BREAKING NEWS | ರಾಜ್ಯದಲ್ಲಿ 14 ದಿನ ಬಿಗಿ ಕ್ರಮ ಘೋಷಣೆ, ಏನಿರುತ್ತೆ? ಏನಿರಲ್ಲ?

Covid 19 Vaccination Kan poster 1 1

ಬೆಂಗಳೂರು : ವ್ಯಾಪಕವಾಗಿ ಹರಡುತ್ತಿರುವ ಕರೋನ ಸೋಂಕು ತಡೆಯಲು ಮತ್ತೊಮ್ಮೆ ಬಿಗಿ ಕ್ರಮ ಕೈಗೊಂಡಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. 14 ದಿನ ಬಿಗಿ ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನ ಕೈಗೊಂಡಿದೆ

ಸಭೆ ಬಳಿಕ ಸಿಎಂ ಹೇಳಿದ್ದೇನು?

ಸಚಿವ ಸಂಪುಟ ಸದಸ್ಯರು, ತಜ್ಱರ ಜೊತೆ ಸಭೆಯನ್ನು ನಡೆಸಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ 18 -45 ವರ್ಷದವರಿಗೆ ವ್ಯಾಕ್ಸಿನ್ ಉಚಿತವಾಗಿ ಕೊಡುತ್ತೇವೆ. ಈ ಬಗ್ಗೆ ಆರೋಗ್ಯ ಇಲಾಖೆ ರೂಪುರೇಷೆ ಸಿದ್ಧಪಡಿಸುತ್ತದೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರದಲ್ಲಿ

ನಾಳೆ (27 ಏಪ್ರಿಲ್) ರಾತ್ರಿಯಿಂದ 14 ದಿನ ಬಿಗಿ ಕ್ರಮ ಜಾರಿಯಲ್ಲಿರುತ್ತೆ. ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ.

ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

10 ಗಂಟೆ ಬಳಿಕ ಎಲ್ಲ ಅಂಗಡಿಗಳು ಬಾಗಿಲು ಹಾಕಬೇಕು.

ಉತ್ಪಾದನಾ ಕ್ಷೇತ್ರ , ಕೃಷಿ ಕ್ಷೇತ್ರಕ್ಕೆ ಯಾವುದೆ ತೊಂದರೆ ಇಲ್ಲ. ಎಮರ್ಜನ್ಸಿ, ಮೆಡಿಕಲ್ ಕ್ಷೇತ್ರ ಮುಂದುವರೆಯಲಿದೆ.

ಎರಡು ವಾರದಲ್ಲಿ ಕರೋನ ಕಂಟ್ರೋಲ್​ಗೆ ಬಾರದೆ ಇದ್ದರೆ, ಬಿಗಿ ಕ್ರಮ ಮುಂದುವರೆಯಲಿದೆ.

ಕೆಎಸ್​ಆರ್​ಟಿಸಿ ಬಸ್​ ಸಂಚಾರ ಇರುವುದಿಲ್ಲ. ಗೂಡ್ಸ್ ಸಾಗಣೆ ಮಾಡಲು ಯಾವುದೆ ಅಡ್ಡಿಯಿಲ್ಲ.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : April 26, 2021 at 2:22 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 26, 2021

Leave a Comment