ಈ ತಿಂಗಳಲ್ಲಿ ಐದು ದಿನ ತಾಳಗುಪ್ಪ – ಬೆಂಗಳೂರು ರೈಲು ಸಂಚಾರ ಇರಲ್ಲ, ಯಾವೆಲ್ಲ ದಿನ ವ್ಯತ್ಯಯವಾಗುತ್ತೆ? ಕಾರಣವೇನು?

ಶಿವಮೊಗ್ಗದ ಲೈವ್.ಕಾಂ | SHIMOGA NEWS |  1 ಜನವರಿ 2022

ಅರಸಿಕೆರೆ – ತುಮಕೂರು ನಡುವೆ ರೈಲ್ವೆ ಹಳಿ ಡಬ್ಲಿಂಗ್ ಕೆಲಸ ನಡೆಯುತ್ತಿದೆ. ನಿಟ್ಟೂರು ಸಂಪಿಗೆ ರಸ್ತೆ ಭಾಗದಲ್ಲಿ ಡಬ್ಲಿಂಗ್ ಕಾಮಗಾರಿಗೆ ದಿನಾಂಕ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಶಿವಮೊಗ್ಗ ಜಿಲ್ಲೆಯ ತಾಳುಗಪ್ಪದಿಂದ ಬೆಂಗಳೂರು ನಡುವಿನ ಒಂದು ರೈಲಿನ ಸಂಚಾರದಲ್ಲೂ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಾವ ರೈಲು ಸಂಚಾರ ವ್ಯತ್ಯಯವಾಗಲಿದೆ?

ಐದು ದಿನ ಬೆಂಗಳೂರು – ತಾಳಗುಪ್ಪ ರೈಲು (ಸಂಖ್ಯೆ 20651) ಸ್ಥಗಿತವಾಗಲಿದೆ. ಜನವರಿ 2, ಜ.7, ಜ.10, ಜ.16, ಜ.21ರಂದು ಈ ರೈಲು ಸಂಚಾರವಿರಲ್ಲ.

Kalleshwara-Enterprises.webp

ಇನ್ನ, ತಾಳುಗಪ್ಪ – ಬೆಂಗಳೂರು ರೈಲು (ಸಂಖ್ಯೆ 20652) ಕೂಡ ಈ ತಿಂಗಳಲ್ಲಿ ಐದು ದಿನ ಸಂಚರಿಸುವುದಿಲ್ಲ. ಜನವರಿ 3, ಜ.8, ಜ.11, ಜ.17, ಜ.22ರಂದು ಈ ರೈಲು ಸಂಚಾರವಿರಲ್ಲ.

ಇದನ್ನೂ ಓದಿ | ಶಿವಮೊಗ್ಗದಿಂದ ಭಾಗಶಃ ರದ್ದಾಗಿದ್ದ ರೈಲು ಸಂಚಾರ ಪುನಾರಂಭ, ಜ.3ರಿಂದ ಮರು ಸಂಚಾರ

ಇದನ್ನೂ ಓದಿ | ಶಿವಮೊಗ್ಗಕ್ಕೆ ಬಂತು ವಿಸ್ಟೋಡಾಮ್ ರೈಲು ಬೋಗಿ , ವಿಶೇಷತೆ ಏನು? ಮೊದಲ ದಿನ ಎಷ್ಟು ಜನ ಪ್ರಯಾಣಿಸಿದರು?

ABOUT ME NEW FINAL FINAL

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment