ಶಿವಮೊಗ್ಗ ಲೈವ್.ಕಾಂ | SHIMOGA NEWS | 23 JANUARY 2021
ಕಲ್ಲಗಂಗೂರಿನ ಸ್ಪೋಟದಲ್ಲಿ ಮೃತರೆಷ್ಟು, ಗಾಯಗೊಂಡವರೆಷ್ಟು ಅನ್ನುವುದು ಜಿಲ್ಲಾಡಳಿತಕ್ಕೂ ಗೊಂದಲವಾಗಿದೆ. ಮೃತದೇಹದ ಶೋಧ ಕಾರ್ಯ ನಡೆಯುತ್ತಿದೆ. ಈ ನಡುವೆ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಬೇರೆಡೆಗೆ ಶಿಫ್ಟ್ ಮಾಡಿರುವ ಅನುಮಾನ ಮೂಡಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸ್ಪೋಟದ ಸಂಭವಿಸಿದ ಕ್ವಾರಿಯಲ್ಲಿ 20ಕ್ಕೂ ಹೆಚ್ಚು ಕಾರ್ಮಿಕರಿದ್ದರು ಎಂದು ಹೇಳಲಾಗುತ್ತಿದೆ. ಇವರೆಲ್ಲ ಹೊರ ರಾಜ್ಯದಿಂದ ಬಂದವರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಪೋಟವಾಗುತ್ತಿದ್ದಂತೆ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಇಲ್ಲಿರುವ ಶೆಡ್‍ನಲ್ಲಿ ಬಟ್ಟೆ, ವಸ್ತುಗಳನ್ನೆಲ್ಲ ಬಿಟ್ಟು ಕಾರ್ಮಿಕರು ಪರಾರಿಯಾಗಿದ್ದಾರೆ.
ಘಟನೆ ವೇಳೆ ಕಾರ್ಮಿಕರು ಮಲಗಲು ಸಿದ್ಧವಾಗಿದ್ದರು ಅನ್ನುವುದಕ್ಕೆ ಕೊಠಡಿಯೊಳಗಿನ ಚಾಪೆ, ಬೆಡ್‍ಶೀಟ್‍ಗಳು ಸಾಕ್ಷಿಯಾಗಿವೆ.
ಇನ್ನು, ಕಾರ್ಮಿಕರು ನಾಯಿಯೊಂದನ್ನು ಸಾಕಿದ್ದರು. ಅದು ಮರಿಗಳನ್ನು ಹಾಕಿದ್ದು, ಅವುಗಳಿನ್ನೂ ಕಣ್ಣು ಬಿಟ್ಟಿಲ್ಲ. ಸ್ಪೋಟದಲ್ಲಿ ನಾಯಿಗಾಗಲಿ, ಮರಿಗಳಿಗಾಗಿ ಹಾನಿಯಾಗಿಲ್ಲ. ಆ ನಾಯಿಗೆ ಕಾರ್ಮಿಕರು ಊಟವನ್ನು ಹಾಕಿದ್ದರು.
‘ಇಲ್ಲಿದ್ದ ಕಾರ್ಮಿಕರನ್ನು ಮಾಲೀಕರೆ ಯಾವುದಾದರೂ ಜಾಗದಲ್ಲಿ ಇರಿಸಿರುವ ಸಾದ್ಯತೆ ಇದೆ. ಯಾವುದೆ ವಿಚಾರವನ್ನು ಅವರು ಬಾಯಿಬಿಡದಂತೆ ನೋಡಿಕೊಂಡಿರಬಹುದು’ ಎಂದು ಸ್ಥಳೀಯರು ಆನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]