ಜಾತಿ ಸಮೀಕ್ಷೆ: ಸಮೀಕ್ಷಾದಾರರಿಗೆ ಗೌರವಧನ ಪಾವತಿಗೆ ಅನುದಾನ ಬಿಡುಗಡೆ, ಯಾರಿಗೆ ಎಷ್ಟೆಷ್ಟು ಅನುದಾನ ಸಿಗಲಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಸಮೀಕ್ಷಾದಾರರಿಗೆ (Census) ಗೌರವಧನ ಪಾವತಿಸಲು ಜಿಲ್ಲಾಧಿಕಾರಿಗಳಿಗೆ ₹127.73 ಕೋಟಿ ಅನುದಾನವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿದೆ.

ಯಾರಿಗೆ ಎಷ್ಟೆಷ್ಟು ಅನುದಾನ?

ಪ್ರತಿ ಸಮೀಕ್ಷಾದಾರರಿಗೆ ₹5000 ನಿಗದಿತ ಮೊತ್ತ. ಜೊತೆಗೆ ಪ್ರತಿ ಮನೆ ಸಮೀಕ್ಷೆಗೆ ಇಂತಿಷ್ಟು ಎಂದು ನಿಗದಿಪಡಿಸಲಾಗಿದೆ. ಒಂದೆರಡು ಸದಸ್ಯರಿರುವ ಮನೆಗಳ ಸಮೀಕ್ಷೆಗೆ ತಲಾ ₹50,  ಮೂರು ಮತ್ತು ಅದಕ್ಕಿಂತ ಹೆಚ್ಚು ಸದಸ್ಯರಿರುವ ಮನೆಗಳ ಸಮೀಕ್ಷೆಗೆ ತಲಾ ₹100 ಪಾವತಿಸುವಂತೆ ತಿಳಿಸಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

VIDHANA-SOUDHA-GENERAL-IMAGE.jpg

ಮೇಲ್ವಿಚಾರಕರಿಗೆ ನಿಗದಿತ ಮೊತ್ತ ₹10,000 ಗೌರವಧನ ನಿಗದಿಪಡಿಸಿ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ ಆದೇಶಿಸಿದ್ದಾರೆ. ಇಡಿಸಿಎಸ್‌ನಿಂದ ಲಭ್ಯ ಸಮೀಕ್ಷಾದಾರರ ಹೆಸರು ಮತ್ತು ಅವರಿಗೆ ಪಾವತಿಸಬೇಕಾಗಿರುವ ಮೊತ್ತದ ವಿವರವನ್ನು ಜಿಲ್ಲಾವಾರು ಪ್ರತ್ಯೇಕವಾಗಿ ನೀಡಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ, ಹುಬ್ಬಳ್ಳಿ ಜನಶತಾಬ್ದಿ ರೈಲುಗಳ ಕುರಿತು ನೈಋತ್ಯ ರೈಲ್ವೆಯಿಂದ ಮಹತ್ವದ ಅಪ್‌ಡೇಟ್‌

Census

Leave a Comment