ಮಕ್ಕಳ ಕಳ್ಳನೆಂದು ಯುವಕನಿಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದರು, ವಿಚಾರಣೆ ವೇಳೆ ಅಸಲಿ ಸಂಗತಿ ಬಯಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಮಕ್ಕಳ ಕಳ್ಳ ಎಂದು ಭಾವಿಸಿ ಯುವಕನೊಬ್ಬನನ್ನು ಥಳಿಸಲಾಗಿದೆ (YOUTH ATTACK). ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಮಕ್ಕಳ ಕಳ್ಳನಲ್ಲ ಎಂದು ಗೊತ್ತಾಗಿದೆ. ಹಾಗಾಗಿ ಆತನನ್ನು ಬಿಟ್ಟು ಕಳುಹಿಸಿದ್ದಾರೆ.

Shimoga Nanjappa Hospital

ಶಿವಮೊಗ್ಗದ ಆರ್.ಎಂ.ಎಲ್ ನಗರದಲ್ಲಿ ಘಟನೆ ಸಂಭವಿಸಿದೆ. ಮಕ್ಕಳ ಹಿಂದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರಿಂದ ಸಾರ್ವಜನಿಕರು ಈತನನ್ನು ಮಕ್ಕಳ ಕಳ್ಳ ಎಂದು ಭಾವಿಸಿ ಹಿಡಿದು ಥಳಿಸಿದ್ದಾರೆ.

ಏನಿದು ಪ್ರಕರಣ? (YOUTH ATTACK)

ಆರ್.ಎಂ.ಎಲ್ ನಗರದಲ್ಲಿ ಯುವಕನೊಬ್ಬ (YOUTH ATTACK) ಆಂಗ್ಲ ಶಾಲೆಯೊಂದರ ಬಳಿ ಮಕ್ಕಳ ಹಿಂದೆ ಹೋಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಆತ ಮಕ್ಕಳ ಕಳ್ಳ ಇರಬೇಕು ಎಂದು ಭಾವಿಸಿ ಪ್ರಶ್ನೆ ಮಾಡಿದ್ದಾರೆ. ಗುಂಪುಗೂಡಿದ ಸಾರ್ವಜನಿಕರು ಯುವಕನನ್ನು ಥಳಿಸಿದ್ದಾರೆ. ಪೊಲೀಸರನ್ನು ಕರೆಯಿಸಿ ಆತನನ್ನು ಒಪ್ಪಿಸಿದ್ದಾರೆ.

ವಿಚಾರಣೆ ಆರಂಭಿಸಿದ ಪೊಲೀಸ್ (YOUTH ATTACK)

ಯುವಕನನ್ನು ಠಾಣೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿದರು. ಯುವಕನ ಕುಟುಂಬದವರನ್ನು ಕರೆಯಿಸಿ ಅವರಿಂದಲು ಮಾಹಿತಿ ಪಡೆದರು. ಆಗ ಆತ ಮಕ್ಕಳ ಕಳ್ಳನಲ್ಲ ಎಂದು ದೃಢವಾಗಿದೆ. ಹಾಗಾಗಿ ಯುವಕನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

ಅಲ್ಲಿಗೇಕೆ ಬಂದಿದ್ದ ಯುವಕ?

ಗೋಪಾಳದ ನಿವಾಸಿಯಾದ ಯುವಕ ಹಣಕಾಸು ವಿಚಾರ ಸಂಬಂಧ ತನ್ನ ಸ್ನೇಹಿತನೊಂದಿಗೆ ಆರ್.ಎಂ.ಎಲ್ ನಗರಕ್ಕೆ ಆಗಮಿಸಿದ್ದ. ಯುವಕನ ಸ್ನೇಹಿತ ಅಲ್ಲಿರುವ ಮನೆಯೊಳಗೆ ಹೋಗಿದ್ದು, ಬಹು ಹೊತ್ತು ಹೊರ ಬಂದಿರಲಿಲ್ಲ. ಅಷ್ಟು ಹೊತ್ತಿಗೆ ಯುವಕನ ಮೊಬೈಲ್ ಗೆ ಕರೆ ಬಂದಿದೆ. ಮೊಬೈಲ್ ನಲ್ಲಿ ಮಾತನಾಡುತ್ತ ಶಾಲೆಗೆ ತೆರಳುತ್ತಿದ್ದ ಮಕ್ಕಳ ಹಿಂದೆ ಹೋಗಿದ್ದಾನೆ.

ಕ್ಲಿಕ್ ಮಾಡಿ ಇದನ್ನೂ ಓದಿ ಮಕ್ಕಳ ಕಳ್ಳರು ವದಂತಿ, ಕಂಡ ಕಂಡವರ ಮೇಲೆ ದಾಳಿ, ಶಿವಮೊಗ್ಗ, ಸಾಗರದಲ್ಲಿ ಪ್ರಕರಣ

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಕಳ್ಳರ ವದಂತಿ ಗಮನಿಸಿದ್ದ ಸ್ಥಳೀಯರು, ಯುವಕನನ್ನು ಮಕ್ಕಳ ಕಳ್ಳ ಎಂದು ಭಾವಿಸಿ ಹಿಡಿದು ಥಳಿಸಿದ್ದಾರೆ.

ವದಂತಿ ತಂದ ಫಜೀತಿ

ದೇಶಾದ್ಯಂತ ಮಕ್ಕಳ ಕಳ್ಳರ ವದಂತಿ ಹಬ್ಬಿದೆ. ಇದೆ ಕಾರಣಕ್ಕೆ ಕಂಡ ಕಂಡವರನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಲಾಗುತ್ತಿದೆ. ವದಂತಿಯಂದಾಗಿ ಶಿವಮೊಗ್ಗ ಮತ್ತು ಸಾಗರದಲ್ಲಿ ಮೂವರ ಮೇಲೆ ದಾಳಿಯಾದ ವರದಿಯಾಗಿದೆ. ಪೊಲೀಸ್ ಇಲಾಖೆ ಕೂಡ ಮಕ್ಕಳ ಕಳ್ಳರ ವದಂತಿ ನಂಬದಂತೆ ಜನರಿಗೆ ಮನವಿ ಮಾಡಿದೆ.

RL Jalappa Academy

ಕ್ಲಿಕ್ ಮಾಡಿ ಇದನ್ನೂ ಓದಿ ಮಾಚೇನಹಳ್ಳಿಯ ಗಾರ್ಮೆಂಟ್ಸ್ ಕಾರ್ಮಿಕ ಸಾವು, ಮೈಮೇಲಿದೆಯಂತೆ ಗಾಯದ ಗುರುತು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment