ಕ್ರೀಡಾ ವಸತಿ ಶಾಲೆ ಪ್ರವೇಶ, ಜೂನ್‌ 1ರಂದು ವಿಶೇಷ ಆಯ್ಕೆ, ಎಲ್ಲೆಲ್ಲಿ ನಡೆಯಲಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಶಿವಮೊಗ್ಗ ಜಿಲ್ಲಾ ಕ್ರೀಡಾ ಶಾಲೆಗೆ 8ನೇ ತರಗತಿ ಹಾಗೂ ಪ್ರಥಮ ಪಿಯುಸಿ ಪ್ರವೇಶಾತಿಗೆ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ವಿಶೇಷ ಆಯ್ಕೆ ಪ್ರಕ್ರಿಯೆ ಆಯೋಜಿಸಲಾಗಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಈಗಾಗಲೇ ಜಿಲ್ಲಾ, ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ವಿವಿಧ ಕಾರಣಗಳಿಂದ ಅದರಲ್ಲಿ ಭಾಗವಹಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಈ ವಿಶೇಷ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ. ಈ ಆಯ್ಕೆಯು ಎರಡು ಹಂತಗಳನ್ನು ಒಳಗೊಂಡಿದ್ದು, ತರಬೇತುದಾರರಿಂದ ಕ್ರೀಡಾವಾರು ಆಯ್ಕೆ ಪ್ರಕ್ರಿಯೆ ಹಾಗೂ ಕ್ರೀಡಾ ವಿಜ್ಞಾನ ಕೇಂದ್ರದಿಂದ ಕ್ರೀಡಾ ವೈಜ್ಞಾನಿಕ ಪರೀಕ್ಷೆ ಜೂನ್ 1ರಂದು ನಡೆಸಲಾಗುತ್ತದೆ.

Just-Mahithi-Update-Shimoga-News

ಅಥ್ಲೆಟಿಕ್ಸ್‌: ಜಿಲ್ಲಾ ಕ್ರೀಡಾಂಗಣ ತುಮಕೂರು, ಹಾಕಿ: ಅಕ್ಕಿತಿಮ್ಮನಹಳ್ಳಿ ಕ್ರೀಡಾಂಗಣ-ಬೆಂಗಳೂರು, ಕುಸ್ತಿ: ಜಿಲ್ಲಾ ಕ್ರೀಡಾಂಗಣ-ಬೆಳಗಾವಿ, ವಾಲಿಬಾಲ್, ಜಿಲ್ಲಾ ಕ್ರೀಡಾಂಗಣ-ಬೆಳಗಾವಿ ಇಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.