ಶಿವಮೊಗ್ಗ: ಮಿದುಳು ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದಿಂದ ಮುಂಬೈಗ್‌ಗೆ ಏರ್‌ಲಿಫ್ಟ್ (Airlift) ಮಾಡಲಾಗಿದೆ. ಶಿವಮೊಗ್ಗದ ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ ಯುವತಿ ಇದ್ದ ಆಂಬುಲೆನ್ಸ್‌ಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. (ಈ ಸುದ್ದಿಯನ್ನು ಇನ್ನು 116 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಗಾಂಧಿ ಬಜಾರ್‌ನ ಮಾನ್ಯಾ (21) ಎಂಬುವವರು ಮಿದುಳು ಜ್ವರದ ಚಿಕಿತ್ಸೆಗೆ ಶಿವಮೊಗ್ಗದ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮುಂಬೈನ್ ರಿಲಯನ್ಸ್ ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ಯಲಾಗಿದೆ.
ವಿಮಾನ ನಿಲ್ದಾಣಕ್ಕೆ ಜೀರೋ ಟ್ರಾಫಿಕ್

ಮಾನ್ಯಾ ಅವರನ್ನು ತುರ್ತಾಗಿ ಕರೆದೊಯ್ಯಬೇಕಿದ್ದರಿಂದ ಅವರ ಕುಟುಂಬದವರು ಜೀರೋ ಟ್ರಾಫಿಕ್ ಒದಗಿಸುವಂತೆ ಶಿವಮೊಗ್ಗ ಪೊಲೀಸರಿಗೆ ಮನವಿ ಮಾಡಿದ್ದರು. ಅದರಂತೆ ನಂಜಪ್ಪ ಆಸ್ಪತೆಯಿಂದ ವಿಮಾನ ನಿಲ್ದಾಣದವರೆಗೆ ಜೀರೋ ಟ್ರಾಫಿಕ್ ಮಾಡಲಾಗಿತ್ತು. ಆಂಬುಲೆನ್ಸ್ ತೆರಳುವ ಮಾರ್ಗದಲ್ಲಿ ಸರ್ಕಲ್‌ಗಳಲ್ಲಿ ಸಿಗ್ನಿಲ್ ರಹಿತಗೊಳಿಸಲಾಗಿತ್ತು.
» ಡಾಕ್ಟರ್ ಹೇಳಿದ್ದೇನು?
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ನಂಜಪ್ಪ ಆಸ್ಪತ್ರೆಯ ಐಸಿಯು ಕೇರ್ ವಿಭಾಗ ತಜ್ಞ ಡಾ. ರಾಕೇಶ್, ಮುಂಬೈನಿಂದ ಇತ್ತೀಚೆಗೆ ಶಿವಮೊಗ್ಗಕ್ಕೆ ಆಗಮಿಸಿದ್ದ ಮಾನ್ಯಾ ಜೈನ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಏಳು ದಿನದಿಂದ ಜ್ವರದಿಂದ ಬಳಲುತ್ತಿದ್ದ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅಲ್ಲಿ ಡೆಂಗ್ಯು ಜ್ವರ ಎಂದು ಗೊತ್ತಾಗಿತ್ತು ಎಂದರು.
ಲಿವರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವಿವಿಧ ಟೆಸ್ಟ್‌ಗಳಲ್ಲಿ ಗೊತ್ತಾಗಿತ್ತು. ಉಸಿರಾಟದ ಸಮಸ್ಯೆಯು ಎದುರಾಗಿತ್ತು. ತುರ್ತು ಚಿಕಿತ್ಸೆ ಅಗತ್ಯವಿದ್ದರಿಂದ ಶುಕ್ರವಾರ ಮಧ್ಯಾಹ್ನ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಕೂಡಲೆ ಅವರಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಿ ಚಿಕಿತ್ಸೆ ನಡೆಸಲಾಯಿತು ಎಂದು ಹೇಳಿದರು.

ಲಿವರ್ ಫೇಲ್ ಆಗುವ ಸಾಧ್ಯತೆ ಇದ್ದರಿಂದ ಹೆಚ್ಚಿನ ಚಿಕಿತ್ಸೆ ಅಗತ್ಯವಿತ್ತು. ಅಲ್ಲದೆ ಲಿವರ್ ಕಸಿಗೆ ಪೂರಕವಾಗಿರುವ ಅಸ್ಪತ್ರೆಗೆ ಹುಡುಕಾಟ ನಡೆಸುವಾಗ ಅವರ ಕುಟುಂಬದವರು ಮುಂಬೈಗೆ ಕರೆದೊಯ್ಯಲು ನಿರ್ಧರಿಸಿದ್ದರು. ಡೆಂಗ್ಯು ಪ್ರಕರಣಗಳಲ್ಲಿ ನೂರರಲ್ಲಿ ಶೇ.1ರಷ್ಟು ಪ್ರಕರಣಗಳು ಮಾತ್ರ ಇಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯೋ ಮಳೆ, ಇವತ್ತೂ ಹವಾಮಾನ ಇಲಾಖೆಯಿಂದ ಎಚ್ಚರಿಕೆ, ಎಲ್ಲೆಡೆ ರಜೆ
ವಿಶೇಷ ವಿಮಾನದಲ್ಲಿ ಮುಂಬೈಗೆ
ವಿಮಾನ ನಿಲ್ದಾಣದ ಒಳಗೆ ವಿಮಾನದವರೆಗೆ ಆಂಬುಲೆನ್ಸ್ ತೆರಳಲು ವ್ಯವಸ್ಥೆ ಮಾಡಲಾಗಿತ್ತು. ವಿಮಾನದ ಬಳಿ ಆಂಬುಲೆನ್ಸ್‌ನಿಂದ ಏರ್ ಆಂಬುಲೆನ್ಸ್ ಮಾನ್ಯಾಳನ್ನು ಶಿಫ್ಟ್ ಮಾಡಲಾಯಿತು. ಇಲ್ಲಿಂದ ನೇರವಾಗಿ ವಿಮಾನ ಮುಂಬೈ ತಲುಪಲಿದೆ. ಇಲ್ಲಿದೆ ವಿಡಿಯೋ
ಹಿಂದೆಯೂ ಆಗಿತ್ತು ಏರ್‌ಲಿಫ್ಟ್
ಶಿವಮೊಗ್ಗದಿಂದ ಈ ಹಿಂದೆಯ ಏರ್ ಆಂಬುಲೆನ್ಸ್ ಮೂಲಕ ವ್ಯಕ್ತಿಯೊಬ್ಬರನ್ನು ಏರ್ ಲಿಫ್ಟ್ ಮಾಡಲಾಗಿತ್ತು. 2024ರ ಜನವರಿ 11ರಂದು ಗಾಂಧಿ ಬಜಾರ್‌ನ ಚೇತನ್ ಎಂಬುವವರನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಏರ್‌ಲಿಫ್ಟ್ ಮಾಡಲಾಗಿತ್ತು. ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ಮಾಣ ಆದ ಬಳಿಕ ಏರ್ ಆಂಬುಲೆನ್ಸ್ ಮೂಲಕ ಏರ್‌ಲಿಫ್ಟ್ ಮಾಡಿದ ಮೊದಲ ಪ್ರಕರಣ ಇದಾಗಿತ್ತು.
