ರಾಜ್ಯದಲ್ಲಿ ಒಟ್ಟು ಅನರ್ಹಗೊಂಡ BPL ಕಾರ್ಡುಗಳೆಷ್ಟು? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

STATE NEWS : ರಾಜ್ಯದಲ್ಲಿ 13,87,652 ಬಿಪಿಎಲ್‌ ಕಾರ್ಡುಗಳು (BPL Card) ಅನರ್ಹ ಎಂದು ಗುರುತಿಸಲಾಗಿದೆ. ಈ ಪೈಕಿ 4036 ಸರ್ಕಾರಿ ನೌಕರರು ಹೊಂದಿರುವ ಕಾರ್ಡುಗಳಾಗಿವೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.

ಅನರ್ಹಗೊಂಡಿರುವ ಕಾರ್ಡುಗಳ ಪೈಕಿ 1.20 ಲಕ್ಷ ರೂ.ಗಿಂತಲು ಹೆಚ್ಚು ಆದಾಯ ಹೊಂದಿರುವ ಕುಟುಂಬಗಳ ಕಾರ್ಡುಗಳ ಸಂಖ್ಯೆ 10,09,476. ಆದಾಯ ತೆರಿಗೆ ಪಾವತಿಸುವವರು ಕಾರ್ಡುಗಳ ಸಂಖ್ಯೆ 98,473. ಆರು ತಿಂಗಳಿಂದ ಪಡಿತರವನ್ನು ಪಡೆಯದೆ ಅನರ್ಹಗೊಂಡಿರುವ ಕಾರ್ಡುಗಳ ಸಂಖ್ಯೆ 2,75,667 ಎಂದು ತಿಳಿಸಲಾಗಿದೆ.

BPL-Card-APL-Card-Ration-Card

ಇದನ್ನೂ ಓದಿ » ಇಂದಿನಿಂದ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಕ್ರಿಕೆಟ್‌ ಆರಂಭ

1,59,319 ಸದಸ್ಯರು ಮೃತಪಟ್ಟ ಹಿನ್ನೆಲೆ ಅವರ ಹೆಸರನ್ನು ಕಾರ್ಡುಗಳಿಂದ ತೆಗೆದು ಹಾಕಲಾಗಿದೆ. ಅಮಾನತು, ರದ್ದು ಮತ್ತು ಎಪಿಎಲ್‌ ಕಾರ್ಡುಗಳಾಗಿ ಬದಲಾದ ಒಟ್ಟು ಕಾರ್ಡುಗಳ ಸಂಖ್ಯೆ 3,81,983 ಎಂದು ಆಹಾರ ಇಲಾಖೆ ತಿಳಿಸಿದೆ.  

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment