ಬೆಂಗಳೂರು : ಕೋವಿಡ್ ನಿಯಂತ್ರಣಕ್ಕೆ ರಚಿಸಲಾಗಿರುವ ತಾಂತ್ರಿಕ ಸಲಹಾ ಸಮಿತಿಯ ಡಾ. ರವಿ ಅವರು ಸೋಂಕಿತರ ತೆಗೆದುಕೊಳ್ಳಬೇಕಿರುವ ಕ್ರಮದ ಕುರಿತು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಡಾ.ಸುಧಾಕರ್ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ರವಿ ಅವರು ಹಲವು ಸಲಹೆಗಳನ್ನು ನೀಡಿದ್ದಾರೆ.
![]() |
ಡಾ.ರವಿ ಅವರ ಸಲಹೆಗಳೇನು?
ಆರ್ಟಿಪಿಸಿಆರ್ ರಿಪೋರ್ಟ್ ಪಾಸಿಟಿವ್ ಬಂದಿದೆ ಅಂದಾಕ್ಷಣ ಗಾಬರಿಯಾಗುವುದು ಬೇಡ. ಶೇ.90ರಷ್ಟು ಮಂದಿಗೆ ತೊಂದರೆ ಇಲ್ಲ. ಶೇ.10ರಷ್ಟು ಮಂದಿ ಮಾತ್ರವೇ ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಇರುತ್ತದೆ.
ಇದನ್ನೂ ಓದಿ – ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ಸಮಸ್ಯೆ ನೀಗಿಸಲು ಸರ್ಕಾರದಿಂದ ಮಾರ್ಗಸೂಚಿ
ಜ್ವರ, ಮೈಕೈ ನೋವು, ವಾಸನೆ ಗೊತ್ತಾಗದೆ ಇರುವುದು, ರುಚಿ ಗೊತ್ತಾಗದಿರುವವರು ಮನೆಯಲ್ಲಿ ಅಥವಾ ಕೋವಿಡ್ ಕೇರ್ ಸೆಂಟರ್ನಲ್ಲಿ ಐಸೊಲೇಷನ್ಗೆ ಒಳಗಾಗಬಹುದು. ಇವರು ಯಾವ ರೀತಿ ಚಿಕಿತ್ಸೆಗೆ ಒಳಗಾಗಬೇಕು ಎಂಬ ಗೈಡ್ಲೈನ್ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆಗೆ ಬರಬೇಕು,
ಪಾಸಿಟಿವ್ ಬಂದವರು ಜ್ವರ, ಮೈಕೈ ನೋವಿದ್ದರೆ ಪ್ಯಾರಸಿಟಮಲ್ ಮಾತ್ರೆ ತೆಗೆದುಕೊಳ್ಳಬೆಹುದು. ದಿನಕ್ಕೆ ಮೂರರಿಂದ ನಾಲ್ಕು ಪಡೆಯಬಹುದು. ಡಾಕ್ಸಿಸೈಕ್ಲಿನ್ ಎಂಬ ಆಂಟಿ ಬಯೋಟಿಕ್ ಮಾತ್ರೆ ಬೆಳಗ್ಗೆ ಮತ್ತು ರಾತ್ರಿ ಐದು ದಿನಕ್ಕೆ, ಐವರ್ ಮ್ಯಾಕ್ಟಿನ್ ಎಂಬ ಮಾತ್ರೆ ದಿನಕ್ಕೆ ಮೂರು, ಜಿಂಕ್ ಮತ್ತು ವಿಟಮಿನ್ ಸಿ ಮಾತ್ರೆಗಳನ್ನೂ ತೆಗೆದುಕೊಳ್ಳಬಹುದು. ಬಿಸಿ ನೀರಿಗೆ ಉಪ್ಪು ಹಾಕಿಕೊಂಡು ಬಾಯಿ ಮುಕ್ಕಳಿಸಬೇಕು. ಇದು ಕಡಿಮೆ ತೀವ್ರತೆಯ ಸೋಂಕು ಇರುವವರಿಗೆ.
ಇದನ್ನೂ ಓದಿ – ರಾಜ್ಯದಲ್ಲಿ 14 ದಿನ ಬಿಗಿ ಕ್ರಮ ಘೋಷಣೆ, ಏನಿರುತ್ತೆ? ಏನಿರಲ್ಲ?
ಆಕ್ಸಿಜನ್ ಪ್ರಮಾಣ ಕಡಿಮಯಾದ ಕೂಡಲೆ ವೆಂಟಿಲೇಟರ್, ಆಕ್ಸಿಜನ್ ಬೇಕಿಲ್ಲ. ಮೂರು ನಿಮಿಷ ಅಥವಾ ಆರು ನಿಮಿಷದ ವಾಕಿಂಗ್ ಮಾಡಬೇಕು. ಆ ಬಳಿಕ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿದೆ, ಉಸಿರಾಟದ ಸಮಸ್ಯೆಯಾಗಿದೆ ಅಂದರೆ ಮಾತ್ರ ವೈದ್ಯರನ್ನು ಸಂಪರ್ಕಿಸಬೇಕು.
ಅಂಗಾತ ಮಲಗುವ ಬದಲು ಉಲ್ಟಾ ಮಲಗಬೇಕು. ಅಂದರೆ ಹೊಟ್ಟೆ ಮೇಲೆ ಮಲಗಬೇಕು. ಎದೆಯ ಕೆಳಗೆ ದಿಂಬು ಇರಿಸಬೇಕು. ಹೀಗೆ ಮಾಡುವುದರಿಂದ ಆಕ್ಸಿಜನ್ ಪ್ರಮಾಣ ಹೆಚ್ಚಳವಾಗಲಿದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದೆಲ್ಲವೂ ಮಾಡಿ ಆಕ್ಸಿಜನ್ ಪ್ರಮಾಣ ಏರಿಕೆಯಾಗದೆ ಇದ್ದರೆ ಆ ಬಳಿಕ ಆಸ್ಪತ್ರೆಗೆ ದಾಖಲಾಗಬಹುದು.
ಪಾಸಿಟಿವ್ ಬಂದಾಕ್ಷಣ ಎಲ್ಲರಿಗೂ ರೆಮ್ಡಿಸಿವರ್ ಇಂಜೆಕ್ಷನ್, ಆಕ್ಸಿಜನ್, ವೆಂಟಿಲೇಟರ್ ಬೇಕು ಅಂತೇನಿಲ್ಲ. ಶೇ.10 ರಿಂದ 15ರಷ್ಟು ಮಂದಿಗೆ ಮಾತ್ರ ಇವೆಲ್ಲ ಬೇಕಾಗುತ್ತದೆ.
ಐಸೊಲೇಷನ್ಗೆ ಒಳಗಾದವರಿಗೆ ಉಸಿರಾಟದ ತೊಂದರೆ ಆಗುತ್ತಿದೆ, ಸುಸ್ತಾಗುತ್ತಿದೆ ಎಂದನಿಸಿದಾಗ ಅವರು ವೈದ್ಯರ ಸಲಹೆ ಪಡೆದು, ಅಗತ್ಯವಿದ್ದರಷ್ಟೇ ಆಸ್ಪತ್ರೆಗೆ ದಾಖಲಾಗಬಹುದು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200