ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
ಶಿವಮೊಗ್ಗ | ಗಜಮುಖನಿಗೆ ನೂರಾರು ಹೆಸರುಗಳು ಇರುವಂತೆಯೆ ಹಲವು ರೂಪಗಳು ಇದ್ದಾವೆ. ವಿಶ್ವಾದ್ಯಂತ ಸಾವಿರಾರು ಸ್ವರೂಪದಲ್ಲಿ ವಕ್ರತುಂಡನನ್ನು (VAKRATUNDA) ಪೂಜಿಸಲಾಗುತ್ತಿದೆ. ಈಗ ಎಲ್ಲಾ ರೂಪದ ಗಣಪತಿಯನ್ನು (GANAPATHI) ನಮ್ಮೂರಿನಲ್ಲೇ ಕಣ್ತುಂಬಿಕೊಳ್ಳಬಹುದಾಗಿದೆ. ಪ್ರಮುಖ ದೇವಸ್ಥಾನವೊಂದರಲ್ಲಿ ಮೋದಕ ಪ್ರಿಯನ ಮ್ಯೂಸಿಯಂ (MUSEUM) ಸಿದ್ಧಪಡಿಸಲಾಗಿದೆ. ದೇಶದಲ್ಲೇ ಇದು ವಿಭಿನ್ನವಾಗಿ ಪ್ರಯೋಗವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೊಸನಗರ (HOSANAGARA) ತಾಲೂಕು ಕಾರಣಗಿರಿಯ (KARANAGIRI) ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ (SIDDI VINAYAKA TEMPLE) ಗಣಪತಿಯ ಮ್ಯೂಸಿಯಂ ಸ್ಥಾಪಿಸಲಾಗಿದೆ. ಇಲ್ಲಿ ದೇಶ ವಿದೇಶದಲ್ಲಿರುವ ಸಾವಿರಾರು ರೂಪದ ಗಣಪತಿಯನ್ನು ಒಂದೇ ಸೂರಿನಡಿ ನೋಡಬಹುದಾಗಿದೆ.
ಕಾರಣಗಿರಿ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದ ಆವರಣದಲ್ಲಿ 2017ರಲ್ಲಿ ಗಣಪತಿ ಮ್ಯೂಸಿಯಂ ಸ್ಥಾಪಿಸಲಾಗಿದೆ. ಇಲ್ಲಿ ಮೂರು ಸಾವಿರಕ್ಕೂ ಹೆಚ್ಚು ಗಣಪತಿಯ ಮೂರ್ತಿಗಳು, ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಇವು ಒಂದಕ್ಕಿಂತಲೂ ಒಂದು ಭಿನ್ನವಾಗಿದ್ದು, ಗಜಮುಖನ ಭಕ್ತರನ್ನು ಪುಳಕಿತರನ್ನಾಗಿಸುತ್ತಿದೆ. ಅಷ್ಟೆ ಅಲ್ಲ, ದೇಶ, ವಿದೇಶದಿಂದ ಇಲ್ಲಿಗೆ ಪ್ರವಾಸಿಗರು ಆಗಮಿಸಿ, ನಾನಾ ರೂಪದ ಮಂಗಳಮೂರ್ತಿಯನ್ನು ಕಂಡು ಚಕಿತರಾಗುತ್ತಿದ್ದಾರೆ.
ಹೇಗಿದೆ ಮ್ಯೂಸಿಯಂ?
ದೇವಸ್ಥಾನದ ಆವರಣದಲ್ಲಿರುವ ಮ್ಯೂಸಿಯಂನಲ್ಲಿ (MUSEUM) ಏಕದಂತನ ನೂರಾರು ಬಗೆಯ ಮೂರ್ತಿಗಳಿವೆ. ಇವುಗಳಲ್ಲಿ ಹಲವನ್ನು ದೇಶದ ನಾನಾ ಭಾಗಗಳಿಂದ ತರಿಸಲಾಗಿದೆ. ಕೆಲವನ್ನು ವಿದೇಶದಿಂದಲೂ ತರಲಾಗಿದೆ. ಮತ್ತೆ ಕೆಲವನ್ನು ಸಿದ್ಧಪಡಿಸಿ ಇಡಲಾಗಿದೆ.
ಬಾಲ ಗಣಪ, ತಬಲ ಗಣಪ, ವೀಣಾ ಗಣಪ, ಓಲಗ ಗಣಪ, ಒರಿಸ್ಸಾ ಗಣಪ, ದೃಷ್ಠಿ ಗಣಪ, ಪಂಚಮುಖಿ ಗಣಪ, ಶಿವ ಪಾರ್ವತಿ ಗಣೇಶ, ಗಧಾಯುಧ ಬಲಮುರಿ ಗಣಪ, ದಕ್ಷ ಸಂಹಾರ ಗಣಪ, ಉಯ್ಯಾಲೆ ಗಣಪ ಸೇರಿದಂತೆ ನೂರಾರು ರೂಪದಲ್ಲಿರುವ ಗಣಪನ ಮೂರ್ತಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.
ಕಣ್ಸೆಳೆಯುತ್ತವೆ ಸಾವಿರಾರು ಕಲಾಕೃತಿಗಳು
ಕಲಾವಿದರೊಬ್ಬರ ಕಲ್ಪನೆಯಲ್ಲಿ ಅರಳಿದ ಗಣಪತಿಯ ಸಾವಿರಾರು ಕಲಾಕೃತಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವೃತ್ತಿ ಮಾಡುತ್ತಿದ್ದ ರಾಜೀವ್ ಅವರು ರೂಪಿಸಿದ ಕಲಾಕೃತಿಗಳು ಇಲ್ಲಿವೆ.
ರಾಜ್ಯದಲ್ಲಿ ವಿಭಿನ್ನ ಪ್ರಯತ್ನ
ದೇಶ ವಿದೇಶದಲ್ಲಿ ಗಣಪತಿಯ ಮ್ಯೂಸಿಯಂಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿಯು ಇಂತಹ ಪ್ರಯೋಗ ಆಗಿರುವುದು ಗಣಪತಿಯ ಭಕ್ತರಿಗೆ ಹೆಮ್ಮೆಯನ್ನು ಉಂಟು ಮಾಡಿದೆ. ಥೈಲ್ಯಾಂಡ್ ದೇಶದಲ್ಲಿ ಗಣಪತಿಯ ಮ್ಯೂಸಿಯಂ ಸ್ಥಾಪಿಸಲಾಗಿದೆ. ಮಹಾರಾಷ್ಟ್ರದ ಪೂಣೆಯಲ್ಲಿ ದೇಶದಲ್ಲಿಯೇ ಮೊದಲ ಗಣಪತಿ ಮ್ಯೂಸಿಯಂ ನಿರ್ಮಿಸಲಾಯಿತು. ಅಮರಾವತಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಗಜಮುಖನ ಮ್ಯೂಸಿಯಂ, ಇಂಡಿಯಾ ಬುಕ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ಮಧ್ಯಪ್ರದೇಶದ ಇಂಧೋರ್ ನಲ್ಲಿ ಈಗ ವಕ್ರತುಂಡನ ಮ್ಯೂಸಿಯಂ ಆರಂಭಿಸಲಾಗುತ್ತಿದೆ.
ಹೊಸನಗರ ತಾಲೂಕು ಕಾರಣಗಿರಿಯಲ್ಲಿ ಸ್ಥಾಪಿಸಲಾಗಿರುವ ಗಣಪತಿ ಮ್ಯೂಸಿಯಂ ದಕ್ಷಿಣ ಭಾರತದಲ್ಲಿ ವಿಭಿನ್ನವಾಗಿದೆ. ಇಲ್ಲಿ ಬಂದರೆ ಗಣಪತಿಯ ವಿವಿಧ ರೂಪಗಳನ್ನ ಕಣ್ತುಂಬಿಕೊಳ್ಳಬಹುದು. ಅಷ್ಟೆ ಅಲ್ಲ, ಗಜಮುಖನ ಕುರಿತ ಪೂರ್ಣ ಮಾಹಿತಿಯು ಲಭಿಸಲಿದೆ.
ಎಲ್ಲಿದೆ ಕಾರಣಗಿರಿ ದೇವಸ್ಥಾನ?
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಕಾರಣಗಿರಿ ಶ್ರೀ ಸಿದ್ಧಿ ವಿನಾಯಕನ ದೇವಸ್ಥಾನವಿದೆ. ಹೊಸನಗರದಿಂದ ನಗರ ಹೋಬಳಿ ಕಡೆಗೆ ತೆರಳುವ ಮಾರ್ಗದಲ್ಲಿ, ರಸ್ತೆ ಪಕ್ಕದಲ್ಲಿಯೇ ಗಣಪತಿ ದೇಗುಲವಿದೆ.
ಇದನ್ನೂ ಓದಿ – ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ ಮತ್ತೆ ವಿಸ್ತರಣೆ, ಎಷ್ಟು ದಿನ? ಕಾರಣವೇನು?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.