ಸಿಗಂದೂರು ಸೇತುವೆ, ತಲೆ ಮೇಲೆ ಕ್ಲಾಂಪ್‌ ಬಿದ್ದು ಕಾರ್ಮಿಕ ಸಾವು, ಸಂಸದ ರಾಘವೇಂದ್ರ ವಿಷಾದ

ಸಾಗರ: ಸಿಗಂದೂರು ಸೇತುವೆ (bridge) ಕಾಮಗಾರಿ ವೇಳೆ ಕ್ರೇನ್‌ ಕ್ಲಾಂಪ್‌ ಕಳಚಿ ಬಿದ್ದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಅಸ್ಸಾಂ ರಾಜ್ಯದ ಗೌಹಾಟಿಯ ಖಾಸಿದ್‌ ಅಲಿ (30) ಮೃತ ಕಾರ್ಮಿಕ.

ಮಂಗಳವಾರ ಘಟನೆ ಸಂಭವಿಸಿದ್ದು, ಗಾಳಿಯ ರಭಸಕ್ಕೆ ಕ್ರೈನ್‌ ಕ್ಲಾಂಪ್‌ ಕಳಚಿಕೊಂಡಿದೆ. ಕಾರ್ಮಿಕನ ತಲೆ ಮೇಲೆ ಕ್ಲಾಂಪ್‌ ಬಿದ್ದಿದ್ದು ತೀವ್ರ ಗಾಯವಾಗಿತ್ತು. ಕೂಡಲೆ ಆತನನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ರವಾನಿಸಲಾಯಿತು. ಆ ಹೊತ್ತಿಗಾಗಲೆ ಆತ ಕೊನೆಯುಸಿರೆಳೆದಿದ್ದ ಎಂದು ತಿಳಿದು ಬಂದಿದೆ.

Siganduru-Bridge-in-sagara-taluk

200ಕ್ಕೂ ಹೆಚ್ಚು ಕಾರ್ಮಿಕರು ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದಾರೆ. ಆರಂಭದಿಂದ ಈತನಕ ಯಾವುದೇ ಅವಘಡವಾಗಿರಲಿಲ್ಲ. ಕೊನೆಯ ಹಂತದಲ್ಲಿ ಖಾಸಿದ್‌ ಅಲಿ ದುರ್ಮರಣ ನೋವು ತಂದಿದೆ. ಆತನ ಮೃತದೇಹವನ್ನು ವಿಮಾನದ ಮೂಲಕ ಗೌಹಾಟಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.ಬಿ.ವೈ.ರಾಘವೇಂದ್ರ, ಸಂಸದ

JNNCE-ADMISSION-2025-26

ಇದನ್ನೂ ಓದಿ » ಮುಂದಿನ ಏಳು ದಿನ ಶಿವಮೊಗ್ಗ ಜಿಲ್ಲೆಗೆ ಸಾಲು ಸಾಲು ಎಚ್ಚರಿಕೆ, ಯಾವ್ಯಾವ ದಿನ ಎಷ್ಟಿರುತ್ತೆ ಮಳೆ?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
Siganduru-Bridge-in-sagara-taluk

Leave a Comment