NEWS HIGHLIGHTS
ರೈಲ್ವೆ ಸುದ್ದಿ: ಮೈಸೂರಿನ ಡೋರ್ನಹಳ್ಳಿಯ ಸಂತ ಆಂಟೋನೀಸ್ ಬ್ಯಾಸಿಲಿಕಾ ವಾರ್ಷಿಕ ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಜೂನ್ 14ರವರೆಗೆ ಡೋರ್ನಹಳ್ಳಿ ಹಾಲ್ಟ್ ರೈಲು ನಿಲ್ದಾಣದಲ್ಲಿ ವಿವಿಧ ಎಕ್ಸ್‌ಪ್ರೆಸ್ ರೈಲುಗಳಿಗೆ ತಲಾ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ ಎಂದು ರೈಲ್ವೆ ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.
ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು
ಯಾವ್ಯಾವ ರೈಲುಗಳಿಗೆ ನಿಲುಗಡೆ ಇರಲಿದೆ?
ರೈಲು 1

ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16225): ಬೆಳಗ್ಗೆ 10:42ಕ್ಕೆ ಆಗಮಿಸಿ, 10:43ಕ್ಕೆ ಹೊರಡಲಿದೆ.
ರೈಲು 2
ಶಿವಮೊಗ್ಗ ಟೌನ್–ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16226): ಮಧ್ಯಾಹ್ನ 3:50ಕ್ಕೆ ಆಗಮಿಸಿ, 3:51ಕ್ಕೆ ಹೊರಡಲಿದೆ.
ರೈಲು 3
ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16222): ಮಧ್ಯಾಹ್ನ 2:35ಕ್ಕೆ ಆಗಮಿಸಿ, 2:36ಕ್ಕೆ ಹೊರಡಲಿದೆ.
ರೈಲು 4
ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16221): ಮಧ್ಯಾಹ್ನ 1:57ಕ್ಕೆ ಆಗಮಿಸಿ, 1:58ಕ್ಕೆ ಹೊರಡಲಿದೆ.