ಶಿವಮೊಗ್ಗ ಲೈವ್.ಕಾಂ | SHIMOGA | 03 ಡಿಸೆಂಬರ್ 2019
ವಿಮಾನ ಹಾರಬೇಕಿದ್ದ ರನ್ ವೇ ಮೇಲೆ ಮೇಯುತ್ತಿದ್ದಾವೆ ದನ, ಕರು, ಕುರಿ..! ವಿಮಾನಗಳು ನಿಲ್ಲಬೇಕಿದ್ದ ಜಾಗದಲ್ಲಿ ಭುಜದೆತ್ತರಕ್ಕೆ ಬೆಳೆದಿದೆ ಜೋಳ..!
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ವಿಮಾನ ನಿಲ್ದಾಣದ ಸದ್ಯದ ಪರಿಸ್ಥಿತಿ ಇದು. ಬಿಜೆಪಿ ಸರ್ಕಾರ ರಚನೆಯಾಗಿ, ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗುತ್ತಿದ್ದಂತೆ ಏರ್’ಪೋರ್ಟ್ ಕನಸು ಮತ್ತೆ ಚಿಗುರೊಡೆಯಿತು. ಈಗಾಗಲೇ ವಿಮಾನ ನಿಲ್ದಾಣ ಕಾಮಗಾರಿಗೆ ಸರ್ಕಾರ 39 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಬಹುವರ್ಷದಿಂದ ಕಾಮಗಾರಿ ಸ್ಥಗಿತವಾಗಿದ್ದು ವಿಮಾನ ನಿಲ್ದಾಣದ ಜಾಗ ಸಂಪೂರ್ಣ ಬಲದಾಗಿದೆ.
ರನ್ ವೇ ಹುಡುಕೋಕೆ ಬೇಕು ಟೈಂ
ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿನಾಯಕ ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಮೊದಲ ಹಂತವಾಗಿ ರನ್ ವೇ ಸಿದ್ಧಪಡಿಸುತ್ತಿದ್ದರು. ನೆಲ ಸಮತಟ್ಟು ಮಾಡಿ, ಮೆಟ್ಲಿಂಗ್ ಮುಗಿಸಿ, ಹಂತ ಹಂತವಾಗಿ ರನ್ ವೇ ಕಾಮಗಾರಿ ನಡೆಯುತ್ತಿತ್ತು. ಆದರೆ ಕಾಮಗಾರಿ ಅರಂಭದಲ್ಲೇ ನಿಂತಿದ್ದರಿಂದ ರನ್ ವೇ ಹಾಗೆ ಉಳಿದು ಹೋಯಿತು. ಈಗ ವಿಮಾನ ನಿಲ್ದಾಣದ ಸೈಟ್’ಗೆ ಹೋದರೆ, ರನ್ ವೇ ಯಾವುದು ಅಂತಾ ಗುರುತಿಸುವುದೇ ಕಷ್ಟ.
ರನ್ ವೇ ಮೇಲೆ ಮೊಣಕಾಲುದ್ದ ಗಿಡಗಳು
ವಿಮಾನ ನಿಲ್ದಾಣದಲ್ಲಿ ರನ್ ವೇ ಗುರುತಿಸುವುದು ಕಷ್ಟಕರ. ಸ್ಥಳೀಯರನ್ನು ವಿಚಾರಿಸಿ, ಹತ್ತಿರಕ್ಕೆ ಹೋದರಷ್ಟೇ ರನ್ ವೇ ಎಂದು ಗುರುತಿಸಬಹುದು. ಯಾಕೆಂದರೆ ರನ್ ವೇ ಮೇಲೆ ಮೊಣಕಾಲು ಉದ್ದದಷ್ಟು ಗಿಡಗಳು ಬೆಳೆದು ನಿಂತಿವೆ.
ವಿಮಾನ ನಿಲ್ದಾಣದಲ್ಲಿ ಜೋಳ ಬಿತ್ತನೆ
ವಿಮಾನ ನಿಲ್ದಾಣಕ್ಕಾಗಿ ಸುಮಾರು 900 ಎಕರೆ ಜಾಗ ವಶಕ್ಕೆ ಪಡೆಯಲಾಗಿತ್ತು. ಕಾಮಗಾರಿ ನಡೆಯದೆ ಜಾಗ ಬೀಳು ಬಿದ್ದಿದ್ದರಿಂದ ಕೆಲವು ರೈತರು ನಿಧಾನವಾಗಿ ಜೋಳ ಬಿತ್ತನೆ ಆರಂಭಿಸಿದರು. ಈಗಂತು ಸುಮಾರು 200 ರಿಂದ 300 ಎಕರೆ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿದೆ.
ವಿಮಾನ ನಿಲ್ದಾಣದಲ್ಲೇ ಜೋಳ ಒಣಗಿಸ್ತಾರೆ
ಜೋಳ ಬೆಳೆಯುವುದು ಮಾತ್ರವಲ್ಲ, ಅದನ್ನು ಒಣಗಿಸುವುದಕ್ಕು ವಿಮಾನ ನಿಲ್ದಾಣ ಜಾಗವೇ ಪ್ರಶಸ್ತವಾಗಿದೆ. ಹಾಗಾಗಿ ರೈತರು ವಿಮಾನ ನಿಲ್ದಾಣದ ರನ್ ವೇ ಮುಂದೆಯೇ ಜೋಳ ಒಣಗಿಸುತ್ತಿದ್ದಾರೆ. ಅಷ್ಟೇ ಅಲ್ಲ, ಮುಂದಿನ ವರ್ಷ ಇನ್ನಷ್ಟು ರೈತರು ವಿಮಾನ ನಿಲ್ದಾಣದ ಜಾಗದಲ್ಲಿ ಜೋಳ ಬೆಳೆಯಬಹುದು ಅನ್ನುತ್ತಾರೆ ಸ್ಥಳೀಯರು.
ಗೋಮಾಳವಾಗಿದೆ ಏರ್’ಪೋರ್ಟ್..!
ಶಿವಮೊಗ್ಗ ವಿಮಾನ ನಿಲ್ದಾಣದ ಜಾಗ ಗೋಮಾಳವಾಗಿ ಬದಲಾಗಿ ವರ್ಷಗಳೆ ಕಳೆದಿದೆ. ಕಾಮಗಾರಿ ಸ್ಥಗಿತಗೊಳ್ಳುತ್ತಿದ್ದಂತೆ ಸ್ಥಳೀಯರು ತಮ್ಮ ದನ, ಕರು, ಕುರಿ ಮೇಯಿಸೋಕೆ ವಿಮಾನ ನಿಲ್ದಾಣ ಜಾಗವನ್ನು ಉಪಯೋಗಿಸುತ್ತಿದ್ದಾರೆ. ಖಾಲಿ ಬಿದ್ದ ಜಾಗವನ್ನು ರೈತರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದನಗಳು ಮೇಯಲು ಜಾಗ ಚೆನ್ನಾಗಿದೆ ಅನ್ನುತ್ತಾರೆ ಸ್ಥಳೀಯ ರೈತರೊಬ್ಬರು.
ಮಹಾತ್ವಾಕಾಂಕ್ಷಿ ಯೋಜನೆಯೊಂದು ಸರ್ಕಾರ, ಅಧಿಕಾರಿಗಳು ಮತ್ತು ಟೆಂಡರ್ ಪಡೆದ ಸಂಸ್ಥೆಗಳ ನಿರ್ಲಕ್ಷ್ಯದಿಂದಾಗಿ ಮೂಲೆಗುಂಪಾಗಿದೆ. ಅದರ ಪರಿಣಾಮ ರೈತರು ಜಾಗವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ವಿಚಿತ್ರ ಅಂದರೆ ವಿಮಾನ ನಿಲ್ದಾಣ ಕಾಮಗಾರಿಯನ್ನು ಬಹುತೇಕ ಹೊಸದಾಗಿ ಆರಂಭಿಸಬೇಕಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Farmers cultivate jowar in Shimoga Airport. As the Airport work never took place farmers start cultivate jowar and the airport place has become a place of various farm activities.