ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 17 ಫೆಬ್ರವರಿ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೃದಯ ಶಸ್ತ್ರಚಿಕಿತ್ಸೆಗಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಮಗುವನ್ನು ಸಾಗಿಸಲು ಇತ್ತೀಚೆಗೆ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಈ ಘಟನೆ ಬೆನ್ನಿಗೆ ಶಿವಮೊಗ್ಗ ಪೊಲೀಸರು ಮತ್ತೊಂದು ಮಗುವಿನ ಜೀವ ಉಳಿಸಲು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ.
ತಲೆಗೆ ತೀವ್ರ ಪೆಟ್ಟು ಬಿದ್ದು ಗಂಭೀರ ಸ್ಥತಿಯಲ್ಲಿರುವ ಒಂದು ವರ್ಷ ನಾಲ್ಕು ತಿಂಗಳ ಮಗುವಿನ ಪ್ರಾಣ ಉಳಿಸಲು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿಗೆ ಆಸ್ಪತ್ರೆಗೆ ಮಗುವನ್ನು ಆಂಬುಲೆನ್ಸ್’ನಲ್ಲಿ ಸಾಗಿಸಲಾಯಿತು.
ಕಡೂರು ಪಟ್ಟಣದ ವೇದಾನಗರ ವಾಸಿ ಜೀಷನ್ ಮತ್ತು ಹಾಜರಾಬಾನು ದಂಪತಿಯ ಹೆಣ್ಣು ಮಗು ಹಿರಾಂ ನಾಜ್ ಇದ್ದ ಆಂಬ್ಯುಲೆನ್ಸ್‌ಗೆ ಜೀರೋ ಟ್ರಾಫಿಕ್ ಕಲ್ಪಿಸಲಾಯ್ತು.
ದಂಪತಿ ಜಗಳದಲ್ಲಿ ಮಗುವಿಗೆ ಬಿದ್ದಿತ್ತು ಪೆಟ್ಟು
ದಂಪತಿ ಜೀಷನ್ ಮತ್ತು ಹಾಜರಾಬಾನು ನಡುವೆ ನಡೆದ ಶುಕ್ರವಾರ ರಾತ್ರಿ ಜಗಳ ನಡೆದಿದ್ದು, ಪತಿಯು ತನ್ನ ಪತ್ನಿಗೆ ಮಚ್ಚಿನಿಂದ ಹೊಡೆಯಲು ಹೋದಾಗ ಅದು ಕೈತಪ್ಪಿ ಮಗುವಿನ ತಲೆಗೆ ಬಿದ್ದಿತ್ತು. ತಕ್ಷಣ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗ ಆಸ್ಪತ್ರೆಗೆ ಕರೆತರಲಾಗಿತ್ತು. ಈ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಶಿವಮೊಗ್ಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗುವಿನ ಆರೋಗ್ಯ ಸ್ಥಿತಿ ಸುಧಾರಣೆಯಾಗಲಿಲ್ಲ. ಈ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲು ವೈದ್ಯರು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಮುಖ್ಯ ಪಟ್ಟಣಗಳಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]