಗೆ ಕ್ರೀಡೆ, ಮನರಂಜನಾ ಸ್ಪರ್ಧೆಗಳು, ಯಾವ್ಯಾವ ಸ್ಪರ್ಧೆಗಳಿವೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ (government employees) ಸಂಘದ ಜಿಲ್ಲಾ ಘಟಕದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏ.11 ರಂದು ಬೆಳಗ್ಗೆ 9 ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಮಹಿಳಾ ಸರಕಾರಿ ನೌಕರರಿಗಾಗಿ ವಿವಿಧ ಕ್ರೀಡೆ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ  ಆರ್.ಮೋಹನ್‌ ಕುಮಾರ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Shivamogga-Live-Number-1-Website

ಏನೇನೆಲ್ಲ ಸ್ಪರ್ಧೆಗಳು ಇರಲಿವೆ?

ಮ್ಯೂಸಿಕಲ್‌ ಚೇರ್‌,  ಕ್ಯಾಂಡಲ್‌ ಹಚ್ಚುವುದು, ಲೆಮನ್‌ ಅಂಡ್‌ ಸ್ಪೂನ್‌, ಬಾಲ್‌ ಇನ್‌ ದಿ ಬಕೆಟ್‌, ಹಗ್ಗ ಜಗ್ಗಾಟ , ಮೆಮೋರಿ ಟೆಸ್ಟ್‌, ಬಲೂನ್‌ ಅಂಡ್‌ ಕಪ್‌ ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲಾಗುವುದು.

Sarkari-Naukarara-Bhavana-in-Shimoga

ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹3000, ದ್ವಿತೀಯ ₹2000 ಹಾಗೂ ತೃತೀಯ ಬಹುಮಾನವಾಗಿ ₹1000 ನೀಡಲಾಗುವುದು. ಗುಂಪು ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಪ್ರಥಮ ₹6000 ಹಾಗೂ ದ್ವಿತೀಯ ಬಹುಮಾನ ₹4000 ನೀಡಲಾಗುವುದು. ಒಬ್ಬ ಮಹಿಳೆ ಎರಡು ಸ್ಪರ್ಧೆಯಲ್ಲಿ ವಿಜೇತರಾದರೆ, ಉಳಿದ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.

ಇದನ್ನೂ ಓದಿ : ‘ಸರ್ಕಾರಿ ನೌಕರರ ಸಂಘ ಇದೇ ಮೊದಲು ಬೃಹತ್‌ ಯೋಜನೆಗೆ ಕೈ ಹಾಕಿದೆ, ದೇಶದಲ್ಲೇ ವಿನೂತನ ಪ್ರಯತ್ನʼ

ಕ್ರೀಡೆ ಮತ್ತು ಮನರಂಜನಾ ಸ್ಪರ್ಧೆಗಳಿಗೆ ಭಾಗವಹಿಸುವ ಮಹಿಳಾ ನೌಕರರು ಏ.11 ರ ಬೆಳಗ್ಗೆ 9 ಗಂಟೆಯೊಳಗೆ ಹೆಸರು ನೋಂದಾಯಿಸಬೇಕು. ಗುರುತಿನ ಚೀಟಿಯೊಂದಿಗೆ ಬಂದು ಕಡ್ಡಾಯ ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷ ಮೋಹನ್‌ ಕುಮಾರ್‌ ಮನವಿ ಮಾಡಿದ್ದಾರೆ. 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 7, 2026

ಸಾಗರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸೂಚನೆ, ಎಲ್ಲಿ?

ಸಾಗರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸೂಚನೆ, ಎಲ್ಲಿ?

ಶಿವಮೊಗ್ಗದ ವಿದ್ಯಾರ್ಥಿನಿಗೆ ಸಂಕಷ್ಟ ತಂದ ಇನ್‌ಸ್ಟಾಗ್ರಾಂ ಲಿಂಕ್‌, ಆಗಿದ್ದೇನು?

ಶಿವಮೊಗ್ಗದ ವಿದ್ಯಾರ್ಥಿನಿಗೆ ಸಂಕಷ್ಟ ತಂದ ಇನ್‌ಸ್ಟಾಗ್ರಾಂ ಲಿಂಕ್‌, ಆಗಿದ್ದೇನು?

ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಯುವಕ ಸಾವು, ತೋಟದ ಬಳಿ ಪತ್ತೆಯಾಯ್ತು ಮೃತದೇಹ

ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಯುವಕ ಸಾವು, ತೋಟದ ಬಳಿ ಪತ್ತೆಯಾಯ್ತು ಮೃತದೇಹ

ಶಿವಮೊಗ್ಗದ ಈ ಬಡಾವಣೆ ಇನ್ಮುಂದೆ ಎಸ್.‌ ಬಂಗಾರಪ್ಪ ಬಡಾವಣೆ

ಶಿವಮೊಗ್ಗದ ಈ ಬಡಾವಣೆ ಇನ್ಮುಂದೆ ಎಸ್.‌ ಬಂಗಾರಪ್ಪ ಬಡಾವಣೆ

ಭೂಮಾಪಕನಿಗೆ ಕಾರು ಡಿಕ್ಕಿ, ಆಸ್ಪತ್ರೆಗೆ ದಾಖಲು, ಶಸ್ತ್ರಚಿಕಿತ್ಸೆ, ಎಲ್ಲಿ? ಹೇಗಾಯ್ತು ಘಟನೆ?

ಭೂಮಾಪಕನಿಗೆ ಕಾರು ಡಿಕ್ಕಿ, ಆಸ್ಪತ್ರೆಗೆ ದಾಖಲು, ಶಸ್ತ್ರಚಿಕಿತ್ಸೆ, ಎಲ್ಲಿ? ಹೇಗಾಯ್ತು ಘಟನೆ?

ಶಿವಮೊಗ್ಗದ ಇಬ್ಬರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪುರಸ್ಕಾರ

ಶಿವಮೊಗ್ಗದ ಇಬ್ಬರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪುರಸ್ಕಾರ

ಇಂಟರ್‌ಸಿಟಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದ ಮಹಿಳೆ, ಮನೆ ತಲುಪಿದ ಮೇಲೆ ಕಾದಿತ್ತು ಆಘಾತ

ಇಂಟರ್‌ಸಿಟಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದ ಮಹಿಳೆ, ಮನೆ ತಲುಪಿದ ಮೇಲೆ ಕಾದಿತ್ತು ಆಘಾತ

ರಾಜ್ಯಾದ್ಯಂತ ಜಿಮ್‌ಗಳಲ್ಲಿ ತನಿಖೆಗೆ ಆಗ್ರಹ, ಶಿಕಾರಿಪುರ, ತೀರ್ಥಹಳ್ಳಿಯಲ್ಲಿ ಪ್ರತಿಭಟನೆ

ರಾಜ್ಯಾದ್ಯಂತ ಜಿಮ್‌ಗಳಲ್ಲಿ ತನಿಖೆಗೆ ಆಗ್ರಹ, ಶಿಕಾರಿಪುರ, ತೀರ್ಥಹಳ್ಳಿಯಲ್ಲಿ ಪ್ರತಿಭಟನೆ

ಬೈಕ್‌ಗೆ ದಿಢೀರ್‌ ಅಡ್ಡಬಂದ ಕಾಡುಪ್ರಾಣಿ, ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಸವಾರ ಸಾವು

ಬೈಕ್‌ಗೆ ದಿಢೀರ್‌ ಅಡ್ಡಬಂದ ಕಾಡುಪ್ರಾಣಿ, ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಸವಾರ ಸಾವು

ಕೆಎಫ್‌ಡಿ ಸೋಂಕು, ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಬ್ಬರು ಸಾವು, ಸದ್ಯ ಸೋಂಕಿತರ ಸಂಖ್ಯೆ ಎಷ್ಟಿದೆ?

ಕೆಎಫ್‌ಡಿ ಸೋಂಕು, ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಬ್ಬರು ಸಾವು, ಸದ್ಯ ಸೋಂಕಿತರ ಸಂಖ್ಯೆ ಎಷ್ಟಿದೆ?

Leave a Comment