ಸಿಗಂದೂರು ಬಳಿ ಹಿನ್ನೀರಿನಲ್ಲಿ ಇಳಿಯಲಿದೆ ವಿಮಾನ, ಶರಾವತಿಯಲ್ಲಿ ವಾಟರ್ ಏರೊಡ್ರೋಮ್‌ಗೆ ಪ್ಲಾನ್

ಶಿವಮೊಗ್ಗ: ಪ್ರವಾಸಿಗರನ್ನು ಸೆಳೆಯಲು ಸಿಗಂದೂರು ಸಮೀಪ ಲಿಂಗನಮಕ್ಕಿ ಜಲಾಶಯದ ಹಿನ್ನೀರು ಭಾಗದಲ್ಲಿ ವಾಟರ್‌ ಏರೋಡ್ರೋಮ್‌ (Water Aerodrome) ಸ್ಥಾಪಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಯೋಜಿಸಿದೆ. ಗುಜರಾತ್‌ನ ಸಾಬರಮತಿ ನದಿಯಲ್ಲಿ ಈಗಾಗಲೇ ವಾಟರ್‌ ಏರೋಡ್ರೋಮ್‌ ಕಾರ್ಯಾಚರಿಸುತ್ತಿದೆ.➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕದ 7 ಕಡೆ ಉಡಾನ್‌ ಯೋಜನೆ ಅಡಿ ವಾಟರ್‌ ಏರೋ ಡ್ರೋಮ್‌ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ. ಉಡುಪಿಯ ಬೈಂದೂರು, ಸೂಪ ಡ್ಯಾಮ್‌ನ ಗಣೇಶಗುಡಿ, ಕಬಿನಿ ಹಿನ್ನೀರು, ಕಾರವಾರದ ಕಾಳಿ ನದಿ ಸೇತುವೆ ಸಮೀಪ, ಉಡುಪಿಯ ಮಲ್ಪೆ, ಮಂಗಳೂರು ಮತ್ತು ಸಿಗಂದೂರು ಸಮೀಪ ವಾಟರ್‌ ಏರೋ ಡ್ರೋಮ್‌ ಸ್ಥಾಪನೆಗೆ ಯೋಜಿಸಲಾಗಿದೆ.

ಏನಿದು ವಾಟರ್‌ ಏರೋ ಡ್ರೋಮ್?‌

Center-Proposal-for-Water-Aerodrome-near-Sigandur.
ಸಿಗಂದೂರು ಸೇತುವೆ (ಎಡಚಿತ್ರ). ಗುಜರಾತ್‌ನಲ್ಲಿ ವಾಟರ್‌ ಏರೋಡ್ರೋಮ್‌ನಲ್ಲಿ ವಿಮಾನ (ಬಲಚಿತ್ರ).

‌ನೀರಿನ ಮೇಲೆ ವಿಮಾನಗಳು ಟೇಕಾಫ್‌ ಮತ್ತು ಲ್ಯಾಂಡಿಂಗ್‌ ಮಾಡಲು ನಿರ್ದಿಷ್ಟ ಸ್ಥಳ ಗುರುತಿಸಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತದೆ. ಇದನ್ನು ವಾಟರ್‌ ಏರೋ ಡ್ರೋಮ್‌ ಎನ್ನಲಾಗುತ್ತದೆ. ಸಾಮಾನ್ಯವಾಗಿ ವಿಸ್ತಾರವಾದ ನದಿಗಳು, ಜಲಾಶಯಗಳ ಹಿನ್ನೀರು ಭಾಗ, ಕರಾವಳಿ ಪ್ರದೇಶಗಳಲ್ಲಿ ವಾಟರ್‌ ಏರೋಡ್ರೋಮ್‌ ನಿರ್ಮಿಸಲಾಗುತ್ತದೆ.

ಉಡಾನ್‌ 5.5 ಯೋಜನೆ ಅಡಿ ವಾಟರ್‌ ಏರೋಡ್ರೋಮ್‌ಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕದ 7 ಸ್ಥಳಗಳ ಪೈಕಿ ಈಗಾಗಲೇ ಕಬಿನಿ ಮತ್ತು ಮಂಗಳೂರಿನಲ್ಲಿ ವಾಟರ್‌ ಏರೋ ಡ್ರೋಮ್‌ ಸ್ಥಾಪನೆಗೆ ಕಂಪನಿಗಳು ಮುಂದೆ ಬಂದಿವೆ. ಉಳಿದೆಡೆಗೆ ಟೆಂಡರ್‌ ಪ್ರಕ್ರಿಯೆ ಮುಂದುವರೆದಿದೆ.

Water Aerodrome at Gujarat.
ಗುಜರಾತ್‌ನಲ್ಲಿ ವಾಟರ್‌ ಏರೋಡ್ರೋಮ್‌ನಲ್ಲಿ ಹಾರಲು ಸಿದ್ಧವಾಗುತ್ತಿರುವ ವಿಮಾನ.

ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ ಮಿನಿಸ್ಟರ್‌

ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಸಭೆಯಲ್ಲಿ, ರಾಜ್ಯ ವಿಮಾನಯಾನ ಸೇವೆಗಳ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರುಳಿಧರ್‌ ಮೊಹೋಲ್‌ ಉತ್ತರ ನೀಡಿದ್ದಾರೆ. ಈ ವೇಳೆ ಉಡಾನ್‌ ಯೋಜನೆ ಅಡಿ ವಾಟರ್‌ ಏರೋಡ್ರೋಮ್‌ಗಳ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದಾರೆ. ಸಚಿವರು ಏನೆಲ್ಲ ಹೇಳಿದ್ದಾರೆ. ಇಲ್ಲಿದೆ ಪಾಯಿಂಟ್ಸ್‌.

  • ಉಡಾನ್‌ ಯೋಜನೆ ಅಡಿ ಕರ್ನಾಟಕದಲ್ಲಿ ಒಟ್ಟು 9 ವಿಮಾನ ನಿಲ್ದಾಣಗಳಿವೆ. ಈ ಪೈಕಿ ಬೀದರ್‌, ಮೈಸೂರು, ವಿದ್ಯಾನಗರ, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ, ಶಿವಮೊಗ್ಗ ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿವೆ.
  • ಬಳ್ಳಾರಿ ಮತ್ತು ಕೋಲಾರದಲ್ಲಿ 20 ಸೀಟ್‌ಗಿಂತಲು ಕಡಿಮೆ ಸಾಮರ್ಥ್ಯದ ಸಣ್ಣ ವಿಮಾನಗಳ ಹಾರಾಟಕ್ಕೆ ಟೆಂಡರ್‌ ಪೂರ್ಣಗೊಂಡಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಜಾಗ ಒದಗಿಸಬೇಕಿದೆ.
  • ರಾಜ್ಯದಲ್ಲಿ ವಾಟರ್‌ ಏರೋಡ್ರೋಮ್‌ಗಳಿಗೆ ಸ್ಥಾಪನೆಗೆ ಯೋಜಿಸಲಾಗಿದ್ದು, ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಕಬಿನಿ ಮತ್ತು ಮಂಗಳೂರಿನಲ್ಲಿ ವಾಟರ್‌ ಏರೋಡ್ರೋಮ್‌ಗೆ ಒಪ್ಪಂದ ಪತ್ರ ನೀಡಲಾಗಿದೆ.

ಸಿಗಂದೂರಿಗೆ ಹೆಚ್ಚಾದ ಪ್ರವಾಸಿಗರು

ಸಿಗಂದೂರು ‍ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ದೊಡ್ಡ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಈ ಹಿಂದೆ ಲಾಂಚ್‌ನಲ್ಲಿ ಶರಾವತಿ ನದಿ ದಾಟಿ ಭಕ್ತರು ದೇಗುಲಕ್ಕೆ ಹೋಗಿ ಬರುತ್ತಿದ್ದರು. ಈಗ ಸಿಗಂದೂರು ಸೇತುವೆ ನಿರ್ಮಾಣವಾಗಿದ್ದು, ಮತ್ತಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ.

water aerodrome in gujarat.
ಗುಜರಾತ್‌ನಲ್ಲಿ ವಾಟರ್‌ ಏರೋಡ್ರೋಮ್‌ನಲ್ಲಿ ವಿಮಾನ

ಇದನ್ನೂ ಓದಿ » ಸಾಗರದ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರೆಯ ದಿನಾಂಕ ನಿಗದಿ, ಯಾವ್ಯಾವ ದಿನ ಏನೇನು ನಡೆಯಲಿದೆ?

ಇದರ ಮಧ್ಯೆ ಸಿಗಂದೂರು ಸೇತುವೆ ಆಚೀಚೆ ಲಾಂಚ್‌ನಲ್ಲಿಯೇ ಹೊಟೇಲ್‌ ಆರಂಭಿಸುವ ಕುರಿತು ಚರ್ಚೆಗಳ ಚಾಲ್ತಿಯಲ್ಲಿವೆ. ಇತ್ತ ಕೇಂದ್ರ ಸರ್ಕಾರ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ವಾಟರ್‌ ಏರೋಡ್ರೋಮ್‌ ಸ್ಥಾಪಿಸುವ ಯೋಜನೆ ರೂಪಿಸಿದ್ದು ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿದೆ.

Water Aerodrome proposed in Karnataka

Leave a Comment