ವಿಶ್ವದ ಟಾಪ್‌ ವಿಜ್ಞಾನಿಗಳ ಪಟ್ಟಿಯಲ್ಲಿ ಶಿವಮೊಗ್ಗದ ಮೂವರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-Number-1-Website

SHIMOGA NEWS, 20 SEPTEMBER 2024 : ಅಮೇರಿಕಾದ ಪ್ರತಿಷ್ಠಿತ ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯ ಹೊರ ತಂದಿರುವ ವಿಶ್ವದ ಟಾಪ್ ಶೇ.2 ರಷ್ಟು ವಿಜ್ಞಾನಿಗಳ (Scientists) ಪಟ್ಟಿಯಲ್ಲಿ ಶಿವಮೊಗ್ಗದ ಮೂವರ ಹೆಸರು ಪ್ರಕಟಿಸಲಾಗಿದೆ.

ಯಾರೆಲ್ಲರ ಹೆಸರು ಇದೆ?

girish» ಪ್ರೊ. ಬಿ.ಜೆ.ಗಿರೀಶ್‌

ಕುವೆಂಪು ವಿಶ್ವವಿದ್ಯಾಲಯದ ಗಣಿತ ವಿಜ್ಞಾನದ ಪ್ರಾಧ್ಯಾಪಕ ಪ್ರೊ. ಬಿ.ಜೆ.ಗಿರೀಶ್‌ ಅವರ ಹೆಸರು ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿದೆ. 46,890ನೇ ಸ್ಥಾನ ಪಡೆದಿದ್ದಾರೆ. ಇಂಜಿನಿಯರಿಂಗ್, ಅನ್ವಯಿಕ ಭೌತಶಾಸ್ತ್ರ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯಗಳ ಕುರಿತು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ತಮ್ಮ ಸಂಶೋಧನಾ ಒಟ್ಟು ಕಾಲಾವಧಿಯಲ್ಲಿ 1,46,024 ಅಂಕಗಳೊಂದಿಗೆ ಸತತ ಆರನೇ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧನೆ ಮಾಡಿದ್ದಾರೆ.

kumaraswamy» ಪ್ರೊ. ಬಿ.ಇ. ಕುಮಾರಸ್ವಾಮಿ

ಕುವೆಂಪು ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಬಿ.ಇ.ಕುಮಾರಸ್ವಾಮಿ ಅವರು ಈ ವರ್ಷ 1,69,851ನೇ ಸ್ಥಾನ ಪಡೆದಿದ್ದಾರೆ. ಸತತ ನಾಲ್ಕನೇ ವರ್ಷ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

arun%20kumar» ಡಾ.ಆರ್‌.ಎಸ್‌. ವರುಣ್‌

ಶಿವಮೊಗ್ಗ ನಗರದ ಡಾ. ಆರ್.ಎಸ್.ವರುಣ್ ಕುಮಾರ್ ಅವರ ಹೆಸರು ಪಟ್ಟಿಯಲ್ಲಿದೆ. ಕಳೆದ ವರ್ಷವು ವರುಣ್‌ ಅವರ ಹೆಸರು ಇತ್ತು. ವರುಣ್ ಕುಮಾರ್ ಅವರು ಪತ್ರಕರ್ತ ರವಿಕುಮಾರ್ ಮತ್ತು ಶಶಿಕಲಾ ದಂಪತಿಯ ಪುತ್ರ. ವರುಣ್ ಅವರು ಪ್ರಸ್ತುತ ಮಲೇಷಿಯಾದ ಸನ್ ವೇ ಯೂನಿವರ್ಸಿಟಿಯಲ್ಲಿ ಗಣಿತಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Banana-Mandi-In-Shimoga-APMC

ಇದನ್ನೂ ಓದಿ » ಅಧಿಕಾರಿಗಳು, ಸಿಬ್ಬಂದಿ ಲಂಚ ಕೇಳ್ತಿದ್ದಾರಾ? ನಿಮ್ಮೂರಿಗೆ ಬರ್ತಿದ್ದಾರೆ ಲೋಕಾಯುಕ್ತ, ಯಾವಾಗ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 20, 2024

Leave a Comment