ಕುಂಸಿ, ಅರಸಾಳು ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ವಿಸ್ತರಣೆ, ಯಾವ್ಯಾವ ರೈಲು?

ಶಿವಮೊಗ್ಗ ಲೈವ್‌.ಕಾಂ | ಶಿವಮೊಗ್ಗ

ಪ್ರಯಾಣಿಕರ ಅನುಕೂಲಕ್ಕಾಗಿ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ಮೈಸೂರು-ತಾಳಗುಪ್ಪ-ಮೈಸೂರು ಹಾಗೂ ತಾಳಗುಪ್ಪ-ಮೈಸೂರು-ತಾಳಗುಪ್ಪ ಡೈಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಅವಧಿಯನ್ನು ವಿಸ್ತರಿಸಿ ರೈಲ್ವೆ ಇಲಾಖೆ ಅದೇಶಿಸಿದೆ.

Kumsi-and-Arasalu-Railway-Station-in-Shimoga-taluk

ರೈಲು ಸಂಖ್ಯೆ 16227/16228 ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಅರಸಾಳು ನಿಲ್ದಾಣದಲ್ಲಿ ನಿಲುಗಡೆ ಇರಲಿದೆ. ಹಾಗೆಯೇ ರೈಲು ಸಂಖ್ಯೆ 16205/16206 ತಾಳಗುಪ್ಪ-ಮೈಸೂರು-ತಾಳಗುಪ್ಪ ಡೈಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ನಿಲುಗಡೆ ಮುಂದುವರಿಯಲಿದೆ. 

ಈ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆಯು ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಮುಂದುವರಿಯಲಿದೆ. ಸದ್ಯದ ವೇಳಾಪಟ್ಟಿಯಂತೆಯೇ ಈ ರೈಲುಗಳು ನಿಲುಗಡೆ ಹೊಂದಿರಲಿದೆ ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಧರ್ಮರಾಜ್ ಕಳಗೊಂಡ ತಿಳಿಸಿದ್ದಾರೆ.