ಶಿವಮೊಗ್ಗ: ನಗರದ ಚಾಲುಕ್ಯನಗರದ ಬಡಾವಣೆಯಲ್ಲಿ ಮತ್ತೊಂದು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ನಿವೃತ್ತ ಉದ್ಯೋಗಿ ಮನೆಯಲ್ಲಿದ್ದಾಗಲೇ (bedroom) ಕಳ್ಳತನ ನಡೆದಿದೆ. ಬೆಳಗ್ಗೆ ಅವರು ಎಚ್ಚರವಾದಾಗಲೇ ಕಳ್ಳರು ಒಳ ನುಗ್ಗಿರುವುದು ಗೊತ್ತಾಗಿದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ₹60 ಲಕ್ಷದ ಚಿನ್ನಾಭರಣ, ಬೆಳ್ಳಿ ವಸ್ತುಗಳು ದೋಚಿದ ಕಳ್ಳರು, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಯಾರ ಮನೆಯಲ್ಲಿ ನಡೆಯಿತು ಕಳ್ಳತನ?
ಗೋಪಿಶೆಟ್ಟಿಕೊಪ್ಪದಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಮೊಬೈಲ್ ಕಳವು ಮಾಡಿದ್ದಾರೆ. ನಿವೃತ್ತ ಉದ್ಯೋಗಿ ರುದ್ರೇಶಪ್ಪ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಶಿವಮೊಗ್ಗ KSRTC ನಿಲ್ದಾಣದಲ್ಲಿ ವಿಷ ಸೇವಿಸಿದ ಯುವಕ, ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?
ಮನೆಯೊಳಗೆ ನುಗ್ಗಿದ ಕಳ್ಳರು
ಏಪ್ರಿಲ್ 22ರ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ರುದ್ರೇಶಪ್ಪ ಅವರು ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಕಳ್ಳರು ಮನೆಯೊಳಗೆ ನುಗ್ಗಿರುವ ಶಂಕೆ ಇದೆ. ಅವರು ವಾಪಸ್ ಬಂದು ರೂಂಗೆ ಹೋಗಿ ಮಲಗಿದ ಮೇಲೆ ಕಳ್ಳರು ಅವರ ಬೆಡ್ ರೂಮಿನ ಬಾಗಿಲನ್ನು ಹೊರಗಿನಿಂದ ಚಿಲಕ ಹಾಕಿದ್ದಾರೆ. ರುದ್ರೇಶಪ್ಪ ಬೆಳಗ್ಗೆ 6 ಗಂಟೆಗೆ ಎದ್ದು ನೋಡಿದಾಗ ರೂಂ ಬಾಗಿಲು ಹಾಕಿತ್ತು. ಪಕ್ಕದ ಮನೆಯವರನ್ನು ಕರೆದು ರೂಂ ಬಾಗಿಲು ತೆರೆಸಿಕೊಂಡಿದ್ದಾರೆ.

ಏನೇನೆಲ್ಲ ಕಳುವಾಗಿತ್ತು?
ಬೆಡ್ ರೂಂನಿಂದ ಹೊರಗೆ ಬಂದು ಪರಿಶೀಲಿಸಿದಾಗ ಮನೆಯ ಬೀರುವಿನ ಬಾಗಿಲು ತೆರೆದಿತ್ತು. ಅದರಲ್ಲಿದ್ದ 11 ಗ್ರಾಂ ತೂಕದ ಚಿನ್ನದ ಚೈನ್, 7 ಗ್ರಾಂ ತೂಕದ ಉಂಗುರ, ಒಂದು ಮೊಬೈಲ್ ಫೋನ್ ಹಾಗೂ ₹20,000 ಸಾವಿರ ನಗದು ಕಳುವಾಗಿದೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ₹2.10 ಲಕ್ಷ ಎಂದು ಅಂದಾಜಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







