ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 9 ಸೆಪ್ಟೆಂಬರ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಿಷೇಧಗೊಂಡಿದ್ದರು ಪ್ಲಾಸ್ಟಿಕ್ ಬಳಕೆ ನಿಂತಿಲ್ಲ. ಸರ್ಕಾರ ಜಾಗೃತಿ ಮೂಡಿಸುತ್ತಿದ್ದರು ಬಳಕೆ ತಪ್ಪುತ್ತಿಲ್ಲ. ಇದೆ ಕಾರಣಕ್ಕೆ ಶಿವಮೊಗ್ಗದ ಪ್ರಮುಖ ಏರಿಯಾ ಒಂದರ ನಿವಾಸಿಗಳ ಸಂಘ, ಹೊಸ ಮಾದರಿಯಲ್ಲಿ ಜಾಗೃತಿ ಅಭಿಯಾನ ಶುರು ಮಾಡಿದೆ. ಶಿವಮೊಗ್ಗದಲ್ಲಿ ಇಂತಹ ಪ್ರಯತ್ನ ಇದೆ ಮೊದಲು.
‘ಪ್ಲಾಸ್ಟಿಕ್ ಮುಕ್ತ ಬಡಾವಣೆ’ ನಿರ್ಮಿಸುವ ಕನಸಿನೊಂದಿಗೆ ರವೀಂದ್ರನಗರ ನಿವಾಸಿಗಳ ಸಂಘ, ವಿಭಿನ್ನ ಪ್ರಯತ್ನ ಆರಂಭಿಸಿದೆ. ಭಾನುವಾರ ಮೊದಲ ಹೆಜ್ಜೆ ಇಡಲಾಗಿದೆ.
ಏನಿದು ವಿಭಿನ್ನ ಪ್ರಯತ್ನ?
ರವೀಂದ್ರನಗರ ಬಡಾವಣೆಯಲ್ಲಿ ಸುಮಾರು 450 ಮನೆಗಳಿವೆ. ಪ್ರತಿ ಮನೆಗೂ ಒಂದೊಂದು ಬಟ್ಟೆ ಬ್ಯಾಗ್ ವಿತರಿಸಲಾಗಿದೆ. ತರಕಾರಿ, ದಿನಸಿ ಸೇರಿದಂತೆ ಮನೆಗೆ ಅಗತ್ಯವಿರುವ ವಸ್ತುಗಳನ್ನು ತರಲು, ಇದೆ ಬಟ್ಟೆ ಬ್ಯಾಗ್ ಬಳಕೆ ಮಾಡುವಂತೆ ನಿವಾಸಿಗಳ ಸಂಘದ ವತಿಯಿಂದ ಮನವರಿಕೆ ಮಾಡಲಾಗಿದೆ. ಈ ಕುರಿತು ಜಾಗೃತಿಯ ಕರಪತ್ರವನ್ನು ಹಂಚಲಾಗಿದೆ.
ಅಧ್ಯಕ್ಷ ಸೋಮಶೇಖರ್, ಸುನಿಲ್ ಗಣಪತಿ, ಹೆಚ್.ಸಿ.ಶೇಖರಪ್ಪ, ಮೋಹನ್, ರವಿ ಮತ್ತು ಶಂಕರ್ ಸೇರಿದಂತೆ ಸಂಘದ ಪ್ರಮುಖರು, ಆಟೋದಲ್ಲಿ ಅನೌನ್ಸ್ ಮಾಡುತ್ತ, ಜಾಗೃತಿ ಮೂಡಿಸುವ ಕರಪತ್ರ ಮತ್ತು ಬಟ್ಟೆ ಬ್ಯಾಗ್ ಹಂಚಿದ್ದಾರೆ.
ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ರವೀಂದ್ರನಗರ ನಿವಾಸಿಗಳ ಸಂಘದ ಅಧ್ಯಕ್ಷ ಸೋಮಶೇಖರಪ್ಪ ‘ತ್ಯಾಜ್ಯ ಮುಕ್ತ ಮತ್ತು ಪ್ಲಾಸ್ಟಿಕ್ ಮುಕ್ತ ರವೀಂದ್ರನಗರ ನಿರ್ಮಾಣ ಮಾಡಬೇಕು ಅನ್ನುವುದು ನಮ್ಮ ಉದ್ದೇಶ. ಅದಕ್ಕಾಗಿಯೆ ಪ್ರತಿ ಮನೆಗೆ ಬಟ್ಟೆ ಬ್ಯಾಗ್ ವಿತರಿಸಿದ್ದೇವೆ’ ಅನ್ನುತ್ತಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 2ರಂದು ಪ್ಲಾಸ್ಟಿಕ್ ಮುಕ್ತ ಭಾರತದ ಘೋಷಣೆ ಮಾಡಿದ್ದಾರೆ. ಅದರಂತೆ ನಾವು ರವೀಂದ್ರನಗರದಲ್ಲಿ ಬಟ್ಟೆ ಬ್ಯಾಗ್ ಬಳಕೆಗೆ ಜಾಗೃತಿ ಮೂಡಿಸುತ್ತಿದ್ದೇವೆ. ಇತರೆ ಬಡಾವಣೆಗಳು ಪ್ಲಾಸ್ಟಿಕ್ ಮುಕ್ತವಾದರೆ ಒಳ್ಳೆಯದು’ ಅಂತಾರೆ ಸಂಘದ ಸದಸ್ಯ ಮೋಹನ್.
ಉಳಿಕೆ ಹಣದಿಂದ ಸಮಾಜಮುಖಿ ಕೆಲಸ
ಬಟ್ಟೆ ಬ್ಯಾಗ್’ನ ಮೇಲೆ ರವೀಂದ್ರನಗರ ನಿವಾಸಿಗಳ ಸಂಘ, ಸ್ವಚ್ಛ ರವೀಂದ್ರನಗರ, ಪ್ಲಾಸ್ಟಿಕ್ ಮುಕ್ತ ಪರಿಸರ ಎಂದು ಬರೆಸಲಾಗಿದೆ. ಈ ಬ್ಯಾಗ್ ರೆಡಿ ಮಾಡಿಸಿ, ಹಂಚಿಕೆ ಮಾಡಲು ನಿವಾಸಿಗಳ ಸಂಘ ಯಾರಿಂದಲೂ ಹಣ ಸಂಗ್ರಹ ಮಾಡಿಲ್ಲ. ಸಂಕ್ರಾಂತಿ ಹಬ್ಬದ ಸಂದರ್ಭ, ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಉಳಿದ ಹಣವನ್ನು ಬಳಸಿಕೊಂಡು, ಬಟ್ಟೆ ಬ್ಯಾಗ್ ಹಂಚಿಕೆ ಮಾಡಲಾಗಿದೆ.
ವಿಭಿನ್ನ ಪ್ರಯತ್ನಕ್ಕೆ ಉತ್ತಮ ರೆಸ್ಪಾನ್ಸ್
ಸ್ವಚ್ಛ ರವೀಂದ್ರನಗರ ನಿರ್ಮಾಣ ಮಾಡುವುದು ನಿವಾಸಿಗಳ ಸಂಘದ ಪ್ರಮುಖ ಉದ್ದೇಶ. ಈ ಹಿನ್ನೆಲೆಯಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಸಮುಕ್ತ ರವೀಂದ್ರನಗರ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಈಗ ಪ್ಲಾಸ್ಟಿಕ್ ಮುಕ್ತ ರವೀಂದ್ರನಗರ ಮಾಡಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ ಅಂತಾರೆ ಸಂಘದ ಪ್ರಮುಖರು. ಹಾಗಾಗಿಯೆ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]
Good , your group has doing good work and motivated to others to use cloth bags and to avoid plastic.