ಶಿವಮೊಗ್ಗ, ಹುಬ್ಬಳ್ಳಿ ಜನಶತಾಬ್ದಿ ರೈಲುಗಳ ಕುರಿತು ನೈಋತ್ಯ ರೈಲ್ವೆಯಿಂದ ಮಹತ್ವದ ಅಪ್‌ಡೇಟ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರೈಲ್ವೆ ಸುದ್ದಿ: ಶಿವಮೊಗ್ಗ ಮತ್ತು ಹುಬ್ಬಳ್ಳಿ ಜನಶತಾಬ್ದಿ (Jan Shatabdi) ರೈಲುಗಳು ತಿಪಟೂರು ನಿಲ್ದಾಣದಲ್ಲಿ ನೀಡುತ್ತಿದ್ದ ನಿಲುಗಡೆ ಅವಧಿಯನ್ನು ಮತ್ತೆ ಮುಂದುವರೆಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ತಿಪಟೂರು ನಿಲ್ದಾಣದಲ್ಲಿ ರೈಲು ಸಂಖ್ಯೆ 12079/12080 ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್‌ ಮತ್ತು 12089/12090 ಕೆಎಸ್ಆರ್ ಬೆಂಗಳೂರು – ಶಿವಮೊಗ್ಗ ಟೌನ್ – ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳಿಗೆ ನೀಡಲಾಗಿದ್ದ ತಾತ್ಕಾಲಿಕ ನಿಲುಗಡೆಯನ್ನು ಇನ್ನೂ ಆರು ತಿಂಗಳ ಅವಧಿಗೆ ಮುಂದುವರಿಸಲಾಗಿದೆ. ಈ ವಿಸ್ತರಣೆಯು 2025ರ ನವೆಂಬರ್ 16 ರಿಂದ 2026ರ ಮೇ 15ರವರೆಗೆ ಜಾರಿಯಲ್ಲಿರಲಿದೆ. ಈ ನಿಲುಗಡೆಯು ಪ್ರಸ್ತುತ ಇರುವ ವೇಳಾಪಟ್ಟಿಯಂತೆಯೇ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

shimoga-to-bangalore-jan-shatabdi-train-railway.webp

ಇದನ್ನೂ ಓದಿ » ಶಿವಮೊಗ್ಗದ ಗೋಪುರ ಗಡಿಯಾರದಲ್ಲಿ ಪೂರ್ವಕ್ಕೊಂದು ಸಮಯ, ಪಶ್ಚಿಮಕ್ಕೊಂದು ಟೈಮ್‌

Jan Shatabdi

Leave a Comment