ರೈಲ್ವೆ ಸುದ್ದಿ: ಪ್ರಯಾಣಿಕರ ದಟ್ಟಣೆ ನಿವಾರಿಸಲು ದಕ್ಷಿಣ ಕರಾವಳಿ ರೈಲ್ವೆಯು ಮಚಲಿಪಟ್ಟಣಂ – ಶಿವಮೊಗ್ಗ ಟೌನ್ ಮತ್ತು ಶಿವಮೊಗ್ಗ ಟೌನ್ – ಗುಂತಕಲ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ನಡೆಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ಸಂಖ್ಯೆ 07217/07218 ಮಚಲಿಪಟ್ಟಣಂ –ಶಿವಮೊಗ್ಗ ಟೌನ್ – ಮಚಲಿಪಟ್ಟಣಂ ವಿಶೇಷ ಎಕ್ಸ್‌ಪ್ರೆಸ್ (1 ಟ್ರಿಪ್)
ರೈಲು ಸಂಖ್ಯೆ 07217 ಮಚಲಿಪಟ್ಟಣಂ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ವಿಶೇಷ ರೈಲು, ದಿನಾಂಕ ಆಗಸ್ಟ್ 30ರಂದು ಮಚಲಿಪಟ್ಟಣಂನಿಂದ ಮಧ್ಯಾಹ್ನ 3:55 ಗಂಟೆಗೆ ಹೊರಟು, ಆಗಸ್ಟ್ 31ರ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ.

ರೈಲು ಸಂಖ್ಯೆ 07218 ಶಿವಮೊಗ್ಗ ಟೌನ್–ಮಚಲಿಪಟ್ಟಣಂ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 2ರಂದು ಶಿವಮೊಗ್ಗದಿಂದ ಸಂಜೆ 5:40ಕ್ಕೆ ಹೊರಟು, ಸೆ.3ರ ಮಧ್ಯಾಹ್ನ 3:55ಕ್ಕೆ ಮಚಲಿಪಟ್ಟಣಂ ತಲುಪಲಿದೆ.
ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ಗುಡಿವಾಡ ಜಂಕ್ಷನ್, ವಿಜಯವಾಡ ಜಂಕ್ಷನ್, ಕೃಷ್ಣ ಕೆನಾಲ್ ಜಂಕ್ಷನ್, ಗುಂಟೂರು ಜಂಕ್ಷನ್, ನರಸರಾವ್ ಪೇಟೆ, ಡೊಣಕೊಂಡ, ಮಾರ್ಕಾಪುರ ರೋಡ್, ಕಂಬಂ, ಗಿದ್ದಲೂರು, ನಂದ್ಯಾಲ ಜಂಕ್ಷನ್, ಬೇತಂಚೆರ್ಲ, ಡೋಣ ಜಂಕ್ಷನ್, ಗುತ್ತಿ ಜಂಕ್ಷನ್, ಅನಂತಪುರ, ಧರ್ಮವರಂ ಜಂಕ್ಷನ್, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಹಿಂದೂಪುರ, ಯಲಹಂಕ ಜಂಕ್ಷನ್, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು ಜಂಕ್ಷನ್, ತರೀಕೆರೆ ಮತ್ತು ಭದ್ರಾವತಿ ನಿಲ್ದಾಣಗಳಲ್ಲಿ ನಿಲ್ಲಲಿದೆ.
ರೈಲು ಸಂಖ್ಯೆ 07219/07220 ಶಿವಮೊಗ್ಗ ಟೌನ್–ಗುಂತಕಲ್–ಶಿವಮೊಗ್ಗ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲು (1 ಟ್ರಿಪ್)
ರೈಲು ಸಂಖ್ಯೆ 07219 ಶಿವಮೊಗ್ಗ ಟೌನ್–ಗುಂತಕಲ್ ವಿಶೇಷ ಎಕ್ಸ್‌ಪ್ರೆಸ್ ರೈಲು, ಆಗಸ್ಟ್ 31 ರಂದು ಶಿವಮೊಗ್ಗದಿಂದ ಸಂಜೆ 5:40ಕ್ಕೆ ಹೊರಟು, ಸೆಪ್ಟೆಂಬರ್ 1ರ ಬೆಳಿಗ್ಗೆ 7 ಗಂಟೆಗೆ ಗುಂತಕಲ್ ತಲುಪಲಿದೆ.
ರೈಲು ಸಂಖ್ಯೆ 07220 ಗುಂತಕಲ್–ಶಿವಮೊಗ್ಗ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲು, ಸೆಪ್ಟೆಂಬರ್ 2ರಂದು ಗುಂತಕಲ್‌ನಿಂದ ರಾತ್ರಿ 1:45 ಗಂಟೆಗೆ ಹೊರಟು, ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಭದ್ರಾವತಿ, ತರೀಕೆರೆ, ಬೀರೂರು ಜಂಕ್ಷನ್, ಅರಸೀಕೆರೆ ಜಂಕ್ಷನ್, ತಿಪಟೂರು, ತುಮಕೂರು, ಯಲಹಂಕ ಜಂಕ್ಷನ್, ಹಿಂದೂಪುರ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಧರ್ಮವರಂ ಜಂಕ್ಷನ್, ಅನಂತಪುರ ಮತ್ತು ಗುತ್ತಿ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ವಿಶೇಷ ರೈಲುಗಳು 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 5 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಸೇರಿದಂತೆ ಒಟ್ಟು 20 ಐಸಿಎಫ್ ಬೋಗಿಗಳನ್ನು ಒಳಗೊಂಡಿರಲಿವೆ.