ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | DEATH | 24 ಮೇ 2022
ತುಂಗಾ ನದಿ ಸೇತುವೆ ಕೆಳಗೆ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ನೆರವಿನೊಂದಿಗೆ ಪೊಲೀಸರು ಮೃತದೇಹವನ್ನು ಮೇಲೆತ್ತಿದ್ದಾರೆ.
ಇವತ್ತು ಬೆಳಗ್ಗೆ ಹೊಳೆಯಲ್ಲಿ ಮೃತದೇಹ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಏನಿದು ಪ್ರಕರಣ?
ಕಳೆದ ರಾತ್ರಿ ಶಿವಮೊಗ್ಗದ ಎನ್.ಸಿ.ಸಿ ಕ್ಯಾಂಪ್ ಸಮೀಪ ರಸ್ತೆ ಬದಿಯಲ್ಲಿ ಯುವಕನೊಬ್ಬ ಪತ್ತೆಯಾಗಿದ್ದ. ಗಸ್ತು ತಿರುಗುತ್ತಿದ್ದ ಪೊಲೀಸರು ಆತನ ವಿವರ ಕೇಳಿದ್ದಾರೆ. ಹಿರಿಯೂರಿನ ಬಾಲಕೃಷ್ಣ ಎಂದು ತಿಳಿಸಿದ್ದ ಎಂದು ತಿಳಿದು ಬಂದಿದೆ.
ಕೂಲಂಕಷವಾಗಿ ವಿಚರಣೆ ನಡೆಸಿದ ಬಳಿಕ ಇಲ್ಲಿಯೇ ಮಲಗಿದ್ದು ಬೆಳಗೆದ್ದು ಹೊರಡು ಎಂದು ಪೊಲೀಸರು ತಿಳಿಸಿದ್ದರು ಎಂದು ಗೊತ್ತಾಗಿದೆ. ಈತ ಸೇತುವೆಯಿಂದ ಕೆಳಗೆ ಇಳಿದಿರುವ ಸಾಧ್ಯತೆ ಇದ್ದು, ನೀರಿನಲ್ಲಿ ಮುಳುಗಿ ಮೃತನಾಗಿರುವ ಶಂಕೆ ಇದೆ.
ಕೋಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ತುಂಗಾ ಸೇತುವೆ ಕೆಳಗೆ ಪೊಲೀಸರಿಂದ ದಿಢೀರ್ ಶೋಧ | VIDEO NEWS
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.






