ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 6 JANUARY 2024
ಶಿವಮೊಗ್ಗ : 2022-23 ಮತ್ತು 2023-24ನೇ ಸಾಲಿನಲ್ಲಿ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ಪದವಿಯಲ್ಲಿ ತೇರ್ಗಡೆಯಾಗಿ ಉದ್ಯೋಗ ಸಿಗದ ಅರ್ಹ ಅಭ್ಯರ್ಥಿಗಳು ಯುವ ನಿಧಿ (Yuva Nidhi) ಯೋಜನೆಯಡಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಜನವರಿ 6ರಿಂದ 20ರ ವರೆಗೆ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಅರ್ಹ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ https://sevasindhugs. karnataka.gov.in ಮೂಲಕ ಹೆಸರು ನೋಂದಣಿ ಮಾಡಬಹುದು. ಹೆಚ್ಚಿನ ಮಾಹಿತಿಗೆ ಹತ್ತಿರದ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ. ದೂ. 08182-255293 ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ಖಲಂದರ್ ಖಾನ್ ತಿಳಿಸಿದ್ದಾರೆ.

ಇದನ್ನೂ ಓದಿ » ನಾ.ಡಿಸೋಜ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಳ್ಳಲು ಕಾರಣ ಆ ಎರಡು ಘಟ್ಟ, ಯಾವುದದು?
LATEST NEWS
- ಶಿವಮೊಗ್ಗದಲ್ಲಿ ದಾರುಣ ಘಟನೆ, ಶಾಲಾ ಬಸ್‌ಗೆ ಒಂದೂವರೆ ವರ್ಷದ ಮಗು ಬಲಿ

- ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್, ದಾಖಲಾಯ್ತು ಕೇಸ್

- ಗುಡ್ಡೇಕಲ್ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

- ಭದ್ರಾವತಿಯ ಭದ್ರಾ ನದಿಗೆ ರಾಶಿ ರಾಶಿ ತ್ಯಾಜ್ಯ, ವೈಜ್ಞಾನಿಕ ಕ್ರಮಕ್ಕೆ ಒತ್ತಾಯ

- ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

About The Editor
ನಿತಿನ್ ಆರ್.ಕೈದೊಟ್ಲು
















