ರೈಲ್ವೆ ಪ್ರಯಾಣಿಕರೆ ಗಮನಿಸಿ, ರಾಜ್ಯದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ, ಯಾವಾಗ?

 ಶಿವಮೊಗ್ಗ  LIVE 

ರೈಲ್ವೆ ಸುದ್ದಿ: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ವಿವಿಧ ಇಂಜಿನಿಯರಿಂಗ್ ಕಾಮಗಾರಿ ನಡೆಸಲಾಗುತ್ತಿದೆ. ಭೀಮಸಂದ್ರ ಲಿಮಿಟೆಡ್ ಹೈಟ್ ಸಬ್‌ವೇನಲ್ಲಿ ಗಾರ್ಡರ್ ಬದಲಾವಣೆ, ಭೀಮಸಂದ್ರ ಮತ್ತು ಮುದ್ದಲಿಂಗನಹಳ್ಳಿ ಹಾಲ್ಟ್ ನಿಲ್ದಾಣಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ, ಹಾಗೂ ನಿಡವಂದ ಮತ್ತು ಹಿರೇಹಳ್ಳಿ ನಡುವಿನ ಲೆವೆಲ್ ಕ್ರಾಸಿಂಗ್–28 ರಲ್ಲಿನ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಆದ್ದರಿಂದ ವಿವಿಧ ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೆ (Train) ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವೆಲ್ಲ ರೈಲುಗಳ ರದ್ದಾಗಲಿವೆ?

ಡಿ.17 ಮತ್ತು ಡಿ.24ರಂದು ರೈಲು ಸಂಖ್ಯೆ 16239 ಚಿಕ್ಕಮಗಳೂರು – ಯಶವಂತಪುರ ದೈನಂದಿನ ಎಕ್ಸ್ ಪ್ರೆಸ್, ರೈಲು ಸಂಖ್ಯೆ 16240 ಯಶವಂತಪುರ – ಚಿಕ್ಕಮಗಳೂರು ದೈನಂದಿನ ಎಕ್ಸ್ ಪ್ರೆಸ್ & ರೈಲು ಸಂಖ್ಯೆ 12614 ಕೆಎಸ್ಆರ್ ಬೆಂಗಳೂರು – ಮೈಸೂರು ದೈನಂದಿನ ಎಕ್ಸ್ ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.

Train-Jan-Shatabdi-General-Image

ಭಾಗಶಃ ರದ್ದಾಗುವ ರೈಲುಗಳು

ಡಿ.17, 20, 21 ಮತ್ತು 24 ರಂದು, ರೈಲು ಸಂಖ್ಯೆ 66567 ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದೆ. ತುಮಕೂರಿನ ಬದಲಾಗಿ ದೊಡ್ಡಬೆಲೆಯಲ್ಲಿ ತನ್ನ ಸಂಚಾರವನ್ನು ಕೊನೆಗೊಳಿಸುತ್ತದೆ.

ಡಿ.17, 20, 21 ಮತ್ತು 24 ರಂದು, ರೈಲು ಸಂಖ್ಯೆ 66572 ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು ರೈಲು ತುಮಕೂರು ಮತ್ತು ದೊಡ್ಡಬೆಲೆಯ ನಡುವೆ ಭಾಗಶಃ ರದ್ದಾಗಲಿದೆ. ತುಮಕೂರಿನ ಬದಲಾಗಿ ದೊಡ್ಡಬೆಲೆಯಿಂದಲೇ ತನ್ನ ಪ್ರಯಾಣವನ್ನು ಆರಂಭಿಸುತ್ತದೆ.

ಡಿ.17, 20, 21 ಮತ್ತು 24 ರಂದು, ರೈಲು ಸಂಖ್ಯೆ 20652 ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್  ರೈಲು ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರಿನ ನಡುವೆ ಭಾಗಶಃ ರದ್ದಾಗಲಿದೆ. ಕೆಎಸ್ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.

ಡಿ.17, 20, 21 ಮತ್ತು 24 ರಂದು, ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ಮತ್ತು ಅರಸೀಕೆರೆಯ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಿಂದಲೇ ತನ್ನ ಸಂಚಾರವನ್ನು ಆರಂಭಿಸಲಿದೆ.

ಡಿ.17 ಮತ್ತು 24 ರಂದು, ರೈಲು ಸಂಖ್ಯೆ 12726 ಧಾರವಾಡ–ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರಿನ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.

shimoga railway station

ಡಿ.17 ಮತ್ತು 24 ರಂದು, ರೈಲು ಸಂಖ್ಯೆ 66571 ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.

ಡಿ.17 ಮತ್ತು 24 ರಂದು, ರೈಲು ಸಂಖ್ಯೆ 66568 ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು ರೈಲು ತುಮಕೂರು ಮತ್ತು ದೊಡ್ಡಬೆಲೆಯ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.

ಡಿ.17 ಮತ್ತು 24 ರಂದು, ರೈಲು ಸಂಖ್ಯೆ 56281 ಚಾಮರಾಜನಗರ–ತುಮಕೂರು ಪ್ಯಾಸೆಂಜರ್ ರೈಲು ಚಿಕ್ಕಬಾಣಾವರ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ಚಿಕ್ಕಬಾಣಾವರದಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.

ಯಾವೆಲ್ಲ ರೈಲುಗಳ ಮಾರ್ಗ ಬದಲಾವಣೆ?

ಡಿ.16 ಮತ್ತು 23 ರಂದು ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್ ಪ್ರೆಸ್  ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ಇದು ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಗದಿತ ನಿಲುಗಡೆ ಇರುವುದಿಲ್ಲ.

ಡಿ.16 ಮತ್ತು 23 ರಂದು ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 17316 ವೇಲಂಕಣಿ–ವಾಸ್ಕೋ ಡ ಗಾಮ ಎಕ್ಸ್ ಪ್ರೆಸ್  ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಇದು ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಗದಿತ ನಿಲುಗಡೆ ಇರುವುದಿಲ್ಲ.

ಡಿ.17, 20, 21 ಮತ್ತು 24 ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ  17326 ಮೈಸೂರು–ಬೆಳಗಾವಿ ಎಕ್ಸ್ ಪ್ರೆಸ್ ರೈಲು ಮೈಸೂರು, ಹೊಳೆನರಸೀಪುರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಇದು ಪಾಂಡವಪುರದಿಂದ ತಿಪಟೂರಿನವರೆಗಿನ ನಿಲುಗಡೆಗಳನ್ನು ಇರುವುದಿಲ್ಲ.

ಡಿ.17, 20, 21 ಮತ್ತು 24 ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 16579 ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಇದು ತುಮಕೂರು ಮತ್ತು ತಿಪಟೂರು ನಿಲುಗಡೆಗಳನ್ನು ಇರುವುದಿಲ್ಲ.

Prayanikare-Gamanisi-Indian-Railway-News

ಯಾವೆಲ್ಲ ರೈಲುಗಳ ನಿಯಂತ್ರಣವಾಗಲಿವೆ?

ಡಿ.17 ಮತ್ತು 24 ರಂದು ತಮ್ಮ ಮೂಲ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 22685 ಯಶವಂತಪುರ–ಚಂಡೀಗಢ ಎಕ್ಸ್ ಪ್ರೆಸ್, 17309 ಯಶವಂತಪುರ–ವಾಸ್ಕೋ ಡ ಗಾಮ ಎಕ್ಸ್ ಪ್ರೆಸ್ ಮತ್ತು 20651 ಕೆಎಸ್ಆರ್ ಬೆಂಗಳೂರು–ತಾಳಗುಪ್ಪ ಎಕ್ಸ್ ಪ್ರೆಸ್ ರೈಲುಗಳು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಣವಾಗಲಿವೆ.

ಡಿ.19 ಮತ್ತು 20ರಂದು ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್ ಪ್ರೆಸ್ ರೈಲು ಪ್ರಯಾಣದ ಸಮಯದಲ್ಲಿ ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

utsav-exhibition.webp

ರೈಲುಗಳ ಮರು ವೇಳಾಪಟ್ಟಿ

ಡಿ.15 ಮತ್ತು 22 ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 19667 ಉದಯಪುರ ಸಿಟಿ–ಮೈಸೂರು ವೀಕ್ಲಿ ಹಮ್‌ ಸಫರ್‌ ಎಕ್ಸ್‌ಪ್ರೆಸ್‌ ರೈಲು ಉದಯಪುರ ಸಿಟಿಯಿಂದ 180 ನಿಮಿಷ, ಮತ್ತು ರೈಲು ಸಂಖ್ಯೆ 22497 ಶ್ರೀ ಗಂಗಾನಗರ–ತಿರುಚ್ಚಿರಾಪಳ್ಳಿ ಹಮ್‌ ಸಫರ್ ವೀಕ್ಲಿ ಎಕ್ಸ್‌ಪ್ರೆಸ್ ಶ್ರೀ ಗಂಗಾನಗರದಿಂದ 120 ನಿಮಿಷ ತಡವಾಗಿ ಹೊರಡಲಿವೆ. ಅಲ್ಲದೆ, ರೈಲು ಸಂಖ್ಯೆ 22497 ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.

ಡಿ.17 ಮತ್ತು 24ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 12649 ಯಶವಂತಪುರ–ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ , 56282 ತುಮಕೂರು–ಚಾಮರಾಜನಗರ ದೈನಂದಿನ ಪ್ಯಾಸೆಂಜರ್ ಮತ್ತು 12777 ಎಸ್ಎಸ್ಎಸ್ ಹುಬ್ಬಳ್ಳಿ–ತಿರುವನಂತಪುರಂ ಉತ್ತರ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳು ತಮ್ಮ ಮೂಲ ನಿಲ್ದಾಣಗಳಿಂದ 120 ನಿಮಿಷಗಳು ತಡವಾಗಿ  ಹೊರಡಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment