ಶಿವಮೊಗ್ಗ ಲೈವ್
ರೈಲ್ವೆ ಸುದ್ದಿ: ತುಮಕೂರು ರೈಲು ನಿಲ್ದಾಣದ ಯಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಹಾಗೂ ಲೈನ್ ಬ್ಲಾಕ್ ಹಿನ್ನೆಲೆ ಅಕ್ಟೋಬರ್ 23 ರಿಂದ ನವೆಂಬರ್ 7ರ ನಡುವಿನ ವಿವಿಧ ದಿನಾಂಕಗಳಲ್ಲಿ ಶಿವಮೊಗ್ಗ, ತಾಳಗುಪ್ಪ ಸೇರಿ ಹಲವು ಪ್ರಮುಖ ರೈಲುಗಳ ಸಂಚಾರ ರದ್ದತಿ, ನಿರ್ಗಮನ ಸಮಯ ಮರುನಿಗದಿ ಹಾಗೂ ಮಾರ್ಗಮಧ್ಯೆ ನಿಯಂತ್ರಣ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗ, ತಾಳಗುಪ್ಪ ರೈಲುಗಳು
- ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (20689): ಅಕ್ಟೋಬರ್ 23 ರಿಂದ 25, ಅಕ್ಟೋಬರ್ 28 ರಿಂದ ನವೆಂಬರ್ 1 ಹಾಗೂ ನವೆಂಬರ್ 4 ರಿಂದ 7 ರವರೆಗೆ ಯಶವಂತಪುರದಿಂದ ಹೊರಡುವ ಸಮಯವನ್ನು 75 ನಿಮಿಷ (1 ಗಂಟೆ 15 ನಿಮಿಷ) ವಿಳಂಬಗೊಳಿಸಲಾಗಿದೆ.
- ತಾಳಗುಪ್ಪ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (20652): ಅಕ್ಟೋಬರ್ 23 ರಿಂದ 25, ಅಕ್ಟೋಬರ್ 28 ರಿಂದ ನವೆಂಬರ್ 1 ಹಾಗೂ ನವೆಂಬರ್ 4 ರಿಂದ 7 ರವರೆಗೆ ಈ ರೈಲನ್ನು ಮಾರ್ಗಮಧ್ಯೆ 40 ನಿಮಿಷಗಳ ಕಾಲ ವಿಳಂಬವಾಗಲಿದೆ.
ಉಳಿದ ಮಾರ್ಗದ ರೈಲುಗಳ ವಿವರ
ರೈಲುಗಳ ರದ್ದತಿ (ಅಕ್ಟೋಬರ್ 23 ರಿಂದ 25, ಅಕ್ಟೋಬರ್ 28 ರಿಂದ ನವೆಂಬರ್ 1, ನವೆಂಬರ್ 4 ರಿಂದ 7 ರವರೆಗೆ ಒಟ್ಟು 12 ದಿನಗಳು)

- ತುಮಕೂರು–ಕೆಎಸ್‌ಆರ್ ಬೆಂಗಳೂರು ಮೆಮು ರೈಲು (66572)
- ಕೆಎಸ್‌ಆರ್ ಬೆಂಗಳೂರು–ತುಮಕೂರು ಮೆಮು ರೈಲು (66571)
ವಿಳಂಬವಾಗಿ ಹೊರಡಲಿರುವ ರೈಲು
- ಕೆಎಸ್‌ಆರ್ ಬೆಂಗಳೂರು–ಧಾರವಾಡ ಎಕ್ಸ್‌ಪ್ರೆಸ್ (12725): ಅಕ್ಟೋಬರ್ 23-25, ಅಕ್ಟೋಬರ್ 28-ನವೆಂಬರ್ 1 ಹಾಗೂ ನವೆಂಬರ್ 4-7 ರವರೆಗೆ ಕೆಎಸ್‌ಆರ್ ಬೆಂಗಳೂರಿನಿಂದ 30 ನಿಮಿಷ ವಿಳಂಬವಾಗಿ ಹೊರಡಲಿದೆ.
ಮಾರ್ಗಮಧ್ಯೆ ನಿಯಂತ್ರಣಗೊಳ್ಳುವ ರೈಲು
- ಕೆಎಸ್‌ಆರ್ ಬೆಂಗಳೂರು–ತುಮಕೂರು ಮೆಮು (66567): ಅಕ್ಟೋಬರ್ 23-25, ಅಕ್ಟೋಬರ್ 28-ನವೆಂಬರ್ 1 ಹಾಗೂ ನವೆಂಬರ್ 4-7 ರವರೆಗೆ ಮಾರ್ಗಮಧ್ಯೆ 30 ನಿಮಿಷ ನಿಯಂತ್ರಣ.
- ವಾಸ್ಕೋ ಡ ಗಾಮಾ–ಯಶವಂತಪುರ ಎಕ್ಸ್‌ಪ್ರೆಸ್ (17310): ಅಕ್ಟೋಬರ್ 22-24, ಅಕ್ಟೋಬರ್ 27-31 ಹಾಗೂ ನವೆಂಬರ್ 3-6 ರವರೆಗೆ ಮಾರ್ಗಮಧ್ಯೆ 15 ನಿಮಿಷ ನಿಯಂತ್ರಣ.
- ಮೈಸೂರು–ಬೆಳಗಾವಿ ಎಕ್ಸ್‌ಪ್ರೆಸ್ (20676): ಅಕ್ಟೋಬರ್ 23-25, ಅಕ್ಟೋಬರ್ 28-ನವೆಂಬರ್ 1 ಹಾಗೂ ನವೆಂಬರ್ 4-7 ರವರೆಗೆ ಮಾರ್ಗಮಧ್ಯೆ 15 ನಿಮಿಷ ನಿಯಂತ್ರಣ.
- ಉದಯಪುರ ಸಿಟಿ–ಮೈಸೂರು ಎಕ್ಸ್‌ಪ್ರೆಸ್ (19667): ಅಕ್ಟೋಬರ್ 26 ಮತ್ತು ನವೆಂಬರ್ 2 ರಂದು ಮಾರ್ಗಮಧ್ಯೆ 30 ನಿಮಿಷ ನಿಯಂತ್ರಣ.
ಪ್ರಯಾಣಿಕರು ಈ ವೇಳಾಪಟ್ಟಿಯ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣ ಯೋಜಿಸಿಕೊಳ್ಳಬೇಕೆಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.