ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

Published On : ಮಾರ್ಚ್ 16, 2026

Published By : ನಿತಿನ್‌ ಆರ್‌.ಕೈದೊಟ್ಲು 

PACE-College-2026

ಬೀರೂರು: ರೈಲಿನಲ್ಲಿ ಮರೆತುಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ (lost gold) ಹಾಗೂ ನಗದು ಹೊಂದಿದ್ದ ಬ್ಯಾಗ್‌ ಅನ್ನು ಸುರಕ್ಷಿತವಾಗಿ ಪತ್ತೆಹಚ್ಚಿದ ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಅದನ್ನು ವಾರಸುದಾರರಿಗೆ ಹಸ್ತಾಂತರಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಮಾರ್ಚ್ 13ರಂದು ತರೀಕೆರೆ ನಿವಾಸಿ ರೂಪಾ.ಎಲ್ ಅವರು ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16205) ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ತರೀಕೆರೆ ನಿಲ್ದಾಣದಲ್ಲಿ ಇಳಿದ ನಂತರ, ತಾವು ಪ್ರಯಾಣಿಸುತ್ತಿದ್ದ ಸಾಮಾನ್ಯ ದ್ವಿತೀಯ ವರ್ಗದ ಕೋಚ್‌ನಲ್ಲಿ ವ್ಯಾನಿಟಿ ಬ್ಯಾಗ್ ಮರೆತು ಬಂದಿರುವುದು ಗಮನಕ್ಕೆ ಬಂದಿದೆ.

Leftover-gold-at-talaguppa-mysore-train

ರೈಲ್ವೆ ಪೊಲೀಸ್‌ ತ್ವರಿತ ಕಾರ್ಯಾಚರಣೆ

ಬ್ಯಾಗ್‌ನಲ್ಲಿ ಬೆಲೆಬಾಳುವ ಆಭರಣಗಳಿದ್ದ ಕಾರಣ ಆತಂಕಕ್ಕೊಳಗಾದ ರೂಪಾ, ತಕ್ಷಣ ತರೀಕೆರೆ ನಿಲ್ದಾಣದ ಜಿಆರ್‌ಪಿ ಸಿಬ್ಬಂದಿಗೆ ಮಾಹಿತಿ ನೀಡಿದರು. ಸಿಬ್ಬಂದಿ ಕೂಡಲೇ ಮುಂದಿನ ನಿಲ್ದಾಣವಾದ ಬೀರೂರಿಗೆ ಸಂದೇಶ ರವಾನಿಸಿದ್ದರು. ಸಂಜೆ 6 ಗಂಟೆಗೆ ರೈಲು ಬೀರೂರು ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಎಎಸ್‌ಐ ನವೀನ್ ಮತ್ತು ಹೆಡ್ ಕಾನ್ಸ್‌ಟೇಬಲ್ ಮಾರುತಿ ಬಿ. ಅವರು ಬಾಡಿ ವೋರ್ನ್‌ ಕ್ಯಾಮೆರಾಗಳೊಂದಿಗೆ ರೈಲಿನ ಬೋಗಿಯಲ್ಲಿ ಪರಿಶೀಲಿಸಿ, ಬ್ಯಾಗ್‌ ಪತ್ತೆ ಮಾಡಿದರು.

ಇದನ್ನೂ ಓದಿ – ತೀರ್ಥಹಳ್ಳಿ ಮಹಿಳೆಯರಿಗೆ ಮೊದಲ ಮೂರು ಬಹುಮಾನ, ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?

ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ

ವ್ಯಾನಿಟಿ ಬ್ಯಾಗಿನಲ್ಲಿ ಅಂದಾಜು ₹18,88,000 ಮೌಲ್ಯದ ಚಿನ್ನಾಭರಣ, ₹20,400 ನಗದು ಸೇರಿ ಒಟ್ಟು  ₹19,08,400 ಮೌಲ್ಯದ ವಸ್ತುಗಳಿದ್ದವು. ಅಂದು ಸಂಜೆಯೇ ರೂಪಾ ಮತ್ತು ಅವರ ಪತಿ ಯೋಗೀಶ್ ಅವರು ಬೀರೂರು ಠಾಣೆಗೆ ಆಗಮಿಸಿದರು. ದಾಖಲೆಗಳ ಪರಿಶೀಲನೆಯ ನಂತರ, ಸುಮಾರು ವಸ್ತುಗಳನ್ನು ದಂಪತಿಗೆ ಹಸ್ತಾಂತರಿಸಲಾಯಿತು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 16, 2026

Leave a Comment