ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ, 4 ಸಾವಿರಕ್ಕು ಹೆಚ್ಚು ಮಂದಿ ಭಾಗಿ, ಕಾರಣವೇನು?

ಶಿವಮೊಗ್ಗ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸೇವೆಯನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ಅ.16ರಿಂದ ರಾಮನಗರದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ನವ ಕರ್ನಾಟಕ ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು, ಯುಆರ್ ಡಬ್ಲ್ಯು ವಿಶೇಷಚೇತನರ ಗೌರವಧನ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷೆ ಎಸ್. ಯಶೋಧ ಆಗ್ರಹಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸೇವಾ ಭದ್ರತೆ ಇಲ್ಲವಾಗಿದೆ. ಇದರ ಜತೆಗೆ ವಿಶೇಷಚೇತನರಿಗೆ ಸರ್ಕಾರ ನೀಡುತ್ತಿದ್ದ ಪಿಂಚಣಿ ಕಡಿತಗೊಳಿಸಿರುವುದು ನೋವು ತಂದಿದೆ. ವಿಶೇಷಚೇತನರ ವಿಷಯದಲ್ಲಿ ಸರ್ಕಾಋ ತಾರತಮ್ಯ ಅನುಸರಿಸುತ್ತಿದೆ ಎಂದು ಆರೋಪಿಸಿದರು.

Padayathre-From-Ramanagara-to-Bangalore-Vidhanasoudha

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸೇವೆ ಕಾಯಂ ಮಾಡಬೇಕು. ಮಾಸಿಕ ಗೌರವಧನವನ್ನು ಕನಿಷ್ಠ ₹5,000ಕ್ಕೆ ಹೆಚ್ಚಿಸಬೇಕು. ತಡೆ ಹಿಡಿದಿರುವ ಗೌರವಧನ ಕೂಡಲೆ ಬಿಡುಗಡೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪಾದಯಾತ್ರೆಯ ಮೂಲಕ ಆಗ್ರಹಿಸಲಿದ್ದೇವೆ ಎಂದರು.

ಪಾದಯಾತ್ರೆಯಲ್ಲಿ ರಾಜ್ಯದ 4 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಸಮಿತಿ ಹಾಗೂ ವಿಶೇಷಚೇತನರ ಗೌರವಧನ ಕಾರ್ಯಕರ್ತರ ಸಂಘವು ಪಾದಯಾತ್ರೆಗೆ ಬೆಂಬಲ ಸೂಚಿಸಿವೆ ಎಂದರು. ಕೆ.ಎಸ್. ಚಂದ್ರಯ್ಯ, ಬಸವರಾಜ, ರಮೇಶ್, ನಾಸಿರ್, ಗಂಗಾಧರ್, ಗಜೇಂದ್ರ, ಹನುಮಂತ ಇದ್ದರು.