ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 30 ಏಪ್ರಿಲ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಒಂದೆಡೆ ಕರೋನ ಲಾಕ್‍ಡೌನ್ ಭದ್ರತೆಯ ಹೊಣೆ. ಮತ್ತೊಂದು ಕಡೆ ಸಾಮಾಜಿಕ ಅಂತರವಿರಬೇಕು ಎಂಬ ನಿಯಮ. ಈ ನಡುವೆ ನಿರಂತರ ಸಭೆಗಳನ್ನು ನಡೆಸುವುದು ಅಷ್ಟು ಸುಲಭವಲ್ಲ. ಸರ್ಕಾರ, ಜಿಲ್ಲಾಡಳಿತದ ಸೂಚನೆಯನ್ನು ಚಾಚು ತಪ್ಪದೆ ಪಾಲಿಸುವಂತೆ ಇಲಾಖೆಯ ಪ್ರತಿ ಸಿಬ್ಬಂದಿಗೂ ಮನವರಿಕೆ ಮಾಡುವುದು ಅಂದುಕೊಂಡಷ್ಟು ಸರಾಗವಲ್ಲ. ಇದೇ ಕಾರಣಕ್ಕೆ ಶಿವಮೊಗ್ಗ ಪೊಲೀಸ್ ಇಲಾಖೆ ಆನ್‍ಲೈನ್ ಮಾರ್ಗ ಕಂಡುಕೊಂಡಿದೆ.
ಕರೋನ ಲಾಕ್‍ಡೌನ್ ಆರಂಭವಾಗುತ್ತಿದ್ದಂತೆ ಫೀಲ್ಡಿಗಿಳಿದು ಕೆಲಸ ಆರಂಭಿಸಿದ್ದ ಪೊಲೀಸರು, ಈಗಲು ಆನ್ ಡ್ಯೂಟಿಯಲ್ಲಿದ್ದಾರೆ. ನಿಗದಿಗಿಂತಲೂ ಹೆಚ್ಚು ಗಸ್ತು ತಿರುಗುತ್ತಿದ್ದಾರೆ. ಸರ್ಕಲ್, ಪ್ರಮುಖ ರಸ್ತೆಗಳಲ್ಲಿ ವಾಹನಗಳ ತಪಾಸಣೆ, ಚೆಕ್‍ಪೋಸ್ಟ್‍ನಲ್ಲಿ ಹಗಲು, ರಾತ್ರಿ ಕೆಲಸ. ಈ ನಡುವೆ ನಿರಂತರ ಮೀಟಿಂಗ್‍ಗಳನ್ನು ನಡೆಸುವುದು ಅಸಾದ್ಯ. ಹಾಗಾಗಿ ಜಿಲ್ಲಾ ಪೊಲೀಸ್ ಇಲಾಖೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿದಿನದ ಸಭೆಗಳನ್ನು ನಡೆಸುತ್ತಿದೆ.
ದಿನೇ ದಿನೇ ಮಾಹಿತಿ ಅಪ್‍ಡೇಟ್
ಕರೋನ ಲಾಕ್‍ಡೌನ್ ಸಂಬಂಧ ಕೇಂದ್ರ, ರಾಜ್ಯ ಸರ್ಕಾರಗಳು, ಜಿಲ್ಲಾಡಳಿತ ಆಗಿಂದಾಗ್ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಿವೆ. ಇದನ್ನು ಪರಿಪೂರ್ಣವಾಗಿ ಜಾರಿಗೊಳಿಸಬೇಕಾದ್ದು ಪೊಲೀಸ್ ಇಲಾಖೆ. ಇದೇ ಕಾರಣಕ್ಕೆ ನಿರಂತರ ಸಭೆಗಳನ್ನು ನಡೆಸಬೇಕಾಗುತ್ತದೆ. ಜಿಲ್ಲಾ ಪೊಲೀಸ್ ಕಚೇರಿಯಿಂದ ಜಿಲ್ಲೆಯ ಮೂಲೆ ಮೂಲೆಯಲ್ಲಿರುವ ಪೊಲೀಸ್ ಠಾಣೆಗಳಿಗೂ ಸೂಚನೆಗಳು ತಲುಪಬೇಕಿದೆ. ಇದೇ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೊರೆ ಹೋಗಲಾಗಿದೆ.
‘ಲಾಕ್‍ಡೌನ್ ಇರುವ ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ಇಲಾಖೆಯ ಸಭೆಗಳನ್ನು ನಡೆಸುತ್ತಿದ್ದೇವೆ. ಸಿಬ್ಬಂದಿಗಳು ತಾವು ಇರುವ ಕಡೆಯಿಂದಲೇ ಲೈವ್ ವಿಡಿಯೋ ಮೂಲಕ ಸಭೆಯಲ್ಲಿ ಭಾಗವಹಿಸುತ್ತಾರೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.
ಹೇಗೆ ನಡೆಯುತ್ತೆ ಆನ್‍ಲೈನ್ ಮೀಟಿಂಗ್?
ದೇಶಾದ್ಯಂತ ಅರೋಗ್ಯ ತುರ್ತು ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಪೊಲೀಸರು ಬಂದೋಬಸ್ತ್‍ಗೆ ಹೆಚ್ಚು ಸಮಯ ಮೀಸಲಿಡಬೇಕಿದೆ. ಹಾಗಾಗಿ ಜಿಲ್ಲಾ ಕೇಂದ್ರಕ್ಕೆ ಬಂದು ಪೊಲೀಸ್ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಿದೆ. ಇದೇ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗುತ್ತದೆ.
ಶಿವಮೊಗ್ಗ ಜಿಲ್ಲೆಯ ಎಲ್ಲಾ ಡಿವೈಎಸ್‍ಪಿಗಳು, ಇನ್ಸ್‍ಪೆಕ್ಟರ್‍ಗಳು, ಸಬ್‍ಇನ್ಸ್‍ಪೆಕ್ಟರ್‍ಗಳು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸುತ್ತಾರೆ. ಬಂದೋಬಸ್ತ್ ಡ್ಯೂಟಿಯಲ್ಲಿ ಇರುವ ಸ್ಥಳದಿಂದಲೇ ಅಪ್ಲಿಕೇಷನ್ ಮೂಲಕ ಸಭೆಗೆ ಹಾಜರಾಗುತ್ತಾರೆ. ಲಾಕ್‍ಡೌನ್ ಸಂದರ್ಭದ ಬಂದೋಬಸ್ತ್ ಕುರಿತು ಜಿಲ್ಲಾ ರಕ್ಷಣಾಧಿಕಾರಿಗಳು, ಹೆಚ್ಚುವರಿ ರಕ್ಷಣಾಧಿಕಾರಿಗಳ ಜೊತೆಗೆ ಚರ್ಚೆ ನಡೆಸುತ್ತಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿರುವುದರಿಂದ, ಜಿಲ್ಲೆಯಲ್ಲಿ ಬಂದೋಬಸ್ತ್ ಬಿಗಿಗೊಂಡಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]