ಮತ್ತೊಬ್ಬ ನಕ್ಸಲ್‌ ಶರಣಾಗತಿ, ಇವತ್ತು ಕೋಟೆಹೊಂಡ ರವಿ ಮುಖ್ಯವಾಹಿನಿಗೆ

SHIVAMOGGA LIVE NEWS, 1 FEBRUARY 2025

ಶೃಂಗೇರಿ : ನಕ್ಸಲ್‌ ಚಳವಳಿಯಲ್ಲಿ (Naxal) ಸಕ್ರಿಯವಾಗಿದ್ದ ಕೋಟೆಹೊಂಡ ರವಿ ಅಲಿಯಾಸ್‌ ರವೀಂದ್ರ ನೆಮ್ಮಾರ್‌ ಕಳೆದ ರಾತ್ರಿ ಶೃಂಗೇರಿಯಲ್ಲಿ ಶರಣಾಗಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತದ ಎದುರು ಶರಣಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೆ ಆರು ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶರಾಣಾಗಿದ್ದರು. ಆದರೆ ಕೋಟೆಹೊಂಡ ರವಿ ಮಾತ್ರ ಭೂಗತವಾಗಿದ್ದರು. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಕಳೆದ ರಾತ್ರಿ ಶೃಂಗೇರಿಯ ಅರಣ್ಯ ಐಬಿಯಲ್ಲಿ ಕೋಟೆಹೊಂಡ ರವಿ ಅವರು ಶರಣಾಗಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಅವರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ ಎಂದು ಪ್ರಗತಿಪರ ಹೋರಾಟಗಾರ ಕೆ.ಎಲ್.ಅಶೋಕ್‌ ಮಾಹಿತಿ ನೀಡಿದ್ದಾರೆ.

naxal-kotehonda-ravi-surrenders-at-sringeri

ನಕ್ಸಲ್‌ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ಕೆ.ವಸಂತ, ಜಿಶಾ, ಮಾರೆಪ್ಪ ಅರೋಲಿ ಈಚೆಗೆ ಶರಣಾಗಿದ್ದರು. ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರ ಪ್ರಯತ್ನದಿಂದ ಈಗ ಕೋಟೆಹೊಂಡ ರವಿ ಶರಣಾಗತಿಯಾಗಿದ್ದು, ರಾಜ್ಯದ ಎಲ್ಲ ನಕ್ಸಲರು ಮುಖ್ಯವಾಹಿನಿಗೆ ಬಂದಂತಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಟ್ರಾಫಿಕ್‌ ಪೊಲೀಸರಿಂದ ಹೆಲ್ಪ್‌ಲೈನ್‌ ಶುರು, ವಾಟ್ಸಪ್‌ನಲ್ಲೇ ದಾಖಲಿಸಬಹುದು ದೂರು

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : February 1, 2025 at 10:03 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 1, 2025

Leave a Comment